ಆದಿಪ್ರಾಸದ ನಿರ್ಬಂಧ ಇಲ್ಲವಾದ ಬಳಿಕ ಮತ್ತೆ ಕನ್ನಡಕ್ಕೆ ಶ್ಲೋಕ ಬರಬಹುದಿತ್ತು ಎಂಬ ಪ್ರಶ್ನೆ ಏಳಬಹುದು. ಇದಕ್ಕೂ ಕಾರಣವಿದೆ. ಆದಿಪ್ರಾಸ ಅಳಿಯುವ ಹೊತ್ತಿಗೆ ಹಳಗನ್ನಡವಿರಲಿ, ನಡುಗನ್ನಡವೂ ಅಳಿದು ಹೊಸಗನ್ನಡದ ಯುಗ ಮೊದಲಾಗಿತ್ತು. ನಾವು ಈ ಮೊದಲೇ ಕಂಡಂತೆ ಶ್ಲೋಕಕ್ಕೆ ಒಗ್ಗುವ ಭಾಷೆ ಹಳಗನ್ನಡವೇ. ಅಷ್ಟೇಕೆ, ಕಂದ-ವೃತ್ತಗಳಿಗೆಲ್ಲ ಇದೇ ಅನಿವಾರ್ಯ. ನಡುಗನ್ನಡ-ಹೊಸಗನ್ನಡಗಳಲ್ಲಿ ಈ ಎಲ್ಲ ಬಂಧಗಳು ನೀರಿಲ್ಲದ ಸರೋವರದ ಮೀನುಗಳಂತೆಯೇ ಸರಿ. ಹೀಗಾಗಿ ಶ್ಲೋಕದ ಪ್ರವೇಶಕ್ಕೆ ನವೋದಯವೂ ಒದಗಿಬರಲಿಲ್ಲ. ಮತ್ತೂ ಮುಂದಿನ ಕಾಲದಲ್ಲಿ ಛಂದಸ್ಸೇ ಬಹಿಷ್ಕೃತವಾದುದು ತಿಳಿದೇ...
ಕರ್ಷಣಜಾತಿಗಳು ಮಾತ್ರಾಜಾತಿಗಳಂತೆಯೇ ಏಕದೇಶಸ್ಥಿರವಾಗಿವೆ. ಈ ಸ್ಥಿರತೆ ಪದ್ಯಬಂಧಗಳ ಚಾಕ್ಷುಷರೂಪದಲ್ಲಿರದೆ ಶ್ರಾವಣರೂಪದಲ್ಲಿ ಕಾಣಸಿಗುತ್ತದೆ. ಅಂದರೆ, ಕರ್ಷಣಜಾತಿಗಳ ಭಾಷಾಪದಗತಿ ಗದ್ಯಕ್ಕಿಂತ ಬಲುಮಟ್ಟಿಗೆ ಬೇರೆ ಎನಿಸದ ಹಾಗೆ ಅನಿಬದ್ಧವಾಗಿ ತೋರುತ್ತದೆ. ಅವುಗಳ ಪದ್ಯಗತಿ ಛಂದಃಪದಗತಿಯ ಮೂಲಕ ಮಾತ್ರ ಉನ್ಮೀಲಿಸಬೇಕು. ಆದುದರಿಂದಲೇ ಇವುಗಳ ಭಾಷಾಪದಗತಿ ಹೇಗೇ ಇದ್ದರೂ ಏಕ / ಆದಿ, ರೂಪಕ, ಖಂಡ ಮತ್ತು ಮಿಶ್ರ ಎಂಬ ನಾಲ್ಕು ಬಗೆಯ ಮೂಲಭೂತ ಲಯಗಳಿಗೆ ಒಗ್ಗುವಂತೆ ಪದ್ಯಗತಿ ಕರ್ಷಣದ ಮೂಲಕ ರೂಪುಗೊಳ್ಳುತ್ತದೆ. ಇದನ್ನು ಸಾಂಗತ್ಯದಂಥ ಒಂದು ಬಂಧ ಶ್ರಾವಣರೂಪದಲ್ಲಿ...
ಈ ಮುನ್ನ ಕಾಣಿಸಿದ ಮಾದರಿಗಳಲ್ಲಿ ಹ್ರಸ್ವ ಮತ್ತು ಮಧ್ಯಮಗಾತ್ರದ ಬಗೆಬಗೆಯ ಅಕ್ಷರ / ಮಾತ್ರಾಘಟಕಗಳನ್ನು ಪರಿಶೀಲಿಸಿದಾಗ ‘ಇವೇ ಪರಿಮಾಣಗಳಲ್ಲಿ ಹೆಚ್ಚಿನ ಭಾಷಾಪದಗಳು ರೂಪುಗೊಳ್ಳುವುವೇ?’ ಎಂಬ ಸಂದೇಹ ಕೆಲವರಲ್ಲಿ ಮೂಡಬಹುದು. ಭಾಷಾಪದಗಳು ತಮ್ಮ ಪರಿಮಾಣದಲ್ಲಿ ಲಯಾನ್ವಿತವಾದ ಛಂದಃಪದಗಳಿಗಿಂತ ಹೆಚ್ಚು-ಕಡಮೆಗಳನ್ನು ಹೊಂದಿರುತ್ತವೆ ಎಂಬುದು ಅವರ ಸಂದೇಹಕ್ಕೆ ಕಾರಣ. ಆದರೆ ಇಂಥ ಸಂಶಯ ನಿಲ್ಲುವಂಥದ್ದಲ್ಲ.
ಭಾರತೀಯಭಾಷೆಗಳು ಪ್ರಾಯಿಕವಾಗಿ ಒಂದೇ ಬಗೆಯ ಪದಪದ್ಧತಿಯನ್ನು ಹೊಂದಿವೆ. ಈ ಮಾತು ಅವುಗಳ ಅಭಿಜಾತಸಾಹಿತ್ಯದ ಮಟ್ಟಿಗಂತೂ ಸತ್ಯ. ನಮ್ಮ ಭಾಷೆಗಳ ಯಾವುದೇ...
ಇನ್ನು ಮುಂದೆ ಶ್ಲೋಕದಲ್ಲಿ ಬರಬಹುದಾದ ವಿಭಿನ್ನಸಂಖ್ಯೆಯ ಮಾತ್ರಾಗಣಗಳ ಕೆಲವು ಪ್ರಮುಖ ಸಾಧ್ಯತೆಗಳನ್ನು ಪರಿಶೀಲಿಸೋಣ.
ಅ) ಮೂರು ಮಾತ್ರೆಗಳ ಘಟಕಗಳುಳ್ಳ ರಚನೆ:
ನಾನ | ನಾನ | ನನಾ | ನಾನ/ನಾ | ನಾನ | ನಾನ | ನನಾ | ನನಾ |
ನನಾ | ನನಾ | ನನಾ | ನಾನ/ನಾ | ನನಾ | ನಾನ | ನನಾ | ನನಾ |
ತ್ರಿಮಾತ್ರಾಗಣಗಳೇ ಪ್ರಚುರವಾದ ಈ ಬಗೆಯ ಶ್ಲೋಕದಲ್ಲಿ ಮೂರು ಮಾತ್ರೆಗಳ ಪರಿಮಾಣವನ್ನೇ ಉಳ್ಳ ನ-ಗಣಕ್ಕೆ ಆಸ್ಪದವಿಲ್ಲ. ಅದು ಬಂದೊಡನೆಯೇ ಎರಡು ಗುರುಗಳು ಅವ್ಯವಹಿತವಾಗಿ ಬರಬೇಕಾಗುತ್ತದೆ; ಆಗ ಗತಿಯು ನಾಲ್ಕು ಮಾತ್ರೆಗಳ ಘಟಕಕ್ಕೆ ಅವಕಾಶ ನೀಡಬೇಕಾಗುತ್ತದೆ.[1]
ಆ...
ಪರಿಷ್ಕೃತ ಲಕ್ಷಣ
ಈ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಈ ಮುನ್ನ ಹೇಳಿದ ಶ್ಲೋಕದ ಲಕ್ಷಣಗಳು ಪರ್ಯಾಪ್ತವಲ್ಲವೆಂದು ತಿಳಿಯುತ್ತದೆ. ಬಹುಶಃ ಈ ಕಾರಣದಿಂದಲೇ ಮಧ್ಯಕಾಲೀನ ಛಂದೋವಿದರು ಇನ್ನಷ್ಟು ಪರಿಷ್ಕೃತವಾದ ಲಕ್ಷಣವನ್ನು ರೂಪಿಸಿದ್ದಾರೆ. ಉದಾಹರಣೆಗೆ ‘ವೃತ್ತರತ್ನಾಕರ’ದ ನಾರಾಯಣಭಟ್ಟೀಯ ವ್ಯಾಖ್ಯೆಯು ಶ್ಲೋಕದ ಎಲ್ಲ ಪಾದಗಳ ಮೊದಲ ನಾಲ್ಕು ಅಕ್ಷರಗಳ ವಿನ್ಯಾಸಗಳಿಗೂ ಅನ್ವಯಿಸುವಂಥ ಕೆಲವೊಂದು ನಿಯಮಗಳನ್ನು ರೂಪಿಸಿದೆ (೨.೨೧). ಅವು ಹೀಗಿವೆ:
ಪ್ರತಿಯೊಂದು ಸಾಲಿನ ಮೊದಲ ಹಾಗೂ ಕೊನೆಯ ಅಕ್ಷರಗಳ ಗುರುತ್ವ ಅಥವಾ ಲಘುತ್ವಗಳಲ್ಲಿ ಐಚ್ಛಿಕತೆ ಉಂಟು. ಆದರೆ...
೨. ವಿಷಮಪಾದದ ಉತ್ತರಾರ್ಧದಲ್ಲಿ ಲಘುಬಾಹುಳ್ಯವುಳ್ಳ ಸಂದರ್ಭಗಳಲ್ಲಿ ಆಯಾ ಓಜಪಾದಗಳ ಪಂಚಮಾಕ್ಷರಗಳು ಲಘು ಅಥವಾ ಗುರುವೇ ಆಗಿರಲಿ, ಮೇಲಣ ಎಚ್ಚರಿಕೆಯನ್ನು ಪಾಲಿಸಿದ್ದೇ ಆದಲ್ಲಿ ಶ್ಲೋಕದ ಧಾಟಿ ಕೆಡುವುದಿಲ್ಲ. ಇಂತಿದ್ದರೂ ಪಂಚಮಾಕ್ಷರವು ‘ಲಕ್ಷಣವಿರುದ್ಧ’ವಾಗಿ ಗುರುವಾದಲ್ಲಿ ಒಟ್ಟಂದದ ಶ್ಲೋಕಗತಿಗೆ ಹೆಚ್ಚಿನ ಸೊಗಸು ಬರುತ್ತದೆ. ಉದಾ:
ಷಾಣ್ಮಾತುರಃ ಶಕ್ತಿಧರಃ ಕುಮಾರಃ ಕ್ರೌಂಚದಾರಣಃ || (ಅಮರಕೋಶ, ೧.೧.೪೭)
ಆದರೆ ಓಜಪಾದದ ಪೂರ್ವಾರ್ಧವು ಗುರುಗಳಿಂದಲೇ ತುಂಬಿದ್ದರೆ - ವಿಶೇಷತಃ ಮೂರು ಹಾಗೂ ನಾಲ್ಕನೆಯ ಅಕ್ಷರಗಳು ಗುರುಗಳಾಗಿದ್ದರೆ - ಐದನೆಯ ಅಕ್ಷರವು...
‘ಶ್ಲೋಕ’ ಎಂಬ ಪದ್ಯಪ್ರಕಾರವು ಸಾಲಿಗೆ ಎಂಟರಕ್ಷರಗಳಂತೆ ನಾಲ್ಕು ಪಾದಗಳನ್ನುಳ್ಳ ಅನುಷ್ಟುಪ್‌ವರ್ಗದ ಛಂದಸ್ಸುಗಳಲ್ಲಿ ಒಂದು ಪ್ರಭೇದವಾದರೂ ಇದಕ್ಕೆ ಇಡಿಯ ಆ ವರ್ಗದ ಹೆಸರೇ ರೂಢವಾಗಿದೆ. ಈ ವೈಚಿತ್ರ್ಯಕ್ಕೆ ಕಾರಣ ಅದರ ಪ್ರಾಚುರ್ಯ ಮತ್ತು ವೈದಿಕಸಾಹಿತ್ಯದ ಅನುಷ್ಟುಪ್ಪಿನೊಡನೆ ಅದಕ್ಕಿರುವ ನೈಕಟ್ಯ-ಸಾದೃಶ್ಯಗಳೇ ಆಗಿವೆ. ಸಾಮಾನ್ಯವಾಗಿ ಸಮೂಹವೊಂದರಲ್ಲಿ ಹೆಚ್ಚು ಪ್ರಸಿದ್ಧವಾದ ಪ್ರಭೇದವನ್ನು ಇಡಿಯ ಗುಂಪಿನ ಹೆಸರಿನಿಂದಲೋ, ಅಥವಾ ಆ ಗುಂಪನ್ನೇ ತತ್ಸಂಭೂತವಾದ ಪ್ರಭೇದದ ಹೆಸರಿನಿಂದಲೋ ಗುರುತಿಸುವುದುಂಟು. ಗೋಡ್ರೇಜ್ ಕಪಾಟು, ಜೆ಼ರಾಕ್ಸ್ ಯಂತ್ರ, ಜಾಟರ್ ಪೆನ್...