(“ಮಹಾಭಾರತ”ದ ಹಿನ್ನೆಲೆಯಲ್ಲಿ “ಕರ್ಣಾಟಭಾರತಕಥಾಮಂಜರಿ”, “ಕೃಷ್ಣಾವತಾರ” ಮತ್ತು “ಪರ್ವ”ಗಳ ತೌಲನಿಕಚಿಂತನೆ)
ಕರ್ಣಾಟಭಾರತಕಥಾಮಂಜರಿ
Kumaravyasa_0.jpg
Kumaravyasa
ಕುಮಾರವ್ಯಾಸನ ಪ್ರತಿಭಾಫಲವಾದ ಈ ಕಾವ್ಯ ಕನ್ನಡದ ಅತ್ಯಂತ ಬೃಹತ್ತೂ ಮಹತ್ತೂ ಆದ ಕೃತಿಯೆಂದರೆ ಅತಿಶಯವಲ್ಲ. ಈ ಮುನ್ನವೇ ನಾವು ಕಂಡಂತೆ ಇದು ಮೂಲಭೂತವಾಗಿ ಕಥನಕಾವ್ಯ, ಅಂದರೆ ಇತಿವೃತ್ತಪ್ರಧಾನವಾಗಿ ಸಂದರ್ಭಗಳನ್ನೂ ಘಟನೆಗಳನ್ನೂ ಹೆಣೆದುಕೊಂಡು ಹೋಗುವುದರೊಟ್ಟಿಗೆ ವಕ್ರೋಕ್ತಿವೈಚಿತ್ರ್ಯಪ್ರಧಾನವಾದ ಕಾವ್ಯವನ್ನು ನಿರ್ಮಿಸುವುದು ಇಲ್ಲಿಯ ವಿಶೇಷ...
(“ಮಹಾಭಾರತ”ದ ಹಿನ್ನೆಲೆಯಲ್ಲಿ “ಕರ್ಣಾಟಭಾರತಕಥಾಮಂಜರಿ”, “ಕೃಷ್ಣಾವತಾರ” ಮತ್ತು “ಪರ್ವ”ಗಳ ತೌಲನಿಕಚಿಂತನೆ)
ಹಿನ್ನೆಲೆ
ಅರ್ಷಕಾವ್ಯಗಳೆಂದೂ ಇತಿಹಾಸಗಳೆಂದೂ ಹೆಸರಾದ ರಾಮಾಯಣ-ಮಹಾಭಾರತಗಳು ನಮ್ಮ ದೇಶದ ಸಾರಸ್ವತಲೋಕವನ್ನು ಪ್ರಭಾವಿಸಿದಂತೆ ಜಗತ್ತಿನ ಮತ್ತಿನ್ನಾವ ಪ್ರಾಚೀನಕಾವ್ಯಗಳೂ ಆಯಾ ಪ್ರಾಂತಗಳ ಸಾಹಿತ್ಯವನ್ನು ಪ್ರೇರಿಸಿಲ್ಲ. ಈ ಮಾತು ರಾಮಾಯಣ-ಮಹಾಭಾರತಗಳಿಂದ ಪ್ರಭಾವಿತವಾದ ಗೀತ-ನೃತ್ಯ-ನಾಟ್ಯ-ಚಿತ್ರ-ಶಿಲ್ಪಾದಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಹೆಚ್ಚೇನು, ನಮ್ಮ ದೇಶದ ಸಮಗ್ರಸಂಸ್ಕೃತಿಯೇ ಇವುಗಳಿಂದ ಉಜ್ಜೀವಿತವಾಗಿದೆ.
ಈ ಭೂಮಕಾವ್ಯಗಳ ಪೈಕಿ...