ವಿಶ್ವವ್ಯಾಪಿ ದೀಪಾವಳೀ
ಭಾರತೀಯರು ಹಬ್ಬಗಳನ್ನು ವ್ರತ, ಪರ್ವ, ಮತ್ತು ಉತ್ಸವಗಳೆಂದು ಪ್ರಾಯಿಕವಾಗಿ ಮೂರು ವರ್ಗಗಳಲ್ಲಿ ಕಂಡರಿಸಿದ್ದಾರೆ. ವ್ರತ ವೈಯಕ್ತಿಕವಾದದ್ದು. ಧರ್ಮ-ಮೊಕ್ಷಗಳಿಗೇ ಅಲ್ಲಿ ಪ್ರಾಧಾನ್ಯ. ನಿಯಮ-ನಿಷ್ಠೆಗಳ ಅಂತರ್ಮುಖತೆಗೇ ಅಲ್ಲಿ ಅಗ್ರತಾಂಬೂಲ. ಪರ್ವ ಕೌಟುಂಬಿಕವಾದದ್ದು. ಇಲ್ಲಿ ಅರ್ಥ-ಕಾಮಗಳೂ ಹದವಾಗಿ ಕಲೆಯುತ್ತವೆ. ನಿಯಮ-ನಿಷ್ಠೆಗಳಿಗೆ ಹಾಳತವಾದ ಆತ್ಮೀಯತೆ, ಅಚ್ಚು-ಕಟ್ಟುಗಳೂ ಕೂಡಿಕೊಳ್ಳುತ್ತವೆ. ಉತ್ಸವವು ಸಾಮೂಹಿಕ(ಸಾಮಾಜಿಕ)ವಾದದ್ದು.