ಭಾರತೀಯನೃತ್ಯಗಳಲ್ಲಿ ಶೈಲಿಯ ಅನನ್ಯತೆಯನ್ನು ಕುರಿತ ಸಮಸ್ಯೆ
ಪ್ರತಿಯೊಂದು ಕಲೆಗೂ ತನ್ನದೇ ಆದ ಶೈಲಿಯಿರುತ್ತದೆ. ಅಷ್ಟೇಕೆ, ಪ್ರತಿಯೊಬ್ಬ ವ್ಯಕ್ತಿಗೂ ಜೀವಿಗೂ ಅಸ್ತಿತ್ವಕ್ಕೂ ತನ್ನದೇ ಆದ ಶೈಲಿಯಿರುವಾಗ ವ್ಯಕ್ತಿಜೀವನಸಮಷ್ಟಿಯೆನಿಸಿದ ಸಮಾಜವೊಂದರ ವಿಕಸಿತವೂ ಮನೋಹರವೂ ಆದ ಕಲಾಪ್ರಕಾರವೊಂದಕ್ಕೆ ಶೈಲಿಯ ಅನನ್ಯತೆಯಿಲ್ಲವೆಂದರೆ ಹೇಗೆ? ಹೀಗಾಗಿಯೇ ನರ್ತನಕಲೆಗೂ ಶೈಲಿಗಳ ಅನನ್ಯರೂಪಗಳುಂಟು; ಮತ್ತಿದಕ್ಕೆ ಭಾರತೀಯನೃತ್ಯಗಳು ಅಪವಾದವೇನಲ್ಲ.