Literature

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 4

{ವಂಶಸ್ಥ} ವಂಶಸ್ಥದ ಛಂದೋವಿನ್ಯಾಸವನ್ನು ಗಮನಿಸಿದಾಗ ನಾಲ್ಕು ಗಣಗಳನ್ನುಳ್ಳ ಇದರ ಮೊದಲ ಹಾಗೂ ಕಡೆಯ ಗಣಗಳು ಪ್ರತೀಪರೂಪದವೆಂದು ತಿಳಿಯುತ್ತದೆ. ಅಂದರೆ, ಮೊದಲಿಗೆ ಎರಡು ಲಘುಗಳ ನಡುವಣ ಗುರುವೊಂದನ್ನುಳ್ಳ ಜ-ಗಣ ಬಂದಿದ್ದರೆ ಕಡೆಗೆ ಎರಡು ಗುರುಗಳ ನಡುವಣ ಲಘುವೊಂದನ್ನುಳ್ಳ ರ-ಗಣವಿದೆ: 

[u – u] – – u u – u [– u –]

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 3

ಈವರೆಗೆ ವಿವೇಚಿತವಾದ ಮೂರೂ ವೃತ್ತಗಳು ಕನ್ನಡಕ್ಕೇಕೆ ಹೆಚ್ಚಾಗಿ ಒದಗಲಿಲ್ಲ ಎಂಬ ಪ್ರಶ್ನೆ ಹುಟ್ಟಬಹುದು. ಕನ್ನಡಕ್ಕಿರುವ ಆದಿಪ್ರಾಸದ ನಿರ್ಬಂಧದ ಕಾರಣ ಉಪಜಾತಿ ಬರಲು ಸಾಧ್ಯವಿಲ್ಲ. ಏಕೆಂದರೆ ಗಜಪ್ರಾಸ ಮತ್ತು ಸಿಂಹಪ್ರಾಸಗಳ ಮಿಶ್ರಣಕ್ಕೆ ಕನ್ನಡದಲ್ಲಿ ಅವಕಾಶವಿಲ್ಲ. ಇನ್ನುಳಿದ ಎರಡು ವೃತ್ತಗಳಲ್ಲಿ ಇಂಥ ತೊಡಕಿಲ್ಲದಿದ್ದರೂ ಅವು ತಮ್ಮ ತಮ್ಮ ಪಾದಾಂತಗಳಲ್ಲಿ ಎರಡು ಗುರುಗಳನ್ನು ಹೊಂದಿದ ಕಾರಣ ಆದಿಪ್ರಾಸವನ್ನು ಹೊಂದಿಸುವಲ್ಲಿ ಸಾಕಷ್ಟು ಕಷ್ಟವೀಯುತ್ತವೆ. ಇದು ಖಂಡಪ್ರಾಸ ಮತ್ತು ಖಂಡೇತರ ಪ್ರಾಸಗಳೆರಡಕ್ಕೂ ಸಮಾನವಾಗಿ ಕ್ಲೇಶಕರ. ಎರಡು ಗುರುಗಳು ಪಾದದ ಕಡೆಗೆ ಬರುವ ಯಾವುದೇ ವರ್ಣವೃತ್ತದ ವಿಷಯದಲ್ಲಿಯೂ ಕನ್ನಡದ ಮಟ್ಟಿಗೆ ಇದು ಸತ್ಯ.

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 2

ಗಾನಕ್ರಮದ ಕರ್ಷಣದ ಮೂಲಕ ಇಂದ್ರವಜ್ರಾವೃತ್ತದ ಪಾದಗಳಿಗೆ ಒದಗಿದ ಪಂಚಕಲಗತಿ ಮತ್ತಷ್ಟು ದೃಢವಾಗಿ ಗುರು-ಲಘುವಿನ್ಯಾಸದಲ್ಲಿಯೇ ನಿಕ್ಷಿಪ್ತವಾದ ಬೆಳೆವಣಿಗೆಯನ್ನು ‘ಶ್ಯೇನಿ’ ಅಥವಾ ‘ಲಯಗ್ರಾಹಿ’ ಎಂಬ ಬಂಧದಲ್ಲಿ ನೋಡುತ್ತೇವೆ. ಇದು ಪ್ರತಿಪಾದಕ್ಕೆ ಮೂರು ತ-ಗಣ ಮತ್ತೆರಡು ಗುರುಗಳನ್ನು ಒಳಗೊಂಡ ಸಮವೃತ್ತ. ಅದರ ವಿನ್ಯಾಸ ಹೀಗೆ:

– – u – – u – – u – –

ಇದು ಐದೈದು ಮಾತ್ರೆಗಳ ಮೂರು ಗಣ ಮತ್ತು ನಾಲ್ಕು ಮಾತ್ರೆಗಳ ಒಂದು ಗಣವನ್ನು ಒಳಗೊಂಡ ಖಂಡಗತಿಯಲ್ಲಿ ಸಾಗುವ ಲಯಾನ್ವಿತ ವೃತ್ತ. ಕೊನೆಯ ಗಣವು ಒಂದು ಮಾತ್ರಾಕಾಲದ ಕರ್ಷಣಕ್ಕೆ ತುತ್ತಾಗಿ ಸಹಜವಾಗಿಯೇ ಲಯಸಮತೆಯನ್ನು ಪಡೆಯುವುದು ಸುವೇದ್ಯ.

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 1

ಶ್ಲೋಕದ ಬಳಿಕ ಉಪಜಾತಿ, ವಂಶಸ್ಥ, ರಥೋದ್ಧತಾ, ವಸಂತತಿಲಕಾ ಮೊದಲಾದ ಹಲವು ಛಂದಸ್ಸುಗಳು ಸಂಸ್ಕೃತಸಾಹಿತ್ಯದಲ್ಲಿ ಪ್ರಸಿದ್ಧಿ-ಪ್ರಾಚುರ್ಯಗಳನ್ನು ಗಳಿಸಿವೆ. ಇವುಗಳ ಸಂಖ್ಯೆ ಇಪ್ಪತ್ತು-ಮೂವತ್ತಕ್ಕಿಂತ ಹೆಚ್ಚಿನದಲ್ಲ. ಇವುಗಳ ಪೈಕಿ ಲಯರಹಿತ ವೃತ್ತಗಳೇ ಅಧಿಕ. ಇಂಥ ವೃತ್ತಗಳ ಗತಿಗಳಲ್ಲಿ ಸಾಕಷ್ಟು ಸಾಮ್ಯವುಂಟು. ಆದುದರಿಂದ ಪ್ರಸ್ಫುಟವಾದ ಗತಿವೈವಿಧ್ಯವುಳ್ಳ ಲಯರಹಿತ ವೃತ್ತಗಳ ಸಂಖ್ಯೆ ಮತ್ತೂ ಕಡಮೆ. ಆದರೆ ಈ ಸಂಖ್ಯೆ ಲಯಾನ್ವಿತವಾದ ವಿಶಿಷ್ಟ ವೃತ್ತ-ಜಾತಿಗಳ ವೈವಿಧ್ಯಕ್ಕೆ ಹೋಲಿಸಿದರೆ ಹೆಚ್ಚು. ಇದು ನಿಜಕ್ಕೂ ವಿಸ್ಮಯಾವಹ.