ವಿಮರ್ಶೆ
ಕಾವ್ಯಮೀಮಾಂಸೆಯ ಕೆಲವು ಮೂಲಭೂತ ಪ್ರಮೇಯಗಳನ್ನು ಮೇಲ್ಕಾಣಿಸಿದಂತೆ ನಿರೂಪಿಸಿರುವ ಕುವೆಂಪು ಅವುಗಳನ್ನು ಅನ್ವಯಿಸಿ ಪ್ರಾಯೋಗಿಕವಾಗಿಯೂ ತೌಲನಿಕವಾಗಿಯೂ ಕಾವ್ಯಗಳನ್ನು ವಿಮರ್ಶಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ “ವಿಮರ್ಶೆ ಎಂದರೆ ಕವಿಪ್ರತಿಭೆಯಿಂದ ಹೊರಹೊಮ್ಮುವ ಸುಂದರ ಭಾವಮಯ ಕಾವ್ಯಕ್ಷೇತ್ರಗಳಲ್ಲಿ ಸೂಕ್ಷ್ಮಮತಿಯಾದ ಸಹೃದಯನು ಕೈಕೊಳ್ಳುವ ವಿಹಾರಯಾತ್ರೆ ಅಥವಾ ಸಾಹಸಯಾತ್ರೆಯ ಕಥನಕಾರ್ಯ ... ಸಹಾನುಭೂತಿಯಿಲ್ಲದಿದ್ದರೆ ರಸಕೃತಿಗಳ ಆಸ್ವಾದನೆ ಅಗಮ್ಯ.”[1] ಸಹಾನುಭೂತಿ ಎಂಬ ಮಾತಿನಲ್ಲಿ ಕವಿಯ ಅನುಭವವನ್ನು ತನ್ನದನ್ನಾಗಿ ಮಾಡಿಕೊಳ್ಳಲು ರಸಿಕನಿಗೆ...
ಪ್ರತಿಕೃತಿ, ಪ್ರತಿಮಾ
ಸಾಹಿತ್ಯವೇ ಮೊದಲಾದ ಸಕಲ ಕಲೆಗಳಲ್ಲಿ ಸತ್ಯವು ಮೈದೋರುವ ಎರಡು ವಿಧಾನಗಳನ್ನು ಪುಟ್ಟಪ್ಪನವರು ಪ್ರತಿಕೃತಿ ಮತ್ತು ಪ್ರತಿಮಾ ಎಂದು ಹೆಸರಿಸಿದ್ದಾರೆ. ಅವರ ಪ್ರಕಾರ “ಇದ್ದುದನ್ನು ಇದ್ದಂತೆಯೆ, ನಡೆದುದನ್ನು ನಡೆದಂತೆಯೆ ಚಿತ್ರಿಸಲು ಪ್ರಯತ್ನಿಸುತ್ತದೆ ಪ್ರತಿಕೃತಿವಿಧಾನ ... ಇದ್ದುದನ್ನು ಇದ್ದಂತೆಯೆ, ನಡೆದುದನ್ನು ನಡೆದಂತೆಯೆ ಚಿತ್ರಿಸಬೇಕು ಎಂಬ ಪ್ರಯತ್ನಕ್ಕೆ ಹೋಗದೆ, ಇದ್ದದ್ದೂ ನಡೆದದ್ದೂ ತನಗೆ ಹೇಗೆ ಗೋಚರಿಸಿತೋ ಆ ಅನುಭವಕ್ಕೆ ಆಕಾರಕಲ್ಪನೆ ಮಾಡುವ ಪ್ರಯತ್ನದ ರೀತಿಯನ್ನು ಪ್ರತಿಮಾವಿಧಾನ ಎಂದು ಕರೆಯುತ್ತೇವೆ ... ಪ್ರತಿಕೃತಿಯ...
ಭಾವ, ರಸ
ಭಾವವನ್ನು ಕಾವ್ಯದ ಮೂಲವೆಂದು ಗಣಿಸುವ ಕುವೆಂಪು ಅದನ್ನು ಐದು ತಲೆಕಟ್ಟುಗಳಲ್ಲಿ ಗಮನಿಸಬೇಕೆನ್ನುತ್ತಾರೆ. ಅವು: (೧) ಔಚಿತ್ಯ, (೨) ಸ್ಫುಟತ್ವ, (೩) ಸ್ಥಾಯಿತ್ವ, (೪) ವೈವಿಧ್ಯ ಮತ್ತು (೫) ಮಹತ್ತ್ವ.[1] ಇವು ಒಳ್ಳೆಯ ಅಳತೆಗೋಲುಗಳೆಂದು ಎಲ್ಲರೂ ಒಪ್ಪಬಹುದು. ಒಂದೊಂದು ಅಂಶವನ್ನೂ ಪುಟ್ಟಪ್ಪನವರು ದೀರ್ಘವಾಗಿ, ಸೋದಾಹರಣವಾಗಿ ವಿವರಿಸಿದ್ದಾರೆ. ಆ ಪ್ರಕಾರ “ಲೇಖಕ ತನ್ನ ಸನ್ನಿವೇಶ, ಸಮಾಜ, ಮನಃಪರಿಸ್ಥಿತಿಗಳಿಗೆ ಸಮರೂಪವಾಗಿ, ಸಂವಾದಿಯಾಗಿ ತನ್ನ ಭಾವವನ್ನು ತಂದಿದ್ದಾನೆಯೆ” ಎಂದು ಪರೀಕ್ಷಿಸುವುದು ಔಚಿತ್ಯದ ತೆಕ್ಕೆಗೆ ಬರುತ್ತದೆ. “ಸ್ಫುಟತ್ವ...
ಕಾವ್ಯ
“ಕವಿಯ ರಸಾನುಭವದ ಅನುಭಾವವೇ ಕಾವ್ಯ”[1] - ಇದು ಪುಟ್ಟಪ್ಪನವರ ಕಾವ್ಯಲಕ್ಷಣ. ಅನುಭಾವಕ್ಕೆ ‘ಪ್ರದರ್ಶನ’ವೆಂದು ಅರ್ಥ ಮಾಡುವ ಅವರು ಕಾವ್ಯಕ್ರಿಯೆಯ ಕೇಂದ್ರದಲ್ಲಿ ರಸವನ್ನಿರಿಸಿರುವುದು ಸಮುಚಿತವಾಗಿದೆ.
ಕಾವ್ಯವಿರುವುದು ಹೃದಯದಾರಿದ್ರ್ಯವನ್ನು ಪರಿಹರಿಸಲು ಎಂದು ಕುವೆಂಪು ಪ್ರತಿಪಾದಿಸುತ್ತಾರೆ:
“ಲೋಕದಲಿ ದುಃಖವಿರೆ
ಆ ದುಃಖದೊಳಗರ್ಧ ಹೃದಯದಾರಿದ್ರ್ಯದಿಂ
ಬಂದಿಹುದು! ಆ ಹೀನ ದೀನ ದಾರಿದ್ರ್ಯಮಂ
ಪರಿಹರಿಸಿ ‘ದರ್ಶನ’ವ ದಯೆಗೈಯೆ ಕಲೆಯಿಹುದು.”[2]
ಇದು ಬಹಳ ಬೆಲೆಯುಳ್ಳ ಕಾಣ್ಕೆ. ನಾವು ಕಾವ್ಯದಲ್ಲಿ ಸಾಧಾರಣೀಕೃತವಾದ ನಮ್ಮವೇ ಭಾವಗಳನ್ನು...
ಕವಿ
ಆಧುನಿಕ ಕವಿಗೆ ತನ್ನ ಮತ್ತು ಇತರ ನೆಲೆಗಳ ಸಂಪ್ರದಾಯದ ಅರಿವು, ಮತಾಚಾರಗಳಲ್ಲಿ ಸೀಮಿತತೆಯನ್ನು ಮೀರುವ ದೃಷ್ಟಿ, ದರ್ಶನಶಾಸ್ತ್ರ ಮತ್ತು ಮನಃಶಾಸ್ತ್ರದ ಪರಿಜ್ಞಾನ, ಬದಲಾಗುತ್ತಿರುವ ಜಾಗತಿಕ ಸನ್ನಿವೇಶಗಳ ತಿಳಿವು, ವಿಜ್ಞಾನದ ಆವಿಷ್ಕಾರಗಳ ಬಗೆಗೆ ಆಸ್ಥೆ ಮತ್ತು ರಾಷ್ಟ್ರವನ್ನು ಕುರಿತು ಒಲವುಗಳು ಇರಬೇಕೆಂದು ಕುವೆಂಪು ಹಲವು ಬರೆಹಗಳಲ್ಲಿ ಪ್ರತಿಪಾದಿಸುತ್ತಾರೆ.[1] ಇದು ಬಹಳ ಆರೋಗ್ಯಕರವಾದ ನಿಲವು. ಇಂಥದ್ದೇ ನಿಲವನ್ನು ಸಾವಿರ ವರ್ಷಗಳಿಗೂ ಮುನ್ನ ಕಾಶ್ಮೀರದಲ್ಲಿದ್ದ ಕವಿ-ಆಲಂಕಾರಿಕ ಕ್ಷೇಮೇಂದ್ರ ವ್ಯಕ್ತಪಡಿಸಿದ್ದಾನೆ. ಅವನು ಇನ್ನೂ ಮುಂದೆ ಹೋಗಿ...
ಭೂಮಿಕೆ
ಆಧುನಿಕ ಕನ್ನಡ ಕಂಡಿರುವ ಒಳ್ಳೆಯ ಕವಿಗಳಲ್ಲಿ ಕುವೆಂಪು ಅಗ್ರಮಾನ್ಯರು. ಅವರು ತಮ್ಮ ಪ್ರಕೃತಿಭವ್ಯ ಪ್ರತಿಭಾಪ್ರಭಾವದಿಂದ ರಸಭಾಸ್ವರ ಕಾವ್ಯಗಳನ್ನು ಸೃಜಿಸಿ ನಮ್ಮ ನುಡಿಯ ಕಳೆಯೇರಿಸಿದರು. ಕನ್ನಡದ ಮಟ್ಟಿಗೆ ಮಾತ್ರವಲ್ಲದೆ ಅಖಿಲಭಾರತಸ್ತರದಲ್ಲಿ, ಅಷ್ಟೇಕೆ ಇಡಿಯ ವಿಶ್ವದ ವ್ಯಾಪ್ತಿಯಲ್ಲಿ ಯಾವ ಕಾಲದ ಯಾವ ಕವಿಗೂ ಸೆಡ್ಡುಹೊಡೆಯಬಲ್ಲ ಸತ್ತ್ವ ಅವರದು. ಮುಕ್ತಕದಿಂದ ಮೊದಲುಮಾಡಿ ಮಹಾಕಾವ್ಯದವರೆಗೆ, ಭಾವಗೀತದಿಂದ ನಾಡ ಗೀತದವರೆಗೆ ಕವಿತೆಯ ಎಲ್ಲ ಪ್ರಕಾರಗಳನ್ನೂ ಅವರು ಶ್ರೀಮಂತಗೊಳಿಸಿದ್ದಾರೆ. ಕಲ್ಪನೆ ಮತ್ತು ಅಭಿವ್ಯಕ್ತಿಗಳಲ್ಲಿ ತಮ್ಮದಾದ ಛಾಪನ್ನು...