ಹೀಗೆ ಆನಂದವರ್ಧನನ ಮತ್ತು ಅವನ ಕೃತಿಯ ಮೌಲಿಕತೆಯನ್ನು ಮನಗಂಡ ಬಳಿಕ ಧ್ವನ್ಯಾಲೋಕವು ಪ್ರತಿಪಾದಿಸುವ ಕೆಲವು ಅಮೂಲ್ಯಸಂಗತಿಗಳನ್ನು ಗಮನಿಸಬಹುದು.[1] ಈಗಾಗಲೇ ಧ್ವನ್ಯಾಲೋಕವನ್ನು ಕುರಿತು ಕನ್ನಡದಲ್ಲಿ ವಿಪುಲವಾದ ಕೃಷಿ ನಡೆದಿರುವುದರಿಂದ ಆ ಗ್ರಂಥದ ಮುಖ್ಯಪ್ರಮೇಯಗಳನ್ನಷ್ಟೇ ಇಲ್ಲಿ ನಿರೂಪಿಸುವುದಾಗುತ್ತದೆ. ಇದಾದರೂ ನನಗೆ ಕಂಡುಬಂದ ಸ್ವಾರಸ್ಯಗಳನ್ನು ಒಂದೆಡೆ ಕ್ರೋಡೀಕರಿಸುವ ಪ್ರಯತ್ನವಷ್ಟೇ. ಅಲಂಕಾರ ಅಲಂಕಾರತತ್ತ್ವದ ನಿರೂಪಣೆಯು ಧ್ವನ್ಯಾಲೋಕದ ಪ್ರಧಾನ ಉದ್ದೇಶವಲ್ಲದಿದ್ದರೂ ಅದನ್ನು ಕುರಿತು ಆನಂದವರ್ಧನ ಮೌಲಿಕವಾದ ಹೊಳಹುಗಳನ್ನು ನೀಡಿದ್ದಾನೆ. ರಸ-...
ಆನಂದವರ್ಧನನ ಔನ್ನತ್ಯ ಆನಂದವರ್ಧನನು ವೈಯಾಕರಣರ ಸ್ಫೋಟಸಿದ್ಧಾಂತದಿಂದ ಸ್ಫೂರ್ತಿ ಪಡೆದು ಧ್ವನಿತತ್ತ್ವದ ಪ್ರತಿಪಾದನೆಗೆ ತೊಡಗಿದನೆಂದು ಹೇಳುತ್ತಾರೆ. ಇದು ನಿಜವೇ. ಈ ಅಂಶವನ್ನು ಕೆಲವೊಮ್ಮೆ ಎಣೆಮೀರಿ ವಿಸ್ತರಿಸುವುದಾಗುತ್ತದೆ; ಅದು ತಪ್ಪು. ವಸ್ತುತಃ ವೈಯಾಕರಣರಿಗೆ ಆನಂದವರ್ಧನ ಯಾವ ಮಟ್ಟಕ್ಕೆ ಋಣಿ ಎಂದು ಸ್ವಲ್ಪ ವಿಚಾರ ಮಾಡೋಣ. ವ್ಯಾಕರಣದರ್ಶನದಲ್ಲಿ “ಸ್ಫೋಟ” ಎಂಬ ಒಂದು ಶಬ್ದತತ್ತ್ವದ ಪ್ರಸ್ತಾವವಿದೆ. ಯಾವುದರಿಂದ ಅರ್ಥವು ಸ್ಫುಟವಾಗಿ ತಿಳಿಯುತ್ತದೆಯೋ ಅದು ಸ್ಫೋಟ. ಇದು ಅಖಂಡಶಬ್ದರೂಪದ್ದೆಂದೂ ಅದರ ಅನುಭವ ನಮಗಾಗುವ ವೇಳೆಯಲ್ಲಿ ಬಿಡಿಬಿಡಿಯಾದ...
ಭೂಮಿಕೆ ಕಲೆಗಳ ಪೈಕಿ ಪ್ರಮುಖವೆನಿಸಿದ ಸಾಹಿತ್ಯವು ತನ್ನಂತೆಯೇ ಒಂದು ವಿಭೂತಿ. ಇದರ ಮೂಲಕ ಸಹಸ್ರಾರು ವರ್ಷಗಳಿಂದ ಮಾನವನು ಅಪಾರ ಆನಂದವನ್ನು ಪಡೆಯುತ್ತ ಬಂದಿದ್ದಾನೆ. ಹೀಗೆ ತನಗೆ ಆನಂದವೀಯುತ್ತಿರುವ ತತ್ತ್ವ ಯಾವ ತೆರನಾದದ್ದು? ಅದರ ರೂಪ-ಸ್ವರೂಪಗಳೇನು? ಅದು ಆನಂದವನ್ನು ಹೇಗೆ ಉಂಟುಮಾಡುತ್ತದೆ? ಎಂಬಿವೇ ಮುಂತಾದ ಪ್ರಶ್ನೆಗಳು ಸಹಜಕುತೂಹಲಿಯಾದ ಮಾನವನಿಗೆ ಬಂದದ್ದು ಅಚ್ಚರಿಯೇನಲ್ಲ. ಈ ಪ್ರಶ್ನೆಗಳನ್ನು ಆತ್ಯಂತಿಕವಾಗಿ ಶೋಧಿಸಿ ಎಲ್ಲ ಕಾಲಕ್ಕೂ ಸೂಕ್ತವೆನಿಸಬಲ್ಲ ಉತ್ತರಗಳನ್ನು ಕಂಡುಕೊಂಡ ಶ್ರೇಯಸ್ಸು ಭಾರತೀಯ ಆಲಂಕಾರಿಕರದು. ಒಂದು ವಸ್ತು ಸುಂದರವೋ...