Literature

‘ಕಾವ್ಯಕೌತುಕ’ದ ಶಕಲಗಳು - 7

ಭರತನು ಹೇಳುವ ಮೂವತ್ತಾರು ಲಕ್ಷಣಗಳನ್ನು ವಿವರಿಸುವಾಗ ಅಭಿನವಗುಪ್ತನು ಇವಕ್ಕೂ ಅರ್ಥಾಲಂಕಾರಗಳಿಗೂ ಇರುವ ಸಂಬAಧವನ್ನು ವಿಸ್ತರಿಸುತ್ತ ತೌತನ ಮತವನ್ನು ಹೀಗೆ ಸಂಗ್ರಹಿಸಿದ್ದಾನೆ:

‘ಕಾವ್ಯಕೌತುಕ’ದ ಶಕಲಗಳು - 6

ಸಾಹಿತ್ಯಕೃತಿಗಳ ಭಾಷೆ

ನ ಭಾಷಾನಿಯಮಃ ಪಾತ್ರೇ ಕಾವ್ಯೇ ಸ್ಯಾತ್ ಸೈಂಧವೀಮಿತಿ || (ಅಭಿನವಭಾರತೀ, ಸಂ. ೪, ಪು. ೨೭೮)

ಪಾತ್ರದಲ್ಲಿ ಭಾಷೆಯ ನಿಯಮ ಇಲ್ಲ. ಕಾವ್ಯದಲ್ಲಿ ಅದು ಸೈಂಧವೀ ಎಂದಾಗಬಹುದು.

‘ಕಾವ್ಯಕೌತುಕ’ದ ಶಕಲಗಳು - 5

ಕಲೆಯ ಸಮರ್ಥನೆ

ವಿಷಯಾಭಾವತೋ ನಾತ್ರ ರಾಗಸ್ಯಾಭ್ಯಾಸಗಾಢತಾ |

ಸ್ಥಾಯೀ ಚೇದ್ವಿಷಯೋ ನೈವಮಾಸ್ವಾದಸ್ಯ ಸ ಗೋಚರಃ ||

ಆಸ್ವಾದ ಏವ ರಾಗಶ್ಚೇನ್ನ ರಾಗೋ ಯೋಷಿದಾಸ್ಪದಃ |

ಕಾರ್ಯಾತ್ಕಾರಣದೋಷಶ್ಚೇತ್ಕಿಂ ಸೀತಾ ವಿಷಯೋ ದ್ವಯೋಃ ||

ಯಥಾದರ್ಶಾನ್ಮಲೇನೈವ ಮಲಮೇವೋಪಹನ್ಯತೇ |

ತಥಾ ರಾಗಾವಬೋಧೇನ ಪಶ್ಯತಾಂ ಶೋಧ್ಯತೇ ಮನಃ ||

‘ಕಾವ್ಯಕೌತುಕ’ದ ಶಕಲಗಳು - 4

ರಸಾನುಭವದ ಅಲೌಕಿಕತೆ ಮತ್ತು ಅಧ್ಯಾತ್ಮನಿಷ್ಠೆಗಳನ್ನು ಎತ್ತಿಹಿಡಿದ ಆಲಂಕಾರಿಕರಲ್ಲಿ ಭಟ್ಟತೌತನು ಅಗ್ರಗಣ್ಯ. ಅವನದೆಂದು ಭಾವಿಸಲಾದ ಎರಡು ಶ್ಲೋಕಗಳಲ್ಲಿ ಈ ಭಾವ ಸೊಗಸಾಗಿ ಹರಳುಗಟ್ಟಿದೆ:

ಪಾಠ್ಯಾದಥ ಧ್ರುವಾಗಾನಾತ್ತತಃ ಸಂಪೂರಿತೇ ರಸೇ |

ತದಾಸ್ವಾದಭರೈಕಾಗ್ರೋ ಹೃಷ್ಯತ್ಯಂತರ್ಮುಖಃ ಕ್ಷಣಮ್ ||

ತತೋ ನಿರ್ವಿಷಯಸ್ಯಾಸ್ಯ ಸ್ವರೂಪಾವಸ್ಥಿತೌ ನಿಜಃ |

ವ್ಯಜ್ಯತೇ ಹ್ಲಾದನಿಷ್ಯಂದೋ ಯೇನ ತೃಪ್ಯಂತಿ ಯೋಗಿನಃ ||[1] (ವ್ಯಕ್ತಿವಿವೇಕ, ಪು. ೯೪)

‘ಕಾವ್ಯಕೌತುಕ’ದ ಶಕಲಗಳು - 3

ಕಾವ್ಯ-ನಾಟ್ಯ

ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ |

ತೇಷಾಮೇವ ಪ್ರಯೋಗಸ್ತು ನಾಟ್ಯಂ ಗೀತಾದಿರಂಜಿತಮ್ || (ವ್ಯಕ್ತಿವಿವೇಕ, ಪು. ೯೬)

ಪ್ರಯೋಗತ್ವಮನಾಪನ್ನೇ ಕಾವ್ಯೇ ನಾಸ್ವಾದಸಂಭವಃ ||

ವರ್ಣನೋತ್ಕಲಿಕಾಭೋಗಪ್ರೌಢೋಕ್ತ್ಯಾ[1] ಸಮ್ಯಗರ್ಪಿತಾಃ |

ಉದ್ಯಾನಕಾಂತಾಚಂದ್ರಾದ್ಯಾ ಭಾವಾಃ ಪ್ರತ್ಯಕ್ಷವತ್ ಸ್ಫುಟಾಃ || (ಅಭಿನವಭಾರತೀ, ಸಂ. ೧, ಪು. ೨೯೧-೯೨)

‘ಕಾವ್ಯಕೌತುಕ’ದ ಶಕಲಗಳು - 2

ಕವಿ-ಕಾವ್ಯ

ನಾನೃಷಿಃ ಕವಿರಿತ್ಯುಕ್ತಮೃಷಿಶ್ಚ ಕಿಲ ದರ್ಶನಾತ್ |

ವಿಚಿತ್ರಭಾವಧರ್ಮಾಂಶತತ್ತ್ವಪ್ರಖ್ಯಾ ಚ ದರ್ಶನಮ್ ||

ಸ ತತ್ತ್ವದರ್ಶನಾದೇವ ಶಾಸ್ತ್ರೇಷು ಪಠಿತಃ ಕವಿಃ |

ದರ್ಶನಾದ್ವರ್ಣನಾಚ್ಚಾಥ ರೂಢಾ ಲೋಕೇ ಕವಿಶ್ರುತಿಃ ||

ತಥಾ ಹಿ ದರ್ಶನೇ ಸ್ವಚ್ಛೇ ನಿತ್ಯೇಽಪ್ಯಾದಿಕವೇರ್ಮುನೇಃ |

ನೋದಿತಾ ಕವಿತಾ ಲೋಕೇ ಯಾವಜ್ಜಾತಾ ನ ವರ್ಣನಾ || (ಕಾವ್ಯಾನುಶಾಸನ, ಪು. ೪೩೨)

‘ಕಾವ್ಯಕೌತುಕ’ದ ಶಕಲಗಳು - 1

ಭಾರತೀಯ ಕಾವ್ಯಮೀಮಾಂಸೆ ಮತ್ತು ಕಲಾಮೀಮಾಂಸೆಗಳ ಕ್ಷೇತ್ರದಲ್ಲಿ ಭಟ್ಟತೌತನ ಹೆಸರು ಅಜರಾಮರ.[1] ಕಾಶ್ಮೀರದಲ್ಲಿ ಬಾಳಿ ಬೆಳಗಿದ ಈ ವಿದ್ವದ್ವಿಭೂತಿ ಒಂಬತ್ತು-ಹತ್ತನೆಯ ಶತಮಾನಗಳ ಆಸುಪಾಸಿನಲ್ಲಿ ಇದ್ದವನೆಂದು ತಿಳಿದುಬರುತ್ತದೆ. ಈತನ ‘ಕಾವ್ಯಕೌತುಕ’ದ ಹೊರತಾಗಿ ಮತ್ತಾವ ಗ್ರಂಥದ ಕುರುಹೂ ನಮಗೆ ಉಳಿದಿಲ್ಲ. ಇದಾದರೂ ನಮಗಿಂದು ಸಿಕ್ಕಿಲ್ಲ. ಕೇವಲ ಅವರಿವರು ಉದ್ಧರಿಸುವ ಶ್ಲೋಕಭಾಗಗಳಿಂದ ನಮಗೆ ಈ ಕೃತಿಯ ಮಹತ್ತ್ವ ತಿಳಿಯುತ್ತಿದೆ.[2] ಹೀಗೆ ತಿಳಿದಾಗ ನಾವೆಂಥ ಅದ್ಭುತ ಶಾಸ್ತ್ರನಿಧಿಯನ್ನು ಕಳೆದುಕೊಂಡೆವೆಂಬ ದುಃಖ ಉಮ್ಮಳಿಸಿ ಬರದಿರದು.

ಹೇಮಚಂದ್ರನ ‘ಕಾವ್ಯಾನುಶಾಸನ’ - 2

ಕಾವ್ಯಾನುಶಾಸನದ ಕೆಲವು ವೈಶಿಷ್ಟ್ಯಗಳು

ಗ್ರಂಥಗತ ವಿಷಯಗಳನ್ನು ಪರಿಚಯಿಸಿಕೊಂಡ ಬಳಿಕ ಇಲ್ಲಿಯ ಕೆಲವು ವೈಶಿಷ್ಟ್ಯಗಳನ್ನೂ ಅಲಂಕಾರಶಾಸ್ತ್ರದಲ್ಲಿ ಇದರ ಸ್ಥಾನವನ್ನೂ ಅರಿಯಲು ತೊಡಗಬಹುದು.

ಹೇಮಚಂದ್ರನ ‘ಕಾವ್ಯಾನುಶಾಸನ’ - 1

ಜ್ಞಾನಕ್ಕೆ ಯಾವುದೇ ಎಲ್ಲೆ ಇಲ್ಲ. ಅದರಲ್ಲಿ ಪ್ರತ್ಯೇಕ ವಿಭಾಗಗಳನ್ನು ಕಲ್ಪಿಸುವುದು ನಮ್ಮ ಅನುಕೂಲತೆಗಾಗಿ, ನಮ್ಮ ಇತಿ-ಮಿತಿಗಳಿಗೆ ಅನುಸಾರವಾಗಿ. ಲೋಕಸಾಮಾನ್ಯದ ಸ್ಥಿತಿ ಹೀಗಿದ್ದರೂ ಕೆಲವರು ಮಹನೀಯರು ಜ್ಞಾನವನ್ನು ಅಖಂಡವಾಗಿ ಗ್ರಹಿಸಿ ಅದರ ಅನೇಕ ಶಾಖೆಗಳಲ್ಲಿ ಪರಿಶ್ರಮಿಸಿ ಪರಿಣತಿಯನ್ನು ಪಡೆಯುತ್ತಾರೆ. ಭುವನದ ಭಾಗ್ಯ ಎನಿಸುವ ಈ ಬಗೆಯ ಹಲವರು ಪ್ರಾಜ್ಞರು ಪ್ರಾಚೀನ ಭಾರತದಲ್ಲಿ ಜನ್ಮ ತಳೆದಿದ್ದುದು ನಮ್ಮ ಹೆಮ್ಮೆ. ಆಚಾರ್ಯ ಹೇಮಚಂದ್ರ ಸೂರಿ ಈ ಸಾಲಿನಲ್ಲಿ ಮೊದಲಿಗೇ ಸಲ್ಲುವನು. ವಿದ್ಯಾಜಗತ್ತು ಈತನನ್ನು ‘ಕಲಿಕಾಲಸರ್ವಜ್ಞ’ ಎಂದು ಗೌರವಿಸಿದೆ.