ಪಾರ್ವತಿ. ಇವಳೂ ಜವರಾಯಿಯಂತೆ ಜೀವನದ ಬಗೆಗೆ ಆಸ್ಥೆಯುಳ್ಳವಳು. ಯಾವ ಕೆಲಸ ಮಾಡಿದರೂ ಅದರಲ್ಲಿ ಒಪ್ಪ-ಓರಣ ಇರುವಂತೆ ನೋಡಿಕೊಳ್ಳುವ ಮನೋಭಾವದವಳು. ಈಕೆಯನ್ನು ಹುಟ್ಟು-ಸಾವುಗಳಿಗೆ ಹತ್ತಿರವಿರುವ ನರ್ಸ್ ಉದ್ಯೋಗದವಳೆಂದು ಚಿತ್ರಿಸುವ ಮೂಲಕ ಭೈರಪ್ಪನವರು ಔಚಿತ್ಯ ಕಾಪಾಡಿಕೊಂಡಿದ್ದಾರೆ. ಇದರಿಂದ ಕೃತಿಯ ಕಥನತಂತ್ರಕ್ಕಾದ ಪ್ರಯೋಜನ ಬಲು ಮಿಗಿಲು. ನಾಯಿನಾಗರಾಜಯ್ಯನ ಸಾವಿನಿಂದ ತತ್ತರಿಸುತ್ತಿದ್ದ ಜವರಾಯಿಯ ಭಾವತುಮುಲವನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಪಾರ್ವತಿಗೆ ನೆರವಾದದ್ದು ಅವಳ ವೃತ್ತಿ. ರೋಗಬಾಧಿತರನ್ನು ಪ್ರತಿದಿನವೂ ನೋಡುತ್ತಿದ್ದ ಅವಳಿಗೆ ಸಾವಿನ...
ಕಾಳಪ್ಪ. ಇವನ ಹೆಸರು ಯಮಧರ್ಮನ ಸಂಕೇತವೂ ಹೌದು, ಕಾಲದ ಸಂಕೇತವೂ ಹೌದು. ಸದಾ ದೇಶ-ವಿದೇಶಗಳಲ್ಲಿ ತಿರುಗಾಡುವ ವೃತ್ತಿಪರನನ್ನಾಗಿ ಕಾಳಪ್ಪನನ್ನು ಚಿತ್ರಿಸುವ ಮೂಲಕ ಭೈರಪ್ಪನವರು ಕಾಲದ ಚಲನಶೀಲತೆಯನ್ನು ಸೂಚಿಸಿದ್ದಾರೆ. ಸಾವನ್ನೂ ಸೇರಿದಂತೆ ಜವರಾಯಿಯ ಜೀವನದ ಹಲವು ಸಂಗತಿಗಳನ್ನು ಅವನ ಡೈರಿಯ ಮೂಲಕ ಕಾಳಪ್ಪ ತಿಳಿದುಕೊಳ್ಳುವುದು ಕಾಲದ ಸಾಕ್ಷಿಸ್ವಭಾವವನ್ನು ಧ್ವನಿಸುವಂತಿದೆ. ಈ ಹಿನ್ನೆಲೆಯಲ್ಲಿ ನಾವು ಪಾತ್ರವಿಶ್ಲೇಷಣೆಗೆ ತೊಡಗಬಹುದು. ಕಾಳಪ್ಪನನ್ನು ಅವನ ಅರವತ್ತೊಂದನೆಯ ವಯಸ್ಸಿನಲ್ಲಿ ಸಾವಿನ ಆಲೋಚನೆ ಆವರಿಸಿಕೊಳ್ಳುತ್ತದೆ. ಆತನ ಮಾತಿನಲ್ಲಿಯೇ...
ಭೂಮಿಕೆ
ಮಾಸರ್ತುದರ್ವೀಪರಿಘಟ್ಟನೇನ
ಸೂರ್ಯಾಗ್ನಿನಾ ರಾತ್ರಿದಿವೇಂಧನೇನ |
ಅಸ್ಮಿನ್ಮಹಾಮೋಹಮಯೇ ಕಟಾಹೇ
ಭೂತಾನಿ ಕಾಲಃ ಪಚತೀತಿ ವಾರ್ತಾ ||
ಮಹಾಭಾರತದಲ್ಲಿ ಯಕ್ಷ “ಏನು ವಾರ್ತೆ?” ಎಂದು ಪ್ರಶ್ನಿಸಿದಾಗ, “ಸೂರ್ಯನನ್ನು ಬೆಂಕಿಯಾಗಿ ಬಳಸಿ, ಹಗಲು-ರಾತ್ರಿಗಳನ್ನೇ ಒಲೆಗೆ ಇಂಧನವನ್ನಾಗಿಸಿ, ಮೋಹವೆಂಬ ಬಾಣಲೆಯಲ್ಲಿ ಋತು-ಮಾಸಗಳೆಂಬ ಸೌಟಿನ ಮೂಲಕ ಸಕಲ ಜೀವಿಗಳನ್ನೂ ಕಾಲನೆಂಬ ಬಾಣಸಿಗ ಬೇಯಿಸುತ್ತಿದ್ದಾನೆ” ಎಂಬುದು ಧರ್ಮರಾಜ ಕೊಟ್ಟ ಉತ್ತರ.
ನಿಜಕ್ಕೂ ವಾರ್ತೆಯೆಂದರೇನು? ವರ್ತಮಾನದ ವಿವರಣೆಯೇ ಅಲ್ಲವೇ? ಎಲ್ಲ ಕಾಲದಲ್ಲಿಯೂ ನಮ್ಮೀ ಜಗತ್ತಿನಲ್ಲಿ...