ಛಂದೋಗತಿ-ಅನುಪ್ರಾಸ
ನಾವು ಈಗಾಗಲೇ ಅನುಪ್ರಾಸದ ಹಲವಾರು ಉದಾಹರಣೆಗಳನ್ನು ಕಂಡಿರುವ ಕಾರಣ ಈಗ ಮತ್ತೂ ಕೆಲವೊಂದು ಮಾದರಿಗಳ ಮೂಲಕ ಇದರ ಸೊಗಸನ್ನು ಮನದಟ್ಟು ಮಾಡಿಕೊಳ್ಳುವುದಷ್ಟೇ ಉಳಿಯುತ್ತದೆ.
ಲಯರಹಿತವಾದ ವರ್ಣವೃತ್ತಗಳಲ್ಲಿ ಅನುಪ್ರಾಸವು ತಾಳಾನುಸಾರವಾಗಿ ಬರಲು ಸಾಧ್ಯವೇ ಇಲ್ಲ. ಆದರೂ ಪದ್ಯದ ಆದ್ಯಂತ ಕಾಣಸಿಗುವಾಗ, ಪದಗಳು ಮುಗಿದಂತೆಲ್ಲ ಬರುವಾಗ, ಯತಿಸ್ಥಾನದಲ್ಲಿ ತಲೆದೋರುವಾಗ ಹೆಚ್ಚಿನ ಆಕರ್ಷಣೆ ಉಂಟಾಗುತ್ತದೆ. ಉದಾಹರಣೆಗೆ ಕೆಲವೊಂದು ಪದ್ಯಗಳನ್ನು ಗಮನಿಸಬಹುದು. ವಿಶೇಷತಃ ಈ ಬಗೆಯ ಅನುಪ್ರಾಸಗಳು ಹಲವೊಮ್ಮೆ ಛೇಕಾನುಪ್ರಾಸ ಮತ್ತು ಯಮಕಗಳತ್ತ ಕೂಡ ವಾಲುವ...
ಊನಗಣ-ಅಂತ್ಯಪ್ರಾಸ
ಅಂತ್ಯಪ್ರಾಸ ಕೂಡ ತಾಳಬದ್ಧವಾದ ರಚನೆಗಳಲ್ಲಿ ಹೆಚ್ಚಾಗಿ ಶೋಭಿಸುತ್ತದೆ. ಇದಕ್ಕೆ ಕಾರಣ ತಾಳಾವರ್ತಗಳ ಕಡೆಗೆ ಬರುವ ಪ್ರಾಸವು ಗತಿಯ ನಿಲುಗಡೆಯನ್ನು ತುಂಬ ಚೆನ್ನಾಗಿ ಬಿಂಬಿಸುವುದೇ ಆಗಿದೆ. ಯಾವುದೇ ತಾಳಬದ್ಧ ಗೇಯದ ಸಾಲೊಂದು ತನ್ನ ಮುಗಿತಾಯದ ಮೂಲಕ ಎದ್ದುಕಾಣುವಂತೆ ಆಗಬೇಕಾದರೆ ಅಲ್ಲಿ ಊನಗಣ ಅಪೇಕ್ಷಿತ. ಹೀಗಲ್ಲವಾದರೆ ಅಖಂಡವಾದ ಆವರ್ತಗಳು ಎದ್ದುತೋರಿ ನಿಲುಗಡೆಯೇ ಇಲ್ಲದೆ ತೊರೆಯೋಟದಿಂದ ಸಾಗುತ್ತಲೇ ಇರುತ್ತವೆ. ಆದುದರಿಂದ ಪಾದಾಂತ್ಯದಲ್ಲಿ ಊನಗಣಗಳು ಇದ್ದಾಗಲೇ ಅಂತ್ಯಪ್ರಾಸವು ಅತಿಶಯವಾಗಿ ತೋರುತ್ತದೆ. ಒಂದು ಪಕ್ಷ ಊನಗಣ...
ಅಂತ್ಯಪ್ರಾಸ
ಅಂತ್ಯಪ್ರಾಸದ ಇತಿಹಾಸವು ಸಾಕಷ್ಟು ಪ್ರಾಚೀನ. ವಿಶೇಷತಃ ರಗಳೆಗಳಲ್ಲಿ ಎರಡು-ಎರಡು ಸಾಲುಗಳು ಯುಗ್ಮಕಗಳೆಂಬಂತೆ ಅಂತ್ಯಪ್ರಾಸದೊಡನೆ ಸೇರಿ ಬರುತ್ತವೆ. ಇಲ್ಲಿ ಆದಿಪ್ರಾಸವಿದ್ದರೂ ಇಲ್ಲದಿದ್ದರೂ ಅಂತ್ಯಪ್ರಾಸ ನಿಯತವಾಗಿ ಬರುವುದು ಗಮನಾರ್ಹ. ಸಂಸ್ಕೃತ ಮತ್ತು ಪ್ರಾಕೃತ-ಅಪಭ್ರಂಶಗಳ ಗೀತಸಾಹಿತ್ಯದಲ್ಲಿಯೂ ಅಂತ್ಯಪ್ರಾಸವನ್ನು ಗುರುತಿಸಬಹುದು.[1] ಇಲ್ಲಿ ಆದಿಪ್ರಾಸವಿರುವುದಿಲ್ಲ. ಇದರ ಮುಂದುವರಿಕೆಯನ್ನು ಹಿಂದೀ ಮೊದಲಾದ ಉತ್ತರಭಾರತದ ಭಾಷೆಗಳ ಸಾಹಿತ್ಯದಲ್ಲಿ ಕಾಣಬಹುದು.
ಕನ್ನಡದಲ್ಲಿ ಅಂತ್ಯಪ್ರಾಸವು ರಗಳೆಗಳ ಮೂಲಕ ತೋರಿಕೊಳ್ಳುವ ಕ್ರಮವನ್ನು ಈ...
ಅಪೌರುಷೇಯವೆನಿಸಿದ ವೇದವಾಙ್ಮಯದಲ್ಲಿ ಪ್ರಾಸಬದ್ಧವಾದ ಅನೇಕ ಪಂಕ್ತಿಗಳಿವೆ. ಆದಿಕವಿ ವಾಲ್ಮೀಕಿಯಲ್ಲಿ ಪ್ರಾಸಾನುಪ್ರಾಸಗಳ ಸಮೃದ್ಧಿಯನ್ನು ಕಾಣಬಹುದು. ಅಷ್ಟೇಕೆ, ಭಾರತೀಯ ಭಾಷೆಗಳೆಲ್ಲ ಸಹಜವಾಗಿ ಪ್ರಾಸಾನುಪ್ರಾಸಗಳಿಗೆ ಒಗ್ಗಿಬಂದಿವೆ. ನಮ್ಮ ಅನುದಿನದ ಸಂಭಾಷಣೆಗಳಲ್ಲಿ, ಗಾದೆಮಾತುಗಳಲ್ಲಿ, ಜಾನಪದರ ಗೇಯಗಳಲ್ಲಿ, ನಾಟಕ-ಸಿನೆಮಾಗಳ ಹಾಡುಗಳಲ್ಲಿ ಪ್ರಾಸಾನುಪ್ರಾಸಗಳದೇ ಸಾಮ್ರಾಜ್ಯ. ಪ್ರಾಸದ ಮೂಲಕ ಎಂಥ ಗಹನ ವಿಚಾರವನ್ನೂ ಮನಸ್ಸಿಗೆ ಹತ್ತಿರ ಮಾಡಬಹುದು.
ರವೀಂದ್ರನಾಥ ಠಾಕೂರರು ಹೇಳುವಂತೆ ಉಪಮೆಯು ಕಣ್ಣಿಗೊಂದು ಚಿತ್ರವನ್ನು ಕಟ್ಟಿಕೊಟ್ಟರೆ ಪ್ರಾಸವು ಕಿವಿಗೊಂದು...