Nature
ನನ್ನ ಜಾತಕದಲ್ಲಿ ಯಾವ ಸಂಸ್ಥೆಯಲ್ಲಿಯೂ ಐದು ವರ್ಷಕ್ಕಿಂತ ಹೆಚ್ಚಾಗಿ ದುಡಿಯುವ ಯೋಗವಿಲ್ಲ ಎನಿಸುತ್ತದೆ. ಇದ್ದುದರಲ್ಲಿ ಭಾರತೀಯ ವಿದ್ಯಾಭವನದ ನೆರಳಿನಲ್ಲಿ ನಾನು ಐದು ವಸಂತಗಳ ಸಂತಸವನ್ನು ಕಂಡದ್ದೇ ಅತಿಶಯ. ಕಡೆಯ ವರ್ಷದಲ್ಲಿ ಆಡಳಿತದ ಮಾರ್ಪಾಟಿನ ಕಾರಣ ಅಲ್ಪ-ಸ್ವಲ್ಪದ ಇರುಸುಮುರುಸಾದರೂ ಅದನ್ನೆಲ್ಲ ಮರೆಸುವಂಥದ್ದು ಭವನದ ಬಾಳು. ನನಗೆ ಕಾಲೇಜಿನ ದಿನಗಳಿಂದಲೇ ಕುಲಪತಿ ಮುನ್ಷಿ ಅವರ ಸಾಹಿತ್ಯದ ಪರಿಚಯ ಇದ್ದಿತು. ಅಷ್ಟೇಕೆ, ಪ್ರೌಢಶಾಲೆಯಲ್ಲಿ ಇದ್ದಾಗಲೇ ಅವರ ‘ಭಗವಾನ್ ಕೌಟಿಲ್ಯ’ ಎಂಬ ಕಾದಂಬರಿಯ ಅನುವಾದವನ್ನು ಓದಿ ಹಿಗ್ಗಿದ್ದೆ. ಮೂಲದ ಸ್ವಾರಸ್ಯ...