ಅಮರುಕನ ಹೆಣ್ಣುಗಳ ಹಠ ಕಾವ್ಯಪರಿಧಿಯನ್ನೂ ಮೀರಿದ ಅತಿಕವಿತಾಭೂಮಿಕೆ. ಮನಸ್ಸನ್ನು ಕಲ್ಲಾಗಿಸಿಕೊಂಡು ನಲ್ಲರನ್ನು ಮುನಿದ ಹೆಣ್ಣುಗಳು ಹೊರದೂಡುವರೆಂದು ಬಲ್ಲವರ ಅಭಿಪ್ರಾಯ. ಆದರೆ ಅಮರುಕನ ಹೆಣ್ಣುಗಳು ಮೊದಲು ತಮ್ಮೊಡಲಿನಿಂದ ಪ್ರಾಣವನ್ನು ದೂಡಲು ನಿಶ್ಚಯ ಮಾಡಿಕೊಂಡ ಬಳಿಕವೇ ಪ್ರಾಣೇಶ್ವರರನ್ನು ಮನಸ್ಸಿನಿಂದ, ಮಂದಿರದಿಂದ ಹೊರಡಿಸಬಲ್ಲರು. ಇಂಥ ನಾಯಿಕೆಯ ಬಳಿ ಮುಂಜಾನೆ ಪ್ರಿಯತಮನು ಬಂದು ಬಾಗಿಲು ತಟ್ಟಿದ್ದಾನೆ. ಇರುಳೆಲ್ಲ ಅವನಿಗಾಗಿ ಕಾದು ಕಳವಳಿಸಿದ್ದ ಆಕೆ ಅಗುಳಿ ತೆಗೆದು ನೋಡಿದಾಗ ಅವಳಿಗೆ ಕಂಡದ್ದೇನು? ಅಲತಿಗೆಯ ಬಣ್ಣವನ್ನು ಹಣೆಯಲ್ಲಿ, ತೋಳಬಂದಿಯ...
ಬಹುಪತ್ನೀವ್ರತರ ಪಾಡೇ ಬೇರೆಯ ಜಾಡಿನದು. ಅವರ ಬಹುವಲ್ಲಭತೆಯ ಸುಖ-ಸಂತೋಷಗಳು ಅದು ಹೇಗೋ ಏನೋ, ನಮಗೆ ತಿಳಿಯದು. ಆದರೆ ತಂಟೆ-ತಕರಾರುಗಳು ಮಾತ್ರ ಜಗಜ್ಜಾಹೀರು. ಇದೂ ಒಂದು ಶಯ್ಯಾಗಾರ. ಅಮರುಕನನ್ನು ನಚ್ಚಿ ನಡೆಯುತ್ತಿರುವ ಈ ನಮ್ಮ ಸಂಚಾರದ ಕೇಂದ್ರಬಿಂದುವೇ ಹೆಚ್ಚಾಗಿ ಇದಲ್ಲವೆ? ಇಲ್ಲಿ ಈವರೆಗೆ ಹಾಯಾಗಿ ಲಲ್ಲೆಗೆರೆಯುತ್ತಿದ್ದ ಕಾದಲರ ನಡುವೆ ಇದೇಕಿಂಥ ವಿರಸ? ಹಾ, ತಿಳಿಯಿತು. ಪ್ರಣಯಜಲ್ಪನದ ಈ ಅಮರಶಿಲ್ಪಿ ಮಾತಿನ ಭರದಲ್ಲಿ ತನ್ನೊಡನಿರುವ ಈಕೆಯ ಹೆಸರಿಗೆ ಬದಲಾಗಿ ಮತ್ತೊಬ್ಬಳ ಹೆಸರನ್ನು ಉಸುರಿದ್ದಾನೆ. ಇಂಥ ಪ್ರಮಾದಗಳಿಗೆ ಸಂಸ್ಕೃತದಲ್ಲಿ “ಗೋತ್ರಸ್ಖಲಿತ”...
ಇಲ್ಲೊಬ್ಬಳು ಕಲಹಾಂತರಿತೆಯು ತನ್ನ ಮುನಿಸಿನ ಕೆಡುಕನ್ನು ತಾನೇ ವಿಮರ್ಶಿಸಿಕೊಳ್ಳುತ್ತಿದ್ದಾಳೆ. ಅದನ್ನು ಏಕಾಂತವಾಗಿ ಮಾಡದೆ ಎಲ್ಲ ಗೆಳತಿಯರ ನಡುವೆ ಲೋಕಾಂತದಲಿ ನಡಸಿದ್ದಾಳೆಂದರೆ ಆಕೆಯ ಪಶ್ಚಾತ್ತಾಪದ ತೀವ್ರತೆ ತಿಳಿಯದಿರದು. ಹಲುಬುವ ಆಕೆಯ ಮಾತುಗಳು ಕರುಳು ಕುಯ್ಯುವಂತಿವೆ: “ಅಯ್ಯೋ, ನಿಟ್ಟುಸಿರು ಈ ಮೊಗವನ್ನೇ ಬಾಡಿಸಿದೆ. ಹೃದಯವು ಧಮನಿಗಳ ಸಮೇತ ಕಿತ್ತುಬರುವಂತಿದೆ. ನಿದ್ರೆಯು ಅಪ್ಪಿತಪ್ಪಿ ಕೂಡ ಸುಳಿಯುತ್ತಿಲ್ಲ. ನಲ್ಲನ ಮೊಗ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹಗಲೂ ಇರುಳೂ ಅಳುವುದೊಂದೇ ಪಾಳಿಯಾಯಿತು. ಈ ಕಾಯವು ಕರಗುತ್ತಿದೆ. ಎಂಥ ಕೆಲಸ ಮಾಡಿದೆ,...
ಇಲ್ಲೊಬನಿದ್ದಾನೆ ಪ್ರಣಯಮರ್ಮಜ್ಞನಾದ ಹದಿನಾರಾಣೆಯ ಅನುಭವರಸಿಕ. ಅವನಿಗೆ ಕೊಸರಿ ಕೊಸರಿ ಪಡೆದ ಪ್ರಣಯದ ಸವಿ ಎಷ್ಟೆಂದು ಗೊತ್ತು. ಪಾಪ, ಅವನ ಕಾದಲೆಗೀಗ ಮುನಿಸು. ಹೀಗಾಗಿ ನಿರೀಕ್ಷಿತನರ್ಮವು ಸಾಧ್ಯವಾಗುತ್ತಿಲ್ಲ. ಅವನ ತಕರಾರು ಕೇಳುವಂತಿದೆ. ಅಲ್ಲದೆ ಅದರಲ್ಲೊಂದು ಮೆಚ್ಚುಗೆಯ ಧ್ವನಿಯೂ ಉಂಟೆನ್ನಿ. ಹೀಗಲ್ಲವಾದರೆ ಹಲಬುವಿಕೆಯು ಅಪ್ಪಟ ಕವಿತೆಯಾಗುವುದು ಹೇಗೆ? ಅವನ ಪರಿಶೀಲನೆ ಹೀಗಿದೆ: “ಮೊದಲಿನಂತೆ ಅವಳೀಗ ಬಟ್ಟೆಯನ್ನು ಸಡಿಲಿಸಳು ಮುಜುಗರಗೊಳ್ಳುತ್ತಿಲ್ಲ; ಚೆಂದುಟಿಗಳನ್ನು ಚುಂಬಿಸಲೆಂದು ಮುಂಗುರಳನ್ನು ಸವರಿ ಹಿಂಗತ್ತನ್ನು ಬಾಗಿಸುವಾಗ ಹುಬ್ಬೇರಿಸಿ ಮೊಗ...
ಅಮರುಕನೊಡನೆ ರಸಯಾತ್ರೆ
ಪ್ರಕೃತಕೃತಿಯ ಪದ್ಯಗಳನ್ನು ಪ್ರಧಾನವಾಗಿ ಮುನಿದ ನಾಯಿಕೆಗೆ ಸಖಿಯ ಹಿತಬೋಧೆ, ಭಾವಶಬಲಿತೆಯಾದ ನಾಯಿಕೆಯು ಸಖಿಯರಿಗೆ ಹೇಳುವ ಮಾತುಗಳು, ನಾಯಕ-ನಾಯಿಕೆಯರ ಸಂವಾದ, ನಾಯಕ-ಸಖಿಯರ ಸಂವಾದ, ಕವಿಯದೇ ಆದ ನಿರೂಪಣೆ ಎಂಬಿವೇ ಕೆಲವು ವಿಭಾಗಗಳಲ್ಲಿ ಅಡಕಮಾಡಬಹುದು. ಇವುಗಳಲ್ಲಿ ಕವಿಯು ಯಾವುದೇ ವ್ಯಕ್ತಿಗೂ ಪಕ್ಷಪಾತವಿಲ್ಲದೆ—ತನ್ನದೇ ಆದ ಪೂರ್ವಗ್ರಹಗಳೂ ಇಲ್ಲದೆ—ಅಪ್ಪಟವಾದ ಪ್ರಣಯವನ್ನು ಮಡಿ-ಮೈಲಿಗೆಗಳ ಗೋಜಿಲ್ಲದೆ ಸಾಕ್ಷಾತ್ಕರಿಸುತ್ತಾನೆ. ಈ ಕಾರಣದಿಂದಲೇ ಅಮರುಕನನ್ನು ಚಿತ್ತವೃತ್ತಿಸಾರ್ವಭೌಮನೆಂದೂ ಪದ್ಯರೂಪದಲ್ಲಿ ನೃತ್ಯವನ್ನು ಕಂಡರಿಸಿದ...
ಹಿನ್ನೆಲೆ
ಭಾರತೀಯಸಂಸ್ಕೃತಿಯಲ್ಲಿ ಸಾಮಾನ್ಯಶಕ ಮುನ್ನೂರರಿಂದ ಸುಮಾರು ಎಂಟುನೂರರವರೆಗೆ ಐನೂರು ವರ್ಷಗಳ ಅವಧಿಯಲ್ಲಿ ಅದೊಂದು ಅತಿಲೋಕಮನೋಹರನಾಗರಕತೆಯು ನಿರ್ಮಿತವಾಯಿತು. ಇದು ದಕ್ಷಿಣದ ಸಂಘಂ ಸಾಹಿತ್ಯಯುಗ ಮತ್ತು ಬಾದಾಮಿ ಚಾಲುಕ್ಯರ ಶಿಲ್ಪವಿಕ್ರಮಯುಗ ಹಾಗೂ ಉತ್ತರದ ಗುಪ್ತ-ಮೌಖರೀ-ಪ್ರತಿಹಾರಯುಗಗಳ ಸಮಗ್ರಾಭ್ಯುದಯವನ್ನು ಒಳಗೊಳ್ಳುವಂತೆ ಬೆಳೆಯಿತು. ಇಲ್ಲಿ ಯಾವುದೇ ಪ್ರಾಂತೀಯಸಂಸ್ಕೃತಿವೈಷಮ್ಯಗಳಿರಲಿಲ್ಲ; ಸರ್ವತ್ರ ಸನಾತನಧರ್ಮದ ಸರ್ವಾಂಗೀಣಸ್ವಾರಸ್ಯವೇ ತುಂಬಿ ತುಳುಕಿತ್ತು. ಭೌತಿಕ-ಬೌದ್ಧಿಕ-ಭಾವುಕಸಮೃದ್ಧಿಗಳ ಸಾಮರಸ್ಯವನ್ನು ನಾವಿಲ್ಲಿ ಕಾಣಬಹುದು....