ಭಟ್ಟರು ಭಾರತೀಯವಿದ್ಯಾಕ್ರಮದಲ್ಲಿ ಪಾಶ್ಚಾತ್ಯಪ್ರಭಾವವು ಮಾಡಿದ ಪರಿಣಾಮವನ್ನು ತುಂಬ ಸಮರ್ಥವಾಗಿ ವಿವೇಚಿಸಿದ್ದಾರೆ. ಮಾತ್ರವಲ್ಲ, ಇಂಥ ಸತ್ತ್ವಶೂನ್ಯಚಿಂತನಕ್ರಮವು ಪಾಶ್ಚಾತ್ಯಸಂಪರ್ಕಕ್ಕಿಂತ ಮೊದಲೇ ಉಂಟಾಗಿತ್ತೆಂದೂ ನಮ್ಮ ಪರಂಪರೆಯ ಗ್ರಂಥಗಳಲ್ಲಿ ಕಂಡುಬರುವ ತತ್ತ್ವಸ್ಖಾಲಿತ್ಯವನ್ನು ಗಮನಿಸಿ ತರ್ಕಿಸುತ್ತಾರೆ (ಪು. ೧೦೯-೧೧೨). ಇಂಥ ಮಧ್ಯಯುಗದ ಸತ್ತ್ವಶೂನ್ಯತೆಗೆ ಮುಖ್ಯಕಾರಣ ಇಸ್ಲಾಮಿನ ಬರ್ಬರವಾದ ಆಕ್ರಮಣದಿಂದ ಉಂಟಾದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕಕ್ಷೋಭೆಯೆಂಬುದನ್ನು ಅವರು ಕಂಠೋಕ್ತವಾಗಿ ಹೇಳದಿರುವುದು ಆಶ್ಚರ್ಯ ಮಾತ್ರವಲ್ಲ, ಅನ್ಯಾಯ ಕೂಡ...
ಭಟ್ಟರು ಶಾಸ್ತ್ರ-ಕಾವ್ಯಗಳ ಅಭೇದವನ್ನು ಪ್ರತಿಪಾದಿಸುತ್ತ ಉಭಯತ್ರ ಶಬ್ದಾರ್ಥಗಳ ಸಾಮರಸ್ಯ ಮತ್ತು ಅನುಭವದ ಅನನ್ಯತೆಗಳಿರಬೇಕೆಂದು ಹೇಳುತ್ತಾರೆ (ಪು. ೧೮೧). ಇದು ಉಪಾದೇಯವೇ ಆದರೂ ಕಾವ್ಯವು ವಿಭಿನ್ನಭಾಷೆಗಳಿಗೆ ಅನುವಾದಗೊಂಡಾಗ, ಸಂಗೀತವು ವಿಭಿನ್ನವಾದ್ಯಮಾಧ್ಯಮಗಳಿಗೆ ಅನೂದಿತವಾದಾಗ ಮೂಲದ ಸ್ವಾರಸ್ಯಗಳಲ್ಲಿ ಹೆಚ್ಚು-ಕಡಮೆಗಳಾಗುತ್ತವೆ. ಇದು ಸಮರ್ಥಾನುವಾದಗಳಲ್ಲಿಯೂ ಕಂಡುಬರುವಂಥದ್ದು. ಈ ಅರ್ಥದಲ್ಲಿ ಎಲ್ಲ ಬಗೆಯ ಕಾವ್ಯ-ಕಲಾನುವಾದಗಳೂ ಪುನಃಸೃಷ್ಟಿಗಳೇ. ಜೊತೆಗೆ, ಇವುಗಳ ಸಾಮ್ರಾಜ್ಯ ವ್ಯಂಜನಾವೃತ್ತಿಯಲ್ಲಿ. ಈ ಮಾತನ್ನು ಶಾಸ್ತ್ರಕ್ಕೆ...
ಬ್ರಹ್ಮನನ್ನು ಆದಿಕವಿಯೆಂದು ಹಲವೆಡೆ ಭಟ್ಟರು ಪ್ರತಿಪಾದಿಸಿದ್ದಾರೆ; ಚತುರ್ಮುಖಬ್ರಹ್ಮನ ಮೂಲಕ ಹೊಮ್ಮಿದ ವೇದಗಳಿಗೇ ಆದಿಮಕಾವ್ಯತ್ವವನ್ನು ಆರೋಪಿಸುತ್ತಾರೆ. ಇದಕ್ಕೆ ಭಾಗವತಪುರಾಣದ ಪ್ರಥಮಶ್ಲೋಕವನ್ನು ಆಧಾರವಾಗಿ ನೀಡುತ್ತಾರೆ (ಪು. ೧೮೦, ೨೦೫). ಇದೆಲ್ಲ ವಾಲ್ಮೀಕಿಯೊಬ್ಬನನ್ನೇ ಆದಿಕವಿಯೆಂದು ಗುರುತಿಸಬಾರದೆಂಬ ಇಂಗಿತದಿಂದಲೇ ಹೊರಟ ವಾದಕ್ರಮ. ದಿಟವೇ, ನಮ್ಮೀ ಜಗತ್ತಿನಲ್ಲಿ ಯಾವುದು ಆದಿ, ಯಾವುದು ಮೂಲ, ಯಾವುದು ಸರ್ವಪ್ರಥಮ ಎಂಬ ಚರ್ಚೆಯಲ್ಲಿ ನಿಸ್ತಾರ ಕಾಣುವುದು ಕಷ್ಟ. ಇಲ್ಲಿಯ ಆದಿ-ಮೂಲ-ಪ್ರಥಮವ್ಯವಹಾರಗಳೆಲ್ಲ ಸಾಮಾನ್ಯವಾದ ವ್ಯಾವಹಾರಿಕಸ್ತರದ್ದು....
ಭಟ್ಟರು ಕಾವ್ಯಮೀಮಾಂಸೆಯ ಮೂಲಾಧಾರವನ್ನು ಕುರಿತಂತೆ ಮತ್ತೆ ಮತ್ತೆ ವೇದ-ವೇದಾಂಗಗಳ ಮಹತ್ತ್ವವನ್ನು ಪ್ರತಿಪಾದಿಸುತ್ತಾರೆ. ವೇದದಿಂದ ರಸತತ್ತ್ವವೂ ವೇದಾಂಗವಾದ ವ್ಯಾಕರಣದಿಂದ ಧ್ವನಿತತ್ತ್ವವೂ ಬಂದಿವೆಯೆಂಬುದು ಅವರ ಮುಖ್ಯಾವಧಾರಣೆ. ಇದನ್ನು ವಿದ್ವಜ್ಜಗತ್ತು ಒಪ್ಪಿಯೂ ಇದೆ. ಈ ಬಗೆಯ ಆರ್ಷೋಪವಸತಿಯಿಂದ ಭಾರತೀಯವಿದ್ಯೆಗಳಿಗೆ ಅದೊಂದು ಬಗೆಯ ಸಂಪ್ರದಾಯಶುದ್ಧಿಯೂ ಅವಿಚ್ಛಿನ್ನತೆಯೂ ಬರುವುದಲ್ಲದೆ ದಾರ್ಶನಿಕೈಕ್ಯವೂ ಸಿದ್ಧಿಸುವುದೆಂಬುದು ಸತ್ಯ. ಆದರೆ ಇದು ಕೇವಲ ರೂಪಸ್ತರದ್ದಲ್ಲದೆ ಸ್ವರೂಪಸ್ತರದ್ದಲ್ಲ. ಕಾವ್ಯಮೀಮಾಂಸೆಯ ಅಂಗವಾದ ಛಂದಸ್ಸೋ ಧ್ವನಿಯೋ...
ಇದೇ ರೀತಿ ಭಾರತೀಯರ ಪ್ರಕಾರ ವಸ್ತು ಮತ್ತು ಅದನ್ನು ಕುರಿತಾದ ಜ್ಞಾನಗಳ ಪೈಕಿ ಜ್ಞಾನವೇ ಹೆಚ್ಚು ಸತ್ಯವಾದುದೆಂದು ಭಟ್ಟರು ಭಾವಿಸುತ್ತರೆ (ಪು. ೭೭). ಇದು ಈಚಿನ ಅನೇಕಚಿಂತಕರು ಎತ್ತಿಹಿಡಿಯುವ ಮತ. ವಿಶೇಷತಃ ನವಭಾರತೀಯದಾರ್ಶನಿಕರು ಹೆಚ್ಚಾಗಿ ಇಂಥ ಅಭಿಪ್ರಾಯವನ್ನು ಪ್ರಕಟಿಸುತ್ತಾರೆ. ಮಾತ್ರವಲ್ಲ, ಈ ವಾದವು ಬುದ್ಧಿಜೀವಿಗಳಿಗೆ ತುಂಬ ಆಕರ್ಷಕವೂ ಹೌದು; ಮತ್ತಿದು ಅದೆಷ್ಟೋ ಮಂದಿ ಮುಗ್ಧರಾದ ಪ್ರಾಮಾಣಿಕರು ಒಪ್ಪುವಂಥದ್ದೂ ಆಗಿದೆ. ಆದರೆ ನಿರ್ವಿಶೇಷವಾದ ಸಾರ್ವತ್ರಿಕಾನುಭವದ ಹಿನ್ನೆಲೆಯಲ್ಲಿ ಕಂಡಾಗ ಇದು ಸತ್ಯವಲ್ಲವೆಂದು ತಿಳಿಯದಿರದು. ವಸ್ತುತಃ ಭಟ್ಟರ ಈ...
ನರಸಿಂಹಭಟ್ಟರ ಚಿಂತನಕ್ರಮದ ಇತಿ-ಮಿತಿಗಳು
ಸ್ವಭಾವತಃ ಮಿತಭಾಷಿಗಳೂ ಅಂತರ್ಮುಖರೂ ಆದ ನರಸಿಂಹಭಟ್ಟರು ನಯವಾದರೂ ನಿರ್ದಾಕ್ಷಿಣ್ಯವಾದ ಅಭಿವ್ಯಕ್ತಿಗೆ ತೆತ್ತುಕೊಂಡವರು. ಆದುದರಿಂದ ಅವರ ಮಿತಭಾಷಿತ್ವ ಮತ್ತು ನಿರ್ದಾಕ್ಷಿಣ್ಯಗಳು ಅದೆಷ್ಟೋ ಬಾರಿ ಪ್ರತಿಪಾದ್ಯವಿಚಾರಕ್ಕಿಂತ ಮಿಗಿಲಾಗಿ ಓದುಗರನ್ನು ಎದುರುಗೊಂಡಲ್ಲಿ ಅಚ್ಚರಿಯಲ್ಲ. ಹೀಗಾಗಿ ಈ ಎರಡು ತೊಡಕುಗಳು ಅವರ ಚಿಂತನಗಳನ್ನು ಗ್ರಹಿಸುವಲ್ಲಿ ಜಿಜ್ಞಾಸುಗಳನ್ನು ಸಾಕಷ್ಟು ಕಾಡುತ್ತವೆ. ಇದಕ್ಕೆ “ಭಾರತೀಯಸಂವೇದನೆ: ಸಂವಾದ” ಗ್ರಂಥದ ಅದೆಷ್ಟೋ ಪ್ರತಿಕ್ರಿಯೆಗಳೇ ಸಾಕ್ಷಿ. ಜೊತೆಗೆ ಅತ್ಯಂತಪ್ರೌಢವಾದ...
ಭಟ್ಟರು ಪ್ರತಿಭೆಯನ್ನು ವಿವೇಚಿಸುತ್ತ ಇದು ವಿಶ್ಲೇಷಣೆಗೆ ಎಟುಕದೆ ನಿಲ್ಲುವುದೇ ಭಾರತೀಯಸೌಂದರ್ಯಮೀಮಾಂಸೆಯ ಒಂದು ಸ್ವಾರಸ್ಯಕರಾಂಶವೆಂದು ಗುರುತಿಸಿರುವುದು ಮೆಚ್ಚುವಂತಿದೆ (ಪು. ೧೪೨). ಹೀಗೆಯೇ ನಮ್ಮ ವಿವಿಧಶಾಸ್ತ್ರಕಾರರು ಸೌಂದರ್ಯ ಮತ್ತು ಸೌಂದರ್ಯಮೀಮಾಂಸೆಗಳನ್ನು ಉಪೇಕ್ಷಿಸಿದರೂ ಸೌಂದರ್ಯಮೀಮಾಂಸಕರು ಮಾತ್ರ ಶಾಸ್ತ್ರಗಳನ್ನು ಉಪೇಕ್ಷಿಸಲಿಲ್ಲವೆಂದು ಹೇಳಿರುವುದು ಬೆಲೆಯುಳ್ಳ ಮಾತು (ಪು. ೧೪೩). ಅಂತೆಯೇ ಅಭಿಧಾ-ಲಕ್ಷಣಾ-ವ್ಯಂಜನಾವೃತ್ತಿಗಳನ್ನು ಸ್ಥೂಲ-ಸೂಕ್ಷ್ಮ-ಸುಂದರಗಳೆಂದು ಗುರುತಿಸಿರುವುದು ಬೋಧಪ್ರದ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ ಕಲಾಕೃತಿಯು...
ಮತ್ತೆ ಕೆಲವು ಒಳನೋಟಗಳು
ನರಸಿಂಹಭಟ್ಟರು ತಮ್ಮ ಲೇಖನಗಳಲ್ಲಿ ಉದ್ಬೋಧಕವಾದ ಅನೇಕಾಂಶಗಳನ್ನು ಪ್ರಸ್ತಾವಿಸಿದ್ದಾರೆ. ಇವುಗಳಲ್ಲಿ ಹಲವನ್ನು ಈಗಾಗಲೇ ನಾವು ವಿಷಯಾನುಸಾರಿಯಾಗಿ ಸ್ವಲ್ಪ ಮಟ್ಟಿಗೆ ಪರಿಶೀಲಿಸಿದ್ದೇವೆ. ಇದೀಗ ಅವರ ಮತ್ತಷ್ಟು ಒಳನೋಟಗಳನ್ನು ಪರಾಂಬರಿಸೋಣ. ಇವು ಮುಖ್ಯವಾಗಿ ಅವರ “ಭಾರತೀಯಸಂವೇದನೆ”ಯ ಹಿನ್ನೆಲೆಯಲ್ಲಿಯೇ ಹರಳುಗಟ್ಟಿದ ಕಾರಣ ತಾತ್ತ್ವಿಕಾಂಶಗಳಿಗಿಲ್ಲಿ ಅವಧಾರಣೆ ಹೆಚ್ಚು. ಪ್ರಾಯಿಕವಾಗಿ ಇಲ್ಲಿಯ ಅವರ ಎಲ್ಲ ನಿಲವು-ನಿಗಮನಗಳೂ ಕೇವಲಾದ್ವೈತದ ಹಿನ್ನೆಲೆಯಲ್ಲಿ, ಯಾವುದೇ ವಿವೇಕಿಗೆ ಸಂಮತವಾಗಬಲ್ಲ ಕಾರಣ ಅವನ್ನು...
ಕಾವ್ಯದ ರೂಪವಿಮರ್ಶೆ
ರಸವು ಕಾವ್ಯದ ಸ್ವರೂಪವಾದರೆ ಗುಣ, ರೀತಿ, ಧ್ವನಿ, ವಕ್ರತೆ, ಅಲಂಕಾರಾದಿಗಳು ಅದರ ರೂಪಸ್ತರದಲ್ಲಿ ಬರುತ್ತವೆ. ವಸ್ತುತಃ ಶಬ್ದವೇ ಕಾವ್ಯದ ರೂಪ (Form). ಇನ್ನು ರಸವಾದರೋ ಕಾವ್ಯದ ಅರ್ಥ, ಪರಮಾರ್ಥ (Content). ಭಟ್ಟರು “ಸಂಸ್ಕೃತಭಾಷೆಯಲ್ಲಿಯ ಶಾಸ್ತ್ರೀಯನಿರೂಪಣೆಯಲ್ಲಿ ವರ್ಗೀಕೃತಘಟಕಗಳು ಸಂಪೂರ್ಣಭಿನ್ನವಾಗಿರದೆ ಒಂದು ಇನ್ನೊಂದರ ವಿಕ್ಷೇಪದಂತಿರುವಂತಹವು” ಎಂದು ಹೇಳುತ್ತಾರೆ (ಪು. ೧೮). ಇದನ್ನು ಸುಲಭವಾಗಿ ಹೇಳುವುದಾದರೆ, ಋಷಿಪರಂಪರೆಯ ಶಾಸ್ತ್ರಗಳಲ್ಲಿ ವಿವಿಧವಿಭಾಗಗಳು ಪರಸ್ಪರಸಾಪೇಕ್ಷ ಹಾಗೂ ಪೂರಕವೆನ್ನಬಹುದು. ಇದು...
ಮತ್ತೊಂದೆಡೆ ಭಟ್ಟರು ಕಾವ್ಯ-ಶಾಸ್ತ್ರಗಳ ಸಾಮಾನಾಧಿಕರಣ್ಯವನ್ನು ನಿರೂಪಿಸುತ್ತ ಕಾವ್ಯದ ಮೂರು ಘಟಕಗಳಾದ ವಸ್ತು, ಪಾತ್ರ ಮತ್ತು ರಸಗಳನ್ನು ಶಾಸ್ತ್ರದ ಪ್ರಮಾಣ, ಪ್ರಮೇಯ ಮತ್ತು ಸಿದ್ಧಿಯನ್ನೊಳಗೊಳ್ಳುವ ಸಾಧನಗಳೆಂಬ ಮೂರು ಅಂಶಗಳಿಗೆ ಸಂವಾದಿಯಾಗಿ ಕಾಣುತ್ತಾರೆ. ಇದನ್ನು ವಿಸ್ತರಿಸುತ್ತ ಕಾವ್ಯವು ತನ್ನ ವಸ್ತುವನ್ನು ಬೀಜ, ಬಿಂದು ಮತ್ತು ಕಾರ್ಯಗಳೆಂಬ ಮುಖ್ಯಾಂಗಗಳ ಮೂಲಕ ವಿಶ್ಲೇಷಿಸುತ್ತದೆ. ಇವುಗಳಲ್ಲಿ ಬೀಜವು ಪ್ರಾರಂಭವನ್ನು, ಕಾರ್ಯವು ಕೊನೆಯನ್ನು, ಬಿಂದುವು ಅವಿಚ್ಛಿನ್ನತೆಯನ್ನು ಸೂಚಿಸುವುವೆನ್ನುತ್ತಾರೆ. ಇದಕ್ಕೆ ಸಂವಾದಿಯಾಗಿ ಶಾಸ್ತ್ರದಲ್ಲಿ ಉಪಕ್ರಮ...