ಕೃಷ್ಣಮೂರ್ತಿಗಳನ್ನು ನೆನೆದಾಗಲೆಲ್ಲ ನನಗೆ ಎದ್ದುತೋರುವುದು ಅವರ ಧರ್ಮಪ್ರಜ್ಞೆ. ಅರ್ಥ-ಕಾಮಗಳ ಕೋಲಾಹಲ ಸ್ವಲ್ಪವೂ ಇರದ ಈ ಧರ್ಮಪ್ರಜ್ಞೆಯು ನಿಶ್ಚಿತವಾಗಿ ಮೋಕ್ಷೈಕಗಾಮಿ. ಚಿಕ್ಕ ವಯಸ್ಸಿನಿಂದ ಅವರು ಆಚಾರ-ಪ್ರಾಯಶ್ಚಿತ್ತಗಳ ಮೂಲಕ ಮೈಗೂಡಿಸಿಕೊಂಡಿದ್ದ ಸತ್ತ್ವಾಭಿಮುಖತೆ ಸಾಹಿತ್ಯಸಂಸ್ಕಾರದ ಮೂಲಕ ಮತ್ತಷ್ಟು ಪಾಕಗೊಂಡಿತೆನ್ನಬೇಕು. ಮುಂದೆ ಕಾನೂನನ್ನು ಓದುವಾಗ, ಉದ್ಯೋಗ ನಿರ್ವಹಿಸುವಾಗ ಧರ್ಮಕ್ಕಿರುವ ದಂಡ-ವ್ಯವಹಾರಗಳೆಂಬ ಮತ್ತೆರಡು ಪಾದಗಳನ್ನು ಹತ್ತಿರದಲ್ಲಿ ಕಾಣುವ ಅವಕಾಶವಾಯಿತು. ಹೀಗಾಗಿ ಅವರ ಜೀವನವಿಡೀ ನಾಲ್ಕು ಪಾದಗಳುಳ್ಳ ಧರ್ಮದ ಹಲವು ತೆರನಾದ...
ಕಾಳಿದಾಸ ಅವರಿಗೆ ಪರಮಾರಾಧ್ಯನಾದ ಕವಿ. ಆತನ ರಘುವಂಶವನ್ನು ಸಾಂಗೋಪಾಂಗವಾಗಿ ಅವರು ಅನೇಕವರ್ಷಗಳ ಕಾಲ ಆಸಕ್ತರಿಗೆ ಪಾಠ ಹೇಳುತ್ತಿದ್ದರು. ಅವರು ಅಭಿಜ್ಞಾನಶಾಕುಂತಲವನ್ನು ಸಹಜವಾಗಿಯೇ ತುಂಬ ಮೆಚ್ಚಿಕೊಂಡಿದ್ದರು. ಇದನ್ನು ಕುರಿತು ಉಕ್ತಲೇಖನಕ್ರಮದಲ್ಲಿ ಒಂದು ಪ್ರಬಂಧವನ್ನು ತೆಲುಗಿನಲ್ಲಿ ಬರೆಸಿದ್ದರು. “ಅದ್ಭುತಶಿಲ್ಪಂಲೋ ಆರ್ಷಸಂದೇಶಂ” ಎಂಬ ಈ ಬರೆಹವನ್ನು ನಾನು ಹಸ್ತಪ್ರತಿಯಲ್ಲಿಯೇ ಓದಿದ್ದೆ. ಇದು ಕಾಳಿದಾಸನ ರೂಪಕದ ಹತ್ತಾರು ಸ್ವಾರಸ್ಯಗಳನ್ನು ಸೊಗಸಾಗಿ ವಿವರಿಸಿ ಅಲ್ಲಿಯ ಪುರುಷಾರ್ಥತತ್ತ್ವವನ್ನು ಹೃದ್ಯವಾಗಿ ನಿರೂಪಿಸಿತ್ತು. ಇದಕ್ಕೆ ಮುದ್ರಣಯೋಗ...
ಈ ಎಲ್ಲ ಹಿನ್ನೆಲೆಯ ಕಾರಣ ಕೃಷ್ಣಮೂರ್ತಿಗಳು ಚಿಕ್ಕ ವಯಸ್ಸಿಗೇ ಕಾವ್ಯರಚನೆಗೆ ತೊಡಗಿದ್ದು ಸಹಜವಾದ ಬೆಳೆವಣಿಗೆ. “ದಾನಯಜ್ಞಮು” ಎಂಬ ಖಂಡಕಾವ್ಯವನ್ನೂ “ಶ್ರೀವಿಲಾಸಮು” ಎಂಬ ಶತಕವನ್ನೂ “ತ್ಯಾಗಶಿಲ್ಪಮು” ಎಂಬ ಮತ್ತೊಂದು ಖಂಡಕಾವ್ಯವನ್ನೂ ಅವರು ತೆಲುಗಿನಲ್ಲಿ ರಚಿಸಿದ್ದಾರೆ. ತಮ್ಮ ಸಂತೋಷಕ್ಕೆಂದೇ ಬರೆದುಕೊಂಡ ಕಾರಣ ಅನೇಕವರ್ಷಗಳ ಕಾಲ ಇವು ಪ್ರಕಟವಾಗಿರಲಿಲ್ಲ. ದಾನಯಜ್ಞವು ಮಹಾಭಾರತದ ಆಶ್ವಮೇಧಿಕಪರ್ವದಲ್ಲಿ ಬರುವ ನಕುಲೋಪಾಖ್ಯಾನವನ್ನು ಆಧರಿಸಿದೆ. ಶ್ರೀವಿಲಾಸವು ತನ್ನ ಹೆಸರಿನಿಂದಲೇ ತಿಳಿಯುವಂತೆ ಲಕ್ಷ್ಮಿಯ ಸ್ತುತಿ. ಇದು ಲಕ್ಷ್ಮಿಯನ್ನು ಕೇವಲ ಹಣಕಾಸುಗಳ...
ಇನ್ನೊಮ್ಮೆ ನಿಮ್ಹಾನ್ಸ್ ಸಂಸ್ಥೆಯವರು ಅವಧಾನಕಾಲದ ಮನೋವ್ಯಾಪಾರಗಳನ್ನು ತಿಳಿಯಲೆಂದು ರಾಜ್ಯೋತ್ಸವದ ಅಂಗವಾಗಿ ನನ್ನ ಅವಧಾನವನ್ನು ಆಯೋಜಿಸಿದ್ದರು. ಇದಕ್ಕೂ ಕೃಷ್ಣಮೂರ್ತಿಗಳೇ ಸೂತ್ರಧಾರರು. ನಿಮ್ಹಾನ್ಸ್ ಸಂಸ್ಥೆಯ ರೋಗಿಗಳನ್ನು ಕರೆದೊಯ್ಯುವ ದೊಡ್ಡ ಬಿಳಿಯ ವ್ಯಾನಿನಲ್ಲಿ ಪೃಚ್ಛಕರೊಡನೆ ಅಲ್ಲಿಗೆ ಹೊತ್ತಿಗೆ ಮುನ್ನವೇ ತಲುಪಿದ್ದಾಯಿತು. ವೇದಿಕೆಯ ಮುಂದೆ ಸಾಕಷ್ಟು ಜನರಿದ್ದರೂ ಒಬ್ಬರ ಮುಖದಲ್ಲಿ ಕೂಡ ಸ್ಪಂದನವಿರಲಿಲ್ಲ. ಇಂಥವರಿಗೆ ಹೇಗೆ ತಾನೆ ಅವಧಾನದಂಥ ಅಭಿಜಾತಕಲೆಯನ್ನು ಮುಟ್ಟಿಸುವುದೆಂಬ ಚಿಂತೆ ನನಗಾದರೆ, ಲಂಕಾ ಕೃಷ್ಣಮೂರ್ತಿಯವರು ನಿಶ್ಚಿಂತರಾಗಿ...
ಅವಧಾನ ಮರುದಿನ ಸಂಜೆ ಏರ್ಪಾಟಾಗಿತ್ತು. ಹೀಗಾಗಿ ಹಿಂದಿನ ದಿನವೆಲ್ಲ ನಮಗೆ ಬಿಡುವಿತ್ತು. ಹತ್ತಿರದ ಕೆಳದಿ, ಇಕ್ಕೇರಿ, ಬನವಾಸಿ ಮುಂತಾದ ಕ್ಷೇತ್ರಗಳಿಗೆಲ್ಲ ಶರ್ಮರು ನಮ್ಮನ್ನು ಕರೆದೊಯ್ದರು. ಎಲ್ಲೆಲ್ಲೂ ಸುಗ್ರಾಸವಾದ ಹವ್ಯಕಭೋಜನ ಸ್ವಾಗತಿಸುತ್ತಿತ್ತು. ರಾತ್ರಿ ಹೊಸಬಾಳೆಯಲ್ಲಿ ಗಮಕಿ ಸೀತಾರಾಮರಾಯರ ಮನೆಯಲ್ಲಿ ಉಳಿದದ್ದಾಯಿತು. ಅವರು ಶರ್ಮರ ಬಂಧುಗಳೂ ಹೌದು. ಜಗಲಿಯ ಮೇಲೆ ಪದ್ಮನಾಭನ್ ಅವರು ಮಲಗಿದರು. ಅವರ ಇರ್ಕೆಲಗಳಲ್ಲಿ ಕೃಷ್ಣಮೂರ್ತಿಗಳಿಗೂ ರಂಗನಾಥಶರ್ಮರಿಗೂ ಹಾಸಿಗೆ ಹಾಸಿತ್ತು. ನಾನು ಈ ಹಿರಿಯರಿಂದ ಸಾಕಷ್ಟು ದೂರದಲ್ಲಿ ಮಲಗಿದ್ದೆ. ದಿನವಿಡೀ...
ಕೋಲಾರದ ಅವಧಾನದಿಂದ ಮೊದಲ್ಗೊಂಡು ನನಗೆ ಕೃಷ್ಣಮೂರ್ತಿಯವರ ಈ ಮುಖ ಚೆನ್ನಾಗಿ ಕಾಣತೊಡಗಿತ್ತು.
ಕೃಷ್ಣಮೂರ್ತಿಗಳ ಪೃಚ್ಛಕತ್ವದ ಮತ್ತೊಂದು ಉದಾರಮುಖವೆಂದರೆ ಅವಧಾನಿಯ ಶಕ್ತಿ-ಸಾಮರ್ಥ್ಯಗಳನ್ನೂ ಸಭಾಸದರ ಅಭಿರುಚಿಯನ್ನೂ ಗಮನಿಸಿಕೊಂಡು ಸಮಸ್ಯಾಪೂರಣಾದಿಗಳಲ್ಲಿ ಹಲವು ಆಯ್ಕೆಗಳನ್ನು ಕೊಡುತ್ತಿದ್ದುದು. ಅವರ ಪರಿಚಯವಾದ ಬಳಿಕ ನಾನು ಮಾಡಿದ ಒಂದು ಸಂಪೂರ್ಣಸಂಸ್ಕೃತ ಅವಧಾನದಲ್ಲಿ ಸಮಸ್ಯಾಪೂರಣಕ್ಕೆಂದು ಅವರು ನಿಯುಕ್ತರಾಗಿದ್ದರು. ಕಾರ್ಯಕ್ರಮವು ಸಂಸ್ಕೃತಭಾರತಿಯ ವತಿಯಿಂದ ಬೆಂಗಳೂರಿನ ಕೇಶವಕೃಪಾ-ಸಭಾಂಗಣದಲ್ಲಿ ಏರ್ಪಾಟಾಗಿತ್ತು. ನಿಷೇಧಾಕ್ಷರವನ್ನು ರಂಗನಾಥಶರ್ಮರು...
ನನ್ನ ಹೆಚ್ಚಿನ ಮಾತೆಲ್ಲ ಸಹಜವಾಗಿ ಅವಧಾನ, ಅವಧಾನಿ ಮತ್ತು ಅವಧಾನಕವಿತೆಗಳ ಸುತ್ತಲೇ ಸುಳಿಸುತ್ತುತ್ತಿತ್ತು. ಪ್ರಾಯಶಃ ಇದರಿಂದ ಅವರಿಗೆ ನನ್ನ ಉತ್ಕಟಾಸಕ್ತಿಯ ಅರಿವಾಗಿ ಉಲ್ಲಾಸದಿಂದ ತಮ್ಮ ಅನುಭವಗಳನ್ನೂ ವ್ಯಾಸಂಗದ ಸಂಗತಿಗಳನ್ನೂ ಹೇಳತೊಡಗಿದರು. ಮಾತ್ರವಲ್ಲ, ತಿರುಪತಿ ವೇಂಕಟಕವಿಗಳು, ಗಾಡೇಪಲ್ಲಿ ವೀರರಾಘವಶಾಸ್ತ್ರಿ, ಗೌರಿಪೆದ್ದಿ ರಾಮಸುಬ್ಬಶರ್ಮಾ, ನರಾಲ ರಾಮಿರೆಡ್ಡಿ ಮುಂತಾದ ಅವಧಾನಿಗಳ ಪ್ರಸ್ತಾವಕ್ಕೆ ತೊಡಗಿದರು. ನನಗೆ ಇವರ ಪೈಕಿ ಕೆಲವರನ್ನುಳಿದರೆ ಮಿಕ್ಕವರ ವಿವರಗಳು ಸ್ವಲ್ಪವೂ ತಿಳಿದಿರಲಿಲ್ಲ. ಅಗ ತಮ್ಮಲ್ಲಿರುವ ಕೆಲವೊಂದು ಪುಸ್ತಿಕೆಗಳನ್ನು...
ನಾನು ಮತ್ತೆ ಮತ್ತೆ ನೆನೆಯುವ ಮಹನೀಯರ ಪೈಕಿ ಶ್ರದ್ಧೇಯರಾದ ಲಂಕಾ ಕೃಷ್ಣಮೂರ್ತಿಯವರೂ ಒಬ್ಬರು. ಸತ್ಯನಿಷ್ಠೆ, ಪ್ರತಿಷ್ಠಾಪರಾಙ್ಮುಖತೆ, ಸಮಾಜಸೇವೆ, ಸಾಹಿತ್ಯ-ಸಂಸ್ಕೃತಿಗಳ ಸಕ್ರಿಯಾರಾಧನೆಗಳನ್ನು ಕುರಿತ ಯಾವ ಪ್ರಸ್ತಾವ ಬಂದಾಗಲೂ ನನಗೆ ತತ್ಕ್ಷಣ ನೆನಪಾಗುವುದು ಲಂಕಾ ಕೃಷ್ಣಮೂರ್ತಿಗಳ ವ್ಯಕ್ತಿತ್ವ-ಕೃತಿತ್ವಗಳೇ. ನನ್ನ ಸ್ವಭಾವಕ್ಕಿಂತ ಅವರದ್ದು ಅದೆಷ್ಟೋ ಬಗೆಯಲ್ಲಿ ಭಿನ್ನ ಮತ್ತು ಸಮುನ್ನತ. ವಯಸ್ಸು, ತಪಸ್ಸು, ಅನುಭವಗಳ ದೃಷ್ಟಿಯಿಂದಲಂತೂ ನನಗೂ ಅವರಿಗೂ ಅಜ-ಗಜಾಂತರ. ಇಂತಿದ್ದರೂ ಅವರು ನನ್ನನ್ನು ಪ್ರೀತಿಯಿಂದ ಆದರಿಸಿದರು, ವಾತ್ಸಲ್ಯದಿಂದ...