Culture

English Writings of D V Gundappa - 15

Book reviews were a constant feature in all the journals DVG edited and published. He either reviewed himself or, if he happened to spot a well-written piece, he sought the permission of the author and published it. How to put a work in perspective and appraise its value within the packed confines of journalistic writing, and, more importantly, how to infuse literary charm into the prose? DVG answers these questions with his own reviews.

English Writings of D V Gundappa - 14

Gokhale Institute of Public Affairs, an organization DVG built and nurtured, has made quiet but sustained efforts to educate people in all matters of collective living. Apart from conducting civic surveys, preparing reports for the perusal of Government and organizing lectures, it has played an active part in times of crisis. For instance, during the Indo-China war, it exhorted all its members and the people at large to contribute to the national defence fund. It issued the following Statement of Appeal on 29 October 1962:

ಸಾಕಾರಗೊಂಡ ರಾಮಮಂದಿರ

ಇತಿಹಾಸದ ಮುಂಜಾವಿಗೂ ಹಿಂದಿನಿಂದಲೇ ಸಮಸ್ತ ಹಿಂದು ಜನಾಂಗದ ಅಂತರಂಗದಲ್ಲಿ ಮರ್ಯಾದಾಪುರುಷೋತ್ತಮನೆಂದೂ ಭಗವಂತನ ಶ್ರೇಷ್ಠ ಅವತಾರವೆಂದೂ ಉದಾತ್ತ ಜೀವನಮೌಲ್ಯಗಳೆಲ್ಲದರ ಪ್ರತೀಕವೆಂದೂ ಅಧಿಷ್ಠಿತನಾಗಿರುವ ಶ್ರೀರಾಮನ ಜನ್ಮಸ್ಥಾನವನ್ನು ಅದಕ್ಕೆ ಅಂಟಿದ್ದ ಕಲಂಕದಿಂದ ರಾಷ್ಟ್ರವ್ಯಾಪಿ ಆಂದೋಲನದ ಮೂಲಕ ಮುಕ್ತಗೊಳಿಸಿ ಇದೀಗ ಅಲ್ಲಿ ಮಂದಿರನಿರ್ಮಾಣವೂ ನಡೆದಿರುವುದು ಒಂದು ಇತಿಹಾಸಾರ್ಹ ಘಟನೆ.

ಕೆಲವು ಶತಾಬ್ದಗಳಿಂದ ವಿವಿಧ ಕಾರಣಗಳಿಂದಾಗಿ ಅತಿಮಾರ್ದವವನ್ನು ರೂಢಿಸಿಕೊಂಡಿದ್ದ ಹಿಂದು ಸಮಾಜ ಕಾಲಧರ್ಮ ಅಪೇಕ್ಷಿಸಿದಂತೆ ಈಗ ಕ್ಷಾತ್ತ್ರರವನ್ನು ಮರಳಿ ಪಡೆದುಕೊಳ್ಳುತ್ತಿರುವುದರ ಸಂಕೇತವೂ ಇದಾಗಿದೆ.

ಭಾರತದಲ್ಲಿ ಶ್ರೀರಾಮೋತ್ಸವ

ಶ್ರೀರಾಮನ ಜನ್ಮಸ್ಥಾನವಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದು ಒಂದು ವಿಶೇಷ ಐತಿಹಾಸಿಕ ಘಟನೆ. ಅದಕ್ಕೆ ಸಂದ ಹೋರಾಟವೇ ಒಂದು ಪರ್ವ. ಬಹುಶಃ ಜಗತ್ತಿನ ಯಾವ ದೇವಾಲಯಕ್ಕೂ ನಡೆಯದ ಐದು ಶತಮಾನಗಳ ಹೋರಾಟ ಅಯೋಧ್ಯಾನಗರದ ರಾಮನ ದೇವಾಲಯಕ್ಕೆ ನಡೆದಿದೆ. ಹದಿನೈದನೆಯ ಶತಮಾನದಿಂದ ಬ್ರಿಟಿಷರ ಆಳ್ವಿಕೆಯ ಆರಂಭದವರೆಗೂ ಮೊಘಲರ ವಿರುದ್ಧ ಸೆಣಸಾಡಿದ್ದಾಗಲಿ, ಬ್ರಿಟಿಷರ ಕಾಲದಲ್ಲಿ ಅವರ ರಾಜಕೀಯ-ನ್ಯಾಯಾಂಗ ವ್ಯವಸ್ಥೆಗೆ ಅನುಗುಣವಾಗಿ ನಮ್ಮ ದೇವಾಲಯಕ್ಕೆ ನಡೆಸಿದ ಹೋರಾಟವಾಗಲಿ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದೂ ಭಾರತೀಯರು ಸ್ವಧರ್ಮನಿಷ್ಠರಾಗಿ ಬದುಕಲಾಗದಿರುವ ದಶಕಗಳಲ್ಲಿ ನ್ಯಾಯಾಲಯದ ಕಟಕಟೆಯಲ್ಲಿ ನಮ್ಮ ದೇವರನ್ನು ನಿಲ್ಲಿಸಿ ವಾದಿಸಿದ್ದಾಗಲಿ - ಭಾರತದ ಒಂದು ದುರಂತ ಕಥೆಯನ್ನು ಹೇಳುತ್ತದೆ.

ಅಯೋಧ್ಯೆಯ ಶ್ರೀರಾಮಮಂದಿರ

ದೇವಾಲಯಗಳು ಭಾರತೀಯ ಸಂಸ್ಕೃತಿಯ ಕೇಂದ್ರಬಿಂದು ಎಂಬುದು ಸಕಲ ಭಾರತೀಯರೂ ಬಲ್ಲ ತಥ್ಯವೇ ಆಗಿದೆ. ಸುಂದರ ದೇವಾಲಯಗಳ ನಿರ್ಮಾಣವು ಆಡಳಿತ ವರ್ಗದ ದಕ್ಷತೆಯ ಹಾಗೂ ರಾಷ್ಟ್ರದ ಆರ್ಥಿಕ ಸಮೃದ್ಧಿಯ ಸಂಕೇತವೂ ಹೌದು. ಪ್ರಾಚೀನ ಕಾಲದಿಂದಲೂ ಭಾರತಾದ್ಯಂತ ನಿರ್ಮಾಣವಾಗಿರುವ ದೇವಾಲಯಗಳು ಇದಕ್ಕೆ ಪುರಾವೆಯಾಗಿ ನಿಂತಿವೆ. ರಾಮಾಯಣದಲ್ಲಿಯೇ ದೇವಾಯತನಗಳ, ಚೈತ್ಯಗಳ ಹಾಗೂ ಅಧಿಷ್ಠಾನಗಳ ಉಲ್ಲೇಖವಿದೆ. ರಾಮನ ಕಾಲದಲ್ಲಿಯೂ ಅಯೋಧ್ಯೆಯಲ್ಲಿ ದೇವಾಲಯಗಳಿದ್ದವು ಎಂದು ಊಹಿಸಲು ರಾಮಾಯಣದಲ್ಲಿ ಆಧಾರಗಳಿವೆ.
 

ವ್ಯಾಕರಣಶಾಸ್ತ್ರದಲ್ಲಿ ಕಂಡುಬರುವಂತೆ ಪ್ರಾಚೀನ ವಿದ್ಯಾಭ್ಯಾಸಪದ್ಧತಿ

ನಮ್ಮ ದೇಶದಲ್ಲಿ ಹಿಂದೆ ವಿದ್ಯಾಭ್ಯಾಸಪದ್ಧತಿ ಹೇಗಿತ್ತೆಂಬ ವಿಚಾರ ಕುತೂಹಲಕರವಾಗಿದೆ. ಈ ವಿಷಯವನ್ನು ನೇರವಾಗಿ ವಿವರಿಸುವ ಗ್ರಂಥಗಳು ನಮ್ಮಲ್ಲಿ ಇಲ್ಲ. ನಾಲಂದ, ತಕ್ಷಶಿಲೆ, ವಿಕ್ರಮಶಿಲೆ, ವಲಭಿ ಮೊದಲಾದ ಕೆಲವು ಸ್ಥಳಗಳಲ್ಲಿ ಸುಪ್ರಸಿದ್ಧವಾದ ವಿದ್ಯಾಶಾಲೆಗಳಿದ್ದವೆಂದೂ ಅವು ಈಗಿನ ವಿಶ್ವವಿದ್ಯಾಲಯಗಳಂತೆ ವಿಭಿನ್ನ ಶಾಸ್ತ್ರಗಳ ಪ್ರೌಢ ಅಧ್ಯಾಪನವನ್ನು ನಡೆಸುತ್ತಿದ್ದವೆಂದೂ ತಿಳಿದುಬರುತ್ತದೆ. ಆದರೆ ಅಲ್ಲಿಯ ವಿದ್ಯಾರ್ಥಿಗಳು ಯಾವ ಕ್ರಮದಿಂದ ವಿದ್ಯೆಯನ್ನು ಕಲಿಯುತ್ತಿದ್ದರು, ಶಿಕ್ಷಣವಿಧಾನ ಹೇಗೆ, ಪಠ್ಯಪುಸ್ತಕಗಳ ವ್ಯವಸ್ಥೆ ಹೇಗಿತ್ತು, ಗುರುಶಿಷ್ಯರ ಸಂಬಂಧ ಯಾವ ಬಗೆಯದು - ಇತ್ಯಾದಿ ವಿವರ ಸರಿಯಾಗಿ ದೊರೆಯುವುದಿಲ್ಲ. ಇದಕ್ಕೆ ಸಂಬಂಧಿಸಿದ ಅಂಶಗಳನ್ನು ನಾವು ವಿಭಿನ್ನ ಮೂಲಗಳಿಂದ ಸಂಗ್ರಹಿಸಬೇಕಾಗಿದೆ. ಕೆಲವನ್ನು ಊಹಿಸಬೇಕಾಗಿದೆ.