ಸಭಾಪರ್ವದಲ್ಲಿ ದ್ರೌಪದಿ ಅನುಭವಿಸುವ ಅಪಮಾನ ಮನಃಕ್ಲೇಶಗಳು ಮಹಾಭಾರತದ ನಿರ್ದಿಷ್ಟ ಕಾಲಘಟ್ಟದಲ್ಲಿ, ಸಾಮಾನ್ಯ ಮಹಿಳೆಯರು ಅನುಭವಿಸಿರಬಹುದಾದ ದಾರುಣ ಪರಿಸ್ಥಿತಿಯನ್ನು ನಾವು ಊಹಿಸುವಂತೆ ಮಾಡುತ್ತವೆ.  ದ್ರೌಪದಿ ಪಾಂಡವರಂತಹ ಮಹಾವೀರರನ್ನು ಗಂಡಂದಿರನ್ನಾಗಿ ಪಡೆದಿದ್ದು, ಅರಮನೆಯಲ್ಲಿ ವಾಸಿಸುತ್ತಿದ್ದ ಮಹಾರಾಣಿ. ಅಂತಹ ಹೆಣ್ಣನ್ನು, ಅದೂ ಅಗ್ನಿಕನ್ಯೆ ಎಂದು ಪ್ರಸಿದ್ಧಳಾಗಿದ್ದವಳನ್ನು ತುಂಬಿದ ರಾಜ ಸಭೆಗೆ ಎಳೆದುತಂದು ವಸ್ತ್ರಾಪಹರಣದ ತನಕ ಹೋದರೆಂದರೆ, ಇದೆಂಥ ಶಿಷ್ಟ ಸಮಾಜ? ಅಪಮಾನ ಮಾಡಿದವರು, ಶಸ್ತ್ರಾಸ್ತ್ರಗಳು, ಶಾಸ್ತ್ರಗಳು ಮುಂತಾದ ಸಕಲ...
ಪಾಂಡವರಲ್ಲಿ ಭೀಮ, ಆಕಾರ ಮತ್ತು ಸ್ವಭಾವ ಎರಡರಲ್ಲಿಯೂ ವಿಶಿಷ್ಟನಾಗಿ ನಿಲ್ಲುತ್ತಾನೆ.  ಕಪಟ, ಕುತಂತ್ರಗಳಾಗಲೀ, ಇರದ ನೇರ ನುಡಿ ನೇರ ನಡೆಯವನು.  ಇವನ ಅಸಾಧ್ಯ ಹಸಿವಿನಿಂದಾಗಿ ಇವನಿಗೆ ವೃಕೋದರನೆಂಬ ಹೆಸರೂ ಸಹ ಇದ್ದಿತು.  ತನ್ನ ಮಗನ ಹಸಿವಿನ ಪ್ರಮಾಣ ಅರಿತಿದ್ದ ಕುಂತಿ, ಏಕಚಕ್ರನಗರದಲ್ಲಿ ಐವರು ಮಕ್ಕಳೂ ತಂದ ಭಿಕ್ಷೆಯಲ್ಲಿ ಅರ್ಧವನ್ನು ‘ಭೀಮ ಪಾಲು’ ಎಂದು ತೆಗೆದಿಡುತ್ತಿದ್ದಳು.  ಇಂಥ ಭೀಮ ದಿನ ಗಟ್ಟಳೆ ಉಪವಾಸ ಕೂಡ ಇರಬಲ್ಲವನಾಗಿದ್ದ.  ಬಕನಂತಹ ರಾಕ್ಷಸನನ್ನು, ಅದೊಂದು ವಿನೋದದ ಆಟವೆಂಬಂತೆ ತಣ್ಣಗೆ ಕೊಂದು ಬರುವ ಭೀಮ ಮಕ್ಕಳಿಂದ, ದೊಡ್ಡವರತನಕ...
DuryodhanaLastMoments
ಯುದ್ಧಾರಂಭವಾದ ಮೇಲೆ, ತನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯ, ಭೀಷ್ಮ, ದ್ರೋಣ, ಕರ್ಣ ಮಹಾವೀರರ ನೆರವಿನಿಂದ ಜಯದ ಭರವಸೆ ಹೊತ್ತಿದ್ದ ದುರ್ಯೋಧನ, ತನ್ನ ತಮ್ಮಂದಿರನ್ನೂ, ಮಕ್ಕಳನ್ನೂ, ಮಿತ್ರರನ್ನು ಕಳೆದುಕೊಂಡ ಮೇಲೆ ಛಲವನ್ನು ಬಿಡುವುದಾಗಲೀ, ಈ ಭೂಮಿಯ ಮೇಲೆ ಬದುಕುವುದಾಗಲೀ ಅರ್ಥಹೀನವೆನಿಸುತ್ತದೆ ಅವನಿಗೆ.  ಹಾಗಾಗಿ ಕಡೆತನಕ ಹಗೆತನದ ಕವಚ ತೊಟ್ಟೇ ಬದುಕಿ ವೈಶಂಪಾಯನ ಕೊಳದ ಬಳಿ ಭೀಮನಿಂದ ಹತನಾಗುವ ದುರಂತನಾಯಕನಾಗುತ್ತಾನೆ. ರಣಮುಖದೊಳೀ ಕ್ಷತ್ರಧರ್ಮದ ಕುಣಿಕೆ ತಪ್ಪದೆ ವೇದಶಾಸ್ತ್ರದ ಭಣಿತೆ ನೋಯದೆ ವೀರ ವೃತ್ತಿಯ ಪದದ ಪಾಡರಿದು | ಸೆಣಸು ಸೋಂಕಿದ ಛಲದ...
ಭೀಮ ಹುಟ್ಟಿನಿಂದಲೇ ಮಹಾಬಲಶಾಲಿ, ವಜ್ರದೇಹಿ, ಉಳಿದವರಿಗಿಂತಲೂ ಸಂಪೂರ್ಣ ಭಿನ್ನ ಎಂದು ಚಿತ್ರಿಸುತ್ತಾನೆ ಕುಮಾರವ್ಯಾಸ.  ಭೀಮನ ಜನನದ ನಂತರ ಕುಂತಿ ಇಂದ್ರನನ್ನು ಜಪಿಸಿ, ಅರ್ಜುನನನ್ನು ಪಡೆಯುತ್ತಾಳೆ.  “ಲೋಕತ್ರಿತ್ರಯದಲಿ ಬಲುಗೈ ಕಣಾ, ಪಶುಪತಿಗೆ, ಪುರುಷೋತ್ತಮಗೆ ಸರಿ ಮಿಗಿಲೆಂಬ…” (ಆದಿಪರ್ವ 4.60), ಸುತನನಿತ್ತೆನು ಎಂದು ಹೇಳಿ ಇಂದ್ರ ಹಿಂದಿರುಗುತ್ತಾನೆ.  ಅರ್ಜುನ ಜನಿಸಿದಾಗ ದೇವದುಂದುಭಿ ಮೊಳಗಿ, ಕುಸುಮಾವಳಿಯ ಮಳೆ ಸುರಿದು ಪ್ರಕೃತಿಯಲ್ಲಿ ಶುಭ ಶಕುನಗಳಾಗುತ್ತವೆ.  ಅರ್ಜುನನ ಜನನಕ್ಕೆ ಮೂರು ತಿಂಗಳ ಮುನ್ನ ಶ್ರೀ ಕೃಷ್ಣನ ಜನನವಾಗಿ ಇವರಿಬ್ಬರೂ...
‘ಕರ್ಣಾಟ-ಭಾರತ-ಕಥಾಮಂಜರಿ’, ಕುಮಾರವ್ಯಾಸನೆಂದು ಬಿರುದು ಪಡೆದ ಗದುಗಿನ ನಾರಾಯಣಪ್ಪನಿಂದ ವಿರಚಿಸಲ್ಪಟ್ಟು, ‘ಗದುಗಿನ ಭಾರತ’ ವೆಂದೇ ಖ್ಯಾತಿ ಪಡೆದು ಕರ್ನಾಟಕದ ಹಳ್ಳಿಹಳ್ಳಿಯಲ್ಲಿಯೂ ಜನರ ನಾಲಿಗೆಯ ಮೇಲೆ ನಲಿಯುತ್ತಿರುವ ಮಹಾಕಾವ್ಯ. ಕನ್ನಡ-ಸಾಹಿತ್ಯ-ಕ್ಷೇತ್ರದ ತೃತೀಯ ನವೋದಯದಲ್ಲಿ ವೈಷ್ಣವಭಕ್ತಿಯನ್ನು ತನ್ನ ಕಾವ್ಯಗಂಗೆಯ ಮೂಲಕ ಪುನರುತ್ಥಾನಗೊಳಿಸಿದವನು ಕುಮಾರವ್ಯಾಸನೆಂದು ಅನೇಕ ವಿದ್ವಾಂಸರ ಅಭಿಮತ. ಕುಮಾರವ್ಯಾಸನ ಕಾವ್ಯದ ಬಗೆಗೆ ಬರೆಯಬಲ್ಲ ಪಾಂಡಿತ್ಯವಾಗಲೀ, ಭಾಷಾ-ಪ್ರೌಢಿಮೆಯಾಗಲೀ ಇರದಿದ್ದರೂ, ನನ್ನ ಆಯುಷ್ಯದ ಈ ಅವಧಿಯಲ್ಲಿ ಕೃತಿಯನ್ನು ಮತ್ತೆ...