अलङ्कारसुधानिधिः—ग्रन्थविस्तरः तद्विमर्शश्च
४. ग्रन्थविस्तरः तद्विमर्शश्च
ग्रन्थेऽस्मिन् प्रतिपादितानि शास्त्रप्रमेयाणि विषयानुक्रमण्यां साकल्येन निरूपितानि। अत्र केवलं केचन विशिष्टा विषयाः सङ्गृह्य प्रतिपाद्यन्ते।
ग्रन्थेऽस्मिन् प्रतिपादितानि शास्त्रप्रमेयाणि विषयानुक्रमण्यां साकल्येन निरूपितानि। अत्र केवलं केचन विशिष्टा विषयाः सङ्गृह्य प्रतिपाद्यन्ते।
यदा हि उपात्तविद्यो द्वितीयः सङ्गमः स्वयं राज्यधुराम् अवोढ तदा सारस्वतानि कार्याणि निर्वर्तयितुं सायणाचार्येण पर्याप्तः अवसरोऽलम्भि। तथा हि उदयगिरिस्थितेन तेन १३५५ वर्षस्य १३६५ वर्षस्य चान्तराले विद्यमाने संवत्सराणां दशके अलङ्कारसुधानिधिः प्रणीत इति प्रतीमः॥
अलङ्कारसुधानिधिः श्रौत्रार्हन्तीचणेन वेदभाष्यकृता तत्रभवता श्रीसायणाचार्येण विरचितो ग्रन्थः। काव्यमीमांसां विशदयतानेन कारिका-वृत्ति-उदाहरणपद्यात्मकः साम्प्रदायिकः समश्रायि सन्दर्भणक्रमः। सायणाचार्यानुजेन भोगनाथेन प्रणीतान्यत्रत्यानि सम्यञ्चि उदाहरणपद्यानि ग्रन्थकर्तुरनितरसाधारणं मनोवाक्कायपटिमानं परिचाययन्ति, विजयनगरसाम्राज्यसम्बद्धान् नैकान् विशिष्टान् विषयान् अभिव्यञ्जयन्ति च। आनन्दवर्धनोद्घाटितेन विवेकवीध्रेण शास्त्रवर्त्मना क्रममाणः सायणाचार्यः स्वीयं सिद्धान्तं प्रतिपिपादयिषुः काव्यप्रकाश-साहित्यचूडामणि-दशरूपकप्रभृतीन् ग्रन्थान् अन्वसार्षीत्। अलङ्कारशास्त्रगतानि प्रमुखाणि प्रमेयाणि सम्
ನೈಷಧೀಯಚರಿತವು ಸಂಸ್ಕೃತಸಾಹಿತ್ಯದ ವಿದ್ವತ್ತೆಯ, ವಿದ್ಯಾಸ್ಪರ್ಧೆಯ, ಚಮತ್ಕಾರಪಾರಮ್ಯದ ಯುಗದ ಅಪ್ರತಿಮ ಪ್ರತಿನಿಧಿ. ವ್ಯಾಸ-ವಾಲ್ಮೀಕಿಗಳ ಮಹಾಕೃತಿಗಳಲ್ಲಿ ಕಂಡುಬರುವ ಕಥೆ-ಪಾತ್ರಗಳ ಆಳ-ಅಗಲಗಳನ್ನಾಗಲಿ, ಜೀವನಮೌಲ್ಯಗಳ ಸಹಜಗಂಭೀರ ಶೋಧನೆಯನ್ನಾಗಲಿ, ಅಕೃತಕವೂ ಉದಾರಮನೋಹರವೂ ಆದ ವಾಗ್ವಿಲಾಸವನ್ನಾಗಲಿ ಇದರಲ್ಲಿ ಕಾಣಲು ಬಯಸಿದರೆ ನಮಗೆ ನಿರಾಶೆಯಾಗದಿರದು. ಆ ಬಗೆಯ ದೃಷ್ಟಿ ಎಷ್ಟೇ ಉನ್ನತವಾಗಿದ್ದರೂ ಇಂಥ ಕಾವ್ಯಗಳ ಮಟ್ಟಿಗೆ ಅದನ್ನು ಅಳವಡಿಸಿಕೊಂಡರೆ ನಮಗೆ ಬೇರೊಂದು ಬಗೆಯ ನಷ್ಟವೇ ಎದುರಾಗುತ್ತದೆ. ಇದೇ ರೀತಿ ಭಾಸ, ಶೂದ್ರಕ, ಕಾಳಿದಾಸ, ಭರ್ತೃಹರಿ, ವಿಶಾಖದತ್ತರಂಥ ಅಭಿಜಾತ ಕವಿಗಳ ಕೃತಿಗಳೊಡನೆ ನೈಷಧೀಯವನ್ನು ಹೋಲಿಸಿ ನೋಡಿದಾಗ ಅಪ್ಪಟ ಸಹೃದಯರಿಗೆ ಬೇಸರವಾಗದಿರದು. ಹಾಗೆಂದು ವಿದ್ಯಾವಿದಗ್ಧರಿಗೆ ಅತ್ಯುತ್ಸಾಹವೂ ಮೂಡದಿರದು.
ಯಾವ ಜೀವಿಗಾಗಲಿ ಬೇಕಾಗಿರುವ ದುಃಖನಿವೃತ್ತಿ ಮತ್ತು ಸುಖಪ್ರಾಪ್ತಿಗಳು ಶಾಶ್ವತವಾಗಿ ಮೋಕ್ಷದಿಂದ ದೊರೆತರೂ ತಾತ್ಕಾಲಿಕವಾಗಿ ಕಲಾಸ್ವಾದದ ಮೂಲಕವೂ ಪಡೆಯಬಹುದೆಂದು ಲೋಕಾನುಭವವೇದ್ಯ. ಇದೇ ಮೂಲಪ್ರವೃತ್ತಿಯು ಮಾನವಚರಿತ್ರೆಯಲ್ಲಿ ಕಲೆಯ ಬೆಳೆವಳಿಗೆಗೂ ಕಾರಣವಾಗಿದೆ. ಕಲೆಯ ಕವಲುಗಳು ಹಲವಾದರೂ ಕಲಾಸ್ವಾದದ ತಿರುಳನ್ನೂ ಹುರುಳನ್ನೂ ರಸ-ಸಿದ್ಧಾಂತದ ಮೂಲಕ ಸೆರೆ ಹಿಡಿಯುವಲ್ಲಿ ಭಾರತೀಯಸೌಂದರ್ಯಮೀಮಾಂಸಕರು ಸಮರ್ಥರಾಗಿದ್ದಾರೆ.
ಶ್ರೀಹರ್ಷ ಹನ್ನೆರಡನೆಯ ಶತಮಾನದಲ್ಲಿದ್ದ ವಿದ್ವತ್ಕವಿ. ಅಂದಿನ ಕಾನ್ಯಕುಬ್ಜವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದ ಗಾಹಡವಾಲ ರಾಜಪುತ್ರರ ವಂಶದ ಜಯಚಂದ್ರ ಅಥವಾ ಜಯಂತಚಂದ್ರನ (೧೧೬೯-೧೧೯೫) ಆಸ್ಥಾನಕವಿ ಈತ. ಇವನ ಮೂಲಸ್ಥಳ ಯಾವುದೆಂಬ ವಿಷಯದಲ್ಲಿ ಏಕಾಭಿಪ್ರಾಯವಿಲ್ಲ. ಉತ್ತರಭಾರತಕ್ಕೆ ಸೇರಿದವನೆಂಬುದಂತೂ ನಿರ್ವಿವಾದ. ಆದರೆ ಬಂಗಾಳದವನೋ ಕಾಶ್ಮೀರದವನೋ ಅಥವಾ ಕಾನ್ಯಕುಬ್ಜದವನೋ ಎಂದು ನಿಶ್ಚಯವಾಗಿ ತಿಳಿಯುತ್ತಿಲ್ಲ. ಈ ಎಲ್ಲ ಪ್ರದೇಶಗಳಿಗೆ ಸೇರಿದ್ದಿರಬಹುದೆಂಬುದಕ್ಕೆ ಅಷ್ಟಿಷ್ಟು ಆಧಾರಗಳನ್ನು ಇವನ ಕಾವ್ಯದಲ್ಲಿ ಕಾಣಬಹುದು. ಒಟ್ಟಿನಲ್ಲಿ ಶ್ರೀಹರ್ಷ ನಮ್ಮ ಹೆಮ್ಮೆಯ ಕವಿ. ಈತನ ತಂದೆ ಹೀರಪಂಡಿತ ಅಥವಾ ಶ್ರೀಹೀರ. ತಾಯಿ ಮಾಮಲ್ಲದೇವಿ.
ಭರತನು ಹೇಳುವ ಮೂವತ್ತಾರು ಲಕ್ಷಣಗಳನ್ನು ವಿವರಿಸುವಾಗ ಅಭಿನವಗುಪ್ತನು ಇವಕ್ಕೂ ಅರ್ಥಾಲಂಕಾರಗಳಿಗೂ ಇರುವ ಸಂಬAಧವನ್ನು ವಿಸ್ತರಿಸುತ್ತ ತೌತನ ಮತವನ್ನು ಹೀಗೆ ಸಂಗ್ರಹಿಸಿದ್ದಾನೆ:
ನ ಭಾಷಾನಿಯಮಃ ಪಾತ್ರೇ ಕಾವ್ಯೇ ಸ್ಯಾತ್ ಸೈಂಧವೀಮಿತಿ || (ಅಭಿನವಭಾರತೀ, ಸಂ. ೪, ಪು. ೨೭೮)
ಪಾತ್ರದಲ್ಲಿ ಭಾಷೆಯ ನಿಯಮ ಇಲ್ಲ. ಕಾವ್ಯದಲ್ಲಿ ಅದು ಸೈಂಧವೀ ಎಂದಾಗಬಹುದು.
ವಿಷಯಾಭಾವತೋ ನಾತ್ರ ರಾಗಸ್ಯಾಭ್ಯಾಸಗಾಢತಾ |
ಸ್ಥಾಯೀ ಚೇದ್ವಿಷಯೋ ನೈವಮಾಸ್ವಾದಸ್ಯ ಸ ಗೋಚರಃ ||
ಆಸ್ವಾದ ಏವ ರಾಗಶ್ಚೇನ್ನ ರಾಗೋ ಯೋಷಿದಾಸ್ಪದಃ |
ಕಾರ್ಯಾತ್ಕಾರಣದೋಷಶ್ಚೇತ್ಕಿಂ ಸೀತಾ ವಿಷಯೋ ದ್ವಯೋಃ ||
ಯಥಾದರ್ಶಾನ್ಮಲೇನೈವ ಮಲಮೇವೋಪಹನ್ಯತೇ |
ತಥಾ ರಾಗಾವಬೋಧೇನ ಪಶ್ಯತಾಂ ಶೋಧ್ಯತೇ ಮನಃ ||