ಚಾರುದತ್ತ ಗೆಳೆಯ ಮೈತ್ರೇಯನ ಒತ್ತಾಯಕ್ಕೆ ಕಟ್ಟುಬಿದ್ದು ನಾಟ್ಯವನ್ನು ಕಾಣಲು ಬರುತ್ತಾನೆ. ಅವನಿಗೆ ಈ ಮುನ್ನ ತಾನು ಕಂಡಿದ್ದ ವಸಂತಸೇನೆಯ ಅಭಿನಯದಲ್ಲಿ ಅಷ್ಟಾಗಿ ಮನಸ್ಸಿರಲಿಲ್ಲ. ಹೀಗಾಗಿಯೇ ಅವನು ಹಿಂದೆ ಅವಳ ನೃತ್ಯಗಳಿಗೆ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದರೆ ಈಗ ಆಮ್ರಪಾಲಿಯ ಕೈಯಲ್ಲಿ ತರಪೇತಿ ಪಡೆದ ವಸಂತಸೇನೆಯ ಕಾರ್ಯಕ್ರಮಕ್ಕೆ ಹೋಗಲು ಹಿಂದೆಗೆಯುವ ಕಾರಣವೇ ಬೇರೆ. ಅವನೀಗ ಬರಿಗೈಯವನಾಗಿದ್ದಾನೆ. ಕೈಯೆತ್ತಿ ಕೊಡಲಾಗದಿರುವುದು ಅವನಿಗೆ ಮಿಗಿಲಾದ ಕಷ್ಟ:
ನನಗೆ ಸಂತೋಷ ಕೊಟ್ಟ ಕವಿ-ಕಲಾವಿದರಿಗೆ ನಾನು ಏನೂ ಕೊಡೋದಿಕ್ಕೆ ಆಗ್ತಾ ಇಲ್ಲ ಅನ್ನೋದು ನನಗೆ...
ಎಷ್ಟೇ ಗಾಢವಾದ ಸ್ನೇಹ-ಪ್ರೇಮಗಳ ಸಂಬಂಧವಾದರೂ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮಿಕ್ಕೆಲ್ಲರಿಂದಲೂ - ಪ್ರಿಯರಿಂದರೂ ಸಹ - ಮುಟ್ಟಲಾಗದಂತಹ ತನ್ನದೇ ಆದ ಒಂದು ಖಾಸಗಿ ಮೂಲೆ (ಪರ್ಸನಲ್ ಸ್ಪೇಸ್) ಇರುತ್ತದೆ. ಅದನ್ನು ಯಾರೂ ಎಂದೂ ಮುಟ್ಟಲು, ಒಳಹೊಗಲು ಯತ್ನಿಸಬಾರದು. ಈ ಪ್ರತ್ಯೇಕತೆಯನ್ನು ಉಳಿಸಿಕೊಂಡೂ ಪರಸ್ಪರ ಅರ್ಪಿಸಿಕೊಂಡಾಗಲೇ ಪ್ರೇಮ-ಸ್ನೇಹಗಳ ಪರಿಪೂರ್ಣ ವಿಕಸನ ಸಾಧ್ಯವೆನಿಸುತ್ತದೆ.
ಪದ್ಮಾವತಿ ತಲೆನೋವಿನಿಂದ ಮಲಗಿರುವಳೆಂದು ತಿಳಿದು ಅವಳನ್ನು ಸಂತೈಸಲು ಬಂದ ಆವಂತಿಕೆ ತಪ್ಪುತಿಳಿವಳಿಕೆಯಿಂದ ಉದಯನ ಮಲಗಿರುವ ಕೋಣೆಗೆ ತೆರಳಿ ಮಂಚದ ತೆರೆ ಸರಿಸಲು...
ಉದಯನನಂಥ ಅಪ್ರತಿಮ ಕಲಾವಿದನ ಬಗೆಗೆ ಸ್ವತಃ ಕಲಾವಿದೆಯೂ ಕಲಾಪ್ರೇಮಿಯೂ ಆಗಿದ್ದ ವಾಸವದತ್ತೆಯ ಅಭಿಮಾನ, ಆಕರ್ಷಣೆಗಳು ಎಲ್ಲ ಕಾಲದಲ್ಲಿಯೂ ಸಹಜವಾದದ್ದು. ಅವಳು ತನ್ನ ತಾಯಿಯ ನೆರವಿನಿಂದ ತಂದೆಯನ್ನು ಒಪ್ಪಿಸಿ ಉದಯನನನ್ನು ಗುರುವಾಗಿ ಪಡೆದು ವೀಣಾವಾದನ ಕಲಿಯುತ್ತಿದ್ದಳು. ಹೀಗೆ ಮೆಚ್ಚುಗೆ ಪ್ರೇಮವಾಗಿ ಪ್ರಗತಿ ಹೊಂದಿತ್ತು. ಪಾಲಕನ ಕುತಂತ್ರ ತಿಳಿದ ಕೂಡಲೇ ವಾಸವದತ್ತೆ ತನ್ನ ಗುರು ರೇಭಿಲನನ್ನು ಪ್ರಾರ್ಥಿಸಿ ಹೇಗಾದರೂ ಮಾಡಿ ಈ ವಿಷಯವನ್ನು ಯೌಗಂಧರಾಯಣನಿಗೆ ತಿಳಿಸಲು ಹೇಳುತ್ತಾಳೆ. ಅದರಂತೆ ಶರ್ವಿಲಕ ವಿಂಧ್ಯಾಟವಿಯನ್ನು ಕ್ರಮಿಸಿ ಕೌಶಾಂಬಿಗೆ ಬರುವಷ್ಟರಲ್ಲಿ...
ಕೌಶಾಂಬಿ-ಉಜ್ಜಯಿನಿಗಳ ನಡುವೆ ರಾಜಕೀಯ ಸಂಘರ್ಷ
“ಭಾರತವರ್ಷದ ಮಧ್ಯಮಣಿ ಉಜ್ಜಯಿನಿ. ಹೀಗಾಗಿಯೇ ಇದನ್ನು ವಿದ್ವಾಂಸರು ಬಹುಕಾಲದಿಂದ ಸಮಗ್ರದೇಶದ ಕಾಲನಿಷ್ಕರ್ಷೆಯ ಕೇಂದ್ರವೆಂದು ಗುರುತಿಸಿಕೊಂಡಿದ್ದರು. ಉಜ್ಜಯಿನಿಯು ಮಹಾಕಾಲನಗರಿಯೆಂಬ ಖ್ಯಾತಿಗೆ ಇದೇ ಬಹುಶಃ ಕಾರಣ” (ಪು. ೪೯) ಎಂದಿದ್ದಾರೆ ಲೇಖಕರು. ಇಲ್ಲಿಯ ಪ್ರಾಕೃತಿಕ ಸೌಂದರ್ಯವನ್ನೂ ಪೌರಾಣಿಕ ಮಹತ್ತ್ವವನ್ನೂ ವಿವರಿಸಿ ಅವಂತಿ ಜನಪದಕ್ಕೆ ಉಜ್ಜಯಿನಿಯು ಸರ್ವವಿಧದಿಂದಲೂ ಅಲಂಕಾರವಾಗಿತ್ತೆಂದು ತಿಳಿಸುತ್ತಾರೆ. ಪ್ರದ್ಯೋತ ಮಹಾರಾಜ ತನ್ನ ಪ್ರಚಂಡ ಶಕ್ತಿ ಮತ್ತು ಪ್ರಖರ ವರ್ತನೆಗಳಿಂದಾಗಿ ಚಂಡಮಹಾಸೇನ ಎಂದು...
ಯೌಗಂಧರಾಯಣ-ಚಾರುದತ್ತರ ಭೇಟಿ - ರಾಜ್ಯವ್ಯವಸ್ಥೆಗಳ ಬಗೆಗೆ ಚಿಂತನ
ಕಾದಂಬರಿಯ ಮೊದಲ ಅಧ್ಯಾಯದಲ್ಲಿ ಉದಯನ ಮತ್ತು ಚಾರುದತ್ತರ ಭೇಟಿಗಿಂತ ಚಾರುದತ್ತ ಹಾಗೂ ಯೌಗಂಧರಾಯಣರ ಭೇಟಿ ಹೆಚ್ಚು ವ್ಯಾಪಕವೂ ಪರಿಣಾಮಕಾರಿಯೂ ಆಗಿದೆ. ಇದು ಅಂದಿನ ಆರ್ಯಾವರ್ತದ ಮತ್ತು ಹಲವು ರಾಜ್ಯಗಳ ರಾಜಕೀಯ ಪರಿಸ್ಥಿತಿಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಇದು ಸುಮಾರು ಹದಿನಾರು, ಹದಿನೇಳು ಪುಟಗಳಲ್ಲಿ ವಿಸ್ತರಿಸಿಕೊಂಡಿದೆ.
ಆ ಕಾಲಘಟ್ಟದಲ್ಲಿ ಪ್ರಾಮುಖ್ಯವನ್ನು ಗಳಿಸುತ್ತಿದ್ದ ಶ್ರಮಣವರ್ಗಗಳು ತಮ್ಮ ಮತತತ್ತ್ವಗಳ ಪ್ರಚಾರಕ್ಕೂ ಅದಕ್ಕೆ ಬೇಕಾದ ಆರ್ಥಿಕ ಬಲದ ಸಹಾಯಕ್ಕೂ ಆಳುವ...
ಆಮ್ರಪಾಲಿಯ ಕಲಾಮೀಮಾಂಸೆ
ಉಜ್ಜಯಿನಿಯಲ್ಲಿ ಪಾಲಕ, ಅವನ ವೇಶ್ಯೆ ಕಾಮಲತೆ ಮತ್ತು ಆಕೆಯ ಅಣ್ಣ ಸಂಸ್ಥಾನಕ (ಶಕಾರ) - ಇವರಿಂದಾಗಿ ಪ್ರಜೆಗಳ, ಸಾರ್ಥವಾಹರ ಮತ್ತು ಗಣಿಕೆಯರ ನೆಮ್ಮದಿ ಕೆಡತೊಡಗಿದಾಗ ವಸಂತಸೇನೆಯ ತಾಯಿ ತನ್ನ ಮಗಳನ್ನು ವೈಶಾಲಿಯ ನಗರವಧು ಆಮ್ರಪಾಲಿಯ ಬಳಿಗೆ ಕಳುಹಿಸುತ್ತಾಳೆ. ಈಕೆ ವಸಂತಸೇನೆಯ ತಾಯಿಯ ಶಿಷ್ಯೆ. ಈ ಪ್ರಸಂಗದ ಮೂಲಕ ವೈಶಾಲಿಯ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚಿತ್ರಣಗಳು ನಮ್ಮೆದುರು ತೆರೆದುಕೊಳ್ಳುತ್ತವೆ. ಇಲ್ಲಿ ಆಮ್ರಪಾಲಿಯು ಗಣಭೋಗ್ಯೆಯಾಗಿ ಬಾಳಬೇಕಾದ ಪರಿಸ್ಥಿತಿಯನ್ನು ಲೇಖಕರು ಅವಳ ಮೂಲಕವೇ ಹೇಳಿಸಿದ್ದಾರೆ. ಹೀಗಾಗಿ ಇಲ್ಲಿಯ...
ಯೌಗಂಧರಾಯಣ ತನ್ನ ಮಹತ್ತಾದ ಕನಸನ್ನು ರೇಭಿಲನೊಡನೆ ಹಂಚಿಕೊಳ್ಳುತ್ತಾನೆ:
ಗೆಳೆಯಾ, ನಾನು ತುಂಬ ವರ್ಷಗಳಿಂದ ಇಡಿಯ ಭರತಭೂಮಿಯ ಹಿತ ಹೇಗೆ ಅಂತ ಆಲೋಚಿಸ್ತಾನೇ ಇದ್ದೀನಿ. ಯಾವುದೇ ಅಭಿನಿವೇಶ ಬಿಟ್ಟು, ಬುದ್ಧಿ ಮತ್ತು ಹೃದಯಗಳೆರಡನ್ನೂ ನನ್ನ ಕೈಲಾದ ಮಟ್ಟಿಗೆ ಶುದ್ಧವಾಗಿಟ್ಟುಕೊಂಡು ಮತ್ತೆ ಮತ್ತೆ ನಮ್ಮ ಈ ಭೂಮಿಯ ಹಿಂದು, ಮುಂದು, ಇಂದುಗಳನ್ನೆಲ್ಲ ಮಥಿಸಿ ನೋಡ್ತಿದ್ದೀನಿ ... ನೋಡು, ಪಾಂಡವರ ಕಾಲದಲ್ಲೂ ಈ ದೇಶ ಹತ್ತಾರು ಅಧಾರ್ಮಿಕಪ್ರಭುಗಳ ಅಬ್ಬರದಲ್ಲಿ ಹಲವಾರು ರಾಜ್ಯಗಳಾಗಿ ಹರಿದುಹಂಚಿಹೋಗಿತ್ತು. ಶ್ರೀಕೃಷ್ಣ ಮಾಡಿದ್ದೆಲ್ಲ ಅವುಗಳನ್ನ ಒಂದುಗೂಡಿಸಿದ್ದೇ...
ಮಣ್ಣು ಕನಸು ಕಾಣುತ್ತದೆಯೇ? ‘ಮೃತ್’, ಮಣ್ಣು ಮೂರ್ತವಾದರೂ ಅಚೇತನ. ‘ಸ್ವಪ್ನ’, ಕನಸು ಅಮೂರ್ತವಾದರೂ ಚೇತನದ ಅಂಶ ಹೊಂದಿದ್ದು ಅರೆಕ್ಷಣದಲ್ಲಿ ಲೋಕಾಲೋಕಗಳನ್ನು ಕಾಣಿಸುತ್ತದೆ. ಮಣ್ಣು ನೆಲವನ್ನು, ಭೂಮಿಯನ್ನು, ರಾಜ್ಯಗಳನ್ನು ಪ್ರತಿನಿಧಿಸುವ ಪದ. ಕನಸು ಜೀವಿಗಳ ಮನಃಪ್ರಪಂಚದಲ್ಲಿ ಕಂಡುಬರುವ ವ್ಯಾಪಾರ. ಮಣ್ಣು ಇರದಿದ್ದರೆ ನೆಲೆ ಇಲ್ಲ, ಬೆಳೆ ಇಲ್ಲ; ಜೀವನವೂ ಇಲ್ಲ. ಜಡದಂತೆ ಮೂರ್ತರೂಪದಲ್ಲಿದ್ದರೂ ಕನಸು ಕಾಣಲು, ತನ್ನ ಕನಸನ್ನು ಸಾಕ್ಷಾತ್ಕರಿಸಿಕೊಳ್ಳಲು, ತನ್ನಿಂದ ಮೂಡಿಬಂದ ಜೀವಚೈತನ್ಯಗಳ ಸಹಕಾರದಿಂದ ಮಾತ್ರ ಸಾಧ್ಯ. ಮಣ್ಣಿನ ಕನಸನ್ನು ಸಾಕಾರಗೊಳಿಸಲು...