Literature

ಗೋವಿಂದ ಪೈಗಳ ಕಾವ್ಯದ ಮರುನೋಟ - 6

ಉಪಗುಪ್ತ ಮತ್ತು ವಾಸವದತ್ತೆಯರನ್ನು ಕುರಿತ ಕಥನಕವನವೊಂದರಲ್ಲಿ ಪೈಗಳು ವಾಸವದತ್ತೆಯ ಮೇಲೆ ಬಂದೆರಗಿದ ಕೊಲೆಯ ಆರೋಪವನ್ನು ಬಣ್ಣಿಸುತ್ತಾರೆ. ಈ ಪ್ರಸಂಗದಲ್ಲಿ ಊರಿನ ಜನರು ಗಾಳಿಸುದ್ದಿಗಳಿಗೆಲ್ಲ ದಿಕ್ಕುದೆಸೆಯನ್ನು ಕಲ್ಪಿಸಿ ಅವೆಲ್ಲ ಕಡೆಗೆ ವಾಸವದತ್ತೆಯೇ ಅಪರಾಧಿನಿ ಎಂಬತ್ತ ಬೆರಳು ಚಾಚುವ ಬಗೆಯನ್ನು ಹೀಗೆ ಕವನಿಸಿದ್ದಾರೆ:

ಸೂಚಿಸುತಿದೆಲ್ಲವೀ ಸುದ್ದಿ ವಾಸವದತ್ತೆ-

ಯನೆ, ಉದೀಚಿಯನೆಂತೊ ಸೂಜಿಗಲ್ಲಂತೆ (‘ವಾಸವದತ್ತೆ’, ಪು. ೨೭೦)

Jinasena

               Jinasena, the author of Pūrvapurāṇa, hailed from Karnataka. He composed this work in an age when the central tenets of literary aesthetics were taking shape, and so his observations merit close study. Let us examine a few relevant verses from Pūrvapurāṇa.

                    Jinasena held that poetry is a vehicle of religion. The foremost aim of poetry, according to him, is the dissemination of dharma

त एव कवयो लोके त एव च विचक्षणाः।

Critical Appreciation of Prahasanas - Part 17

We move on to the next work, Hāsya-cūḍā-maṇi

Introduction

Hāsya-cūḍā-maṇi is a śuddha-prahasana consisting of two acts. In general prahasanas rarely go beyond one act. The title of the prahasana neither hints anything about the plot like Mattavilāsa nor it is a combination of the characters like Bhagavad-ajjukam. The title just reflects the confidence of the author when he declares it as the crest-jewel of humour. 

ಗೋವಿಂದ ಪೈಗಳ ಕಾವ್ಯದ ಮರುನೋಟ - 4

ಪರಂಪರೆಯ ಪರಿಜ್ಞಾನ ಮತ್ತು ಸಂಪ್ರದಾಯದ ಮುಂದುವರಿಕೆಯ ಜೊತೆಗೆ ಪ್ರಯೋಗಶೀಲತೆ ಹಾಗೂ ನೂತನ ಆವಿಷ್ಕಾರಗಳ ವಿಷಯದಲ್ಲಿ ಕೂಡ ಪೈಗಳಿಗೆ ಆಸ್ಥೆಯುಂಟು. ಇದಕ್ಕೆ ಅವರ ಛಂದೋನುಶೀಲನವೂ ಒಂದು ಸಮರ್ಥ ನಿದರ್ಶನ. ಆದಿಪ್ರಾಸದ ಪಾಲನೆ ಮತ್ತು ಅದರ ನಿರಾಸದೊಂದಿಗೆ ಪೈಗಳು ಅಲ್ಲಲ್ಲಿ ಸಾಂಪ್ರದಾಯಿಕ ವೃತ್ತಗಳನ್ನು ಹಿಗ್ಗಿಸುವ ಇಲ್ಲವೇ ಹೊಸ ಬಗೆಯ ರಚನೆಗೆ ಒಗ್ಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಗೋವಿಂದ ಪೈಗಳ ಕಾವ್ಯದ ಮರುನೋಟ - 3

ಪೈಗಳ ಕವಿತೆಯಲ್ಲಿ ಭಕ್ತಿಯ ಮತ್ತೊಂದು ಆಯಾಮವಾದ ಹೃದಯವಿಸ್ತಾರ, ಆತ್ಮನಿವೇದನೆ ಮತ್ತು ಭೂತಾನುಕಂಪೆಗಳನ್ನು ಕೂಡ ಗಮನಿಸಬಹುದು. ಅವರು ಮೇಲ್ನೋಟಕ್ಕೆ ಜಿಗುಟಾದ ಅಭಿಪ್ರಾಯಗಳನ್ನು ಹೊಂದಿದ ನಿರ್ಭೀತ ವಿದ್ವಾಂಸರೆಂದು ತೋರಿದರೂ ಅಂತರಂಗದಲ್ಲಿ ಅವರದು ಸಮಾರ್ದ್ರ ಮನಸ್ಸು. ಹೀಗಾಗಿ ಜಗತ್ತಿನಲ್ಲಿ ಎಲ್ಲಿ ನೋವು ಕಂಡರೂ ಎಲ್ಲಿ ಕಷ್ಟ ಕೆರಳಿದರೂ ಅವರ ಹೃದಯ ಕರಗುತ್ತದೆ, ಅವರ ಮನಸ್ಸು ಮರುಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಹಲವು ಕವಿತೆಗಳಿವೆ. ತುರ್ಕಿಯ ಪರವಾಗಿ ಅವರು ಮಾಡಿದ ಪ್ರಾರ್ಥನೆಯನ್ನು ಈಗಾಗಲೇ ನೋಡಿದ್ದೇವೆ. ‘ಹೊಲೆಯನು ಯಾರು?’ (ಪು. ೧೬) ಎಂಬ ಕವಿತೆಯಲ್ಲಿ ಜನ್ಮಕ್ಕಂಟಿ ಬಂದ ಹೊಲೆ ಎಂಬುದು ಇಲ್ಲವೆಂಬ ಧೀರ ದರ್ಶನಕ್ಕೆ ತಮ್ಮ ದನಿಯನ್ನು ಪೈಗಳು ಜೋಡಿಸುತ್ತಾರೆ. ‘ಅಣು ಬಾಂಬು’ (ಪು. ೧೯೩), ‘ಹಿರೋಶಿಮಾ’ (ಪು.

ಗೋವಿಂದ ಪೈಗಳ ಕಾವ್ಯದ ಮರುನೋಟ - 2

ವಸ್ತು

ಎಸ್. ಶಿವಾಜಿ ಜೋಯಿಸ್ ಅವರು ಸಂಪಾದಿಸಿಕೊಟ್ಟಿರುವ ಗೋವಿಂದ ಪೈಗಳ ಸಮಗ್ರ ಕವಿತೆಗಳ ಪ್ರಸ್ತಾವನೆಯನ್ನು ಕಂಡಾಗ ಅಲ್ಲಿ ಸುಮಾರು ನೂರೆಂಬತ್ತು ಕವಿತೆಗಳು ಅಡಕವಾಗಿವೆಯೆಂದು ತಿಳಿಯುತ್ತದೆ; ಇವಲ್ಲದೆ ಮತ್ತೂ ಒಂಬತ್ತು ಅನುಪಲಬ್ಧ ಕವಿತೆಗಳಿದ್ದಂತೆಯೂ ತಿಳಿಯುತ್ತದೆ.[1] ಸದ್ಯದ ಅಧ್ಯಯನವು ಪೂರ್ವೋಕ್ತ ಸಂಗ್ರಹವನ್ನಲ್ಲದೆ ‘ಹೆಬ್ಬೆರಳು’ ಎಂಬ ಏಕಾಂಕನಾಟಕವನ್ನೂ ಸೇರಿಸಿಕೊಂಡಿದೆ. ಇದಕ್ಕೆ ಕಾರಣ ಈ ರೂಪಕದ ಸಂಪೂರ್ಣ ಪದ್ಯಾತ್ಮಕತೆಯೇ. ಆದರೆ ಈ ಅವಲೋಕನದಲ್ಲಿ ಪೈಗಳು ಮಾಡಿದ ಗೀತಾಂಜಲಿಯ ಗದ್ಯಾನುವಾದವಾಗಲಿ, ಅವರ ಇಂಗ್ಲಿಷ್ ಮತ್ತು ಕೊಂಕಣಿ ಕವನಗಳಾಗಲಿ ಪರಿಗಣನೆಗೆ ಬಂದಿಲ್ಲ.

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 10

ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ದ್ರುತವಿಲಂಬಿತವೃತ್ತದ ಅತ್ಯಧಿಕ ಪ್ರಯೋಗವನ್ನು ‘ಕವಿರಾಜಮಾರ್ಗ’ದಲ್ಲಿ ಕಾಣಬಹುದು. ಅಲ್ಲಿ ಒಟ್ಟಾರೆ ಹತ್ತು ಪದ್ಯಗಳು ಈ ವೃತ್ತದಲ್ಲಿ ನಿಬದ್ಧವಾಗಿವೆ. ಇವಲ್ಲದೆ ಇಲ್ಲಿ ಬಳಕೆಗೊಂಡ ಹಲವು ಅಪೂರ್ವ ಬಂಧಗಳ ಪೈಕಿ ‘ವೀರ’, ‘ಮಣಿಭೂಷಣ’ ಮತ್ತು ‘ಮಂಗಳ’ ಎಂಬವು ದ್ರುತವಿಲಂಬಿತವೃತ್ತವನ್ನು ಅತಿಶಯವಾಗಿ ಹೋಲುತ್ತವೆ. ಕವಿರಾಜಮಾರ್ಗವು ಉಪಲಬ್ಧ ಕನ್ನಡಗ್ರಂಥಗಳ ಪೈಕಿ ಅತ್ಯಂತ ಪ್ರಾಚೀನವಾದುದು ಮಾತ್ರವಲ್ಲದೆ ಕಾವ್ಯಲಕ್ಷಣಗ್ರಂಥವೂ ಆಗಿರುವ ಕಾರಣ ಇಲ್ಲಿ ಬಳಕೆಗೊಂಡ ಕೆಲವು ವೃತ್ತಗಳು ಹೆಚ್ಚಿನ ವಿವೇಚನೆಗೆ ಅರ್ಹವಾಗಿವೆ.

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 9

{ದ್ರುತವಿಲಂಬಿತ} ದ್ರುತವಿಲಂಬಿತವನ್ನು ಸಂತುಲಿತಮಧ್ಯಾವರ್ತಗತಿಯ ಹಂದರದ ಮೇಲೆ ಹಬ್ಬಿದ ವೃತ್ತವಲ್ಲಿಗಳ ಜೊತೆಗೆ ಸೇರಿಸಿಕೊಳ್ಳುವುದು ಸ್ವಲ್ಪ ಚಿಂತ್ಯವೆನಿಸಬಹುದು. ಆದರೆ ಈ ಬಂಧದ ಹಾಸು-ಹೊಕ್ಕನ್ನು ಬಿಡಿಸಿ ನೋಡಿದರೆ ಈ ಸೇರ್ಪಡೆಯ ಔಚಿತ್ಯ ಸ್ಪಷ್ಟವಾಗುತ್ತದೆ.

ಮೊದಲಿಗೆ ದ್ರುತವಿಲಂಬಿತದ ಪ್ರಸ್ತಾರವನ್ನು ಪರಿಕಿಸೋಣ:

u u u – u u – u u – u –