ಶೇಷಣ್ಣನವರ ಜೀವನದ ಕಡೆಯ ದಶಕಗಳಲ್ಲಿ ಬಂದೆರಗಿದ ಆಘಾತವೆಂದರೆ ಅವರ ಧರ್ಮಪತ್ನಿ ಶಾರದಮ್ಮನವರ ವಿಸ್ಮೃತಿರೋಗ. ಎಷ್ಟೆಲ್ಲ ಸಂಪ್ರದಾಯದ ಹಾಡು, ಸ್ತೋತ್ರ, ಗೀತಗಳನ್ನು ವಾಚೋ ವಿಧೇಯವಾಗಿ ಇರಿಸಿಕೊಂಡಿದ್ದ ಅವರಿಗೆ ಒಂದು ಅಕ್ಷರವನ್ನೂ ಮಾತನಾಡಲಾಗದಂಥ ಭೀಕರವಿಸ್ಮೃತಿ ಬಂದೆರಗಿತ್ತು. ಅವರಿಗೆ ತಮ್ಮ ದೇಹದ ಮೇಲೆಯೇ ನಿಯಂತ್ರಣವಿರುತ್ತಿರಲಿಲ್ಲ. ಮನೆಯಿಂದ ಹೊರಟರೆ ಮತ್ತೆ ಬರುವ ದಾರಿ ಗೊತ್ತಾಗುತ್ತಿರಲಿಲ್ಲ. ಅನುದಿನದ ಗೃಹಕೃತ್ಯಗಳಿರಲಿ, ವೈಯಕ್ತಿಕವಾದ ಕೆಲಸಗಳನ್ನು ನಿರ್ವಹಿಸಲು ಕೂಡ ಅರಿವಾಗುತ್ತಿರಲಿಲ್ಲ. ಇದೊಂದು ಬಗೆಯಲ್ಲಿ ಬೆಳೆದ ಮಗುವಿನ ಪರಿಸ್ಥಿತಿ. ಇಂಥ...
‘ಸಂಧ್ಯಾದರ್ಶನ’ವನ್ನು ಬರೆದ ಆಚೀಚಿನ ವರ್ಷಗಳಲ್ಲಿ ನನಗೆ ನಮ್ಮ ಕರ್ಮಕಾಂಡಗಳ ರೂಪ-ಸ್ವರೂಪಗಳನ್ನು ಪರಿಷ್ಕರಿಸಬೇಕು, ಸುಧಾರಣೆಗಳನ್ನು ಮಾಡಬೇಕು, ಜಳ್ಳು-ಕಾಳುಗಳನ್ನು ಬೇರ್ಪಡಿಸಿ ನಮ್ಮ ಕಾಲಕ್ಕೂ ಶ್ರುತಿ-ಸೂತ್ರ-ಸ್ಮೃತಿಗಳ ಆಂತರ್ಯಕ್ಕೂ ಒಪ್ಪಿಗೆಯಾಗುವಂಥ ಶುದ್ಧವಾದ ವ್ಯವಸ್ಥೆಗಳನ್ನು ಹವಣಿಸಬೇಕೆಂಬ ಹಂಬಲ ಹೆಚ್ಚಾಗಿತ್ತು. ಇದನ್ನು ಕುರಿತು ಶೇಷಣ್ಣನವರೊಡನೆ ಸಾಕಷ್ಟು ಹೇಳಿಕೊಂಡಿದ್ದೆ. ಆಗೆಲ್ಲ ಅವರು ನನ್ನ ವಿಚಾರಧಾರೆಯನ್ನು ಮೆಚ್ಚುವುದಲ್ಲದೆ ತಮ್ಮ ದೃಷ್ಟಿ-ಧೋರಣೆಗಳನ್ನೂ ಹೇಳುತ್ತಿದ್ದರು. ಅಂಥ ಒಂದು ಸಂವಾದದಲ್ಲಿ ಒಮ್ಮೆ ನಾನು ಮದುವೆ-ಮುಂಜಿಗಳಂಥ...
ನಾನು ಊಹಿಸುವಂತೆ ಅವರ ಮನಃಸಿದ್ಧತೆ ಬಹುಕಾಲದ ಮುನ್ನವೇ ಆಗಿತ್ತಾದರೂ ವ್ಯಾಸಂಗಸಿದ್ಧತೆಗೆ ಹೆಚ್ಚಿನ ಅನುಕೂಲ ಬಂದದ್ದು ನಿವೃತ್ತಿಯ ಬಳಿಕ. ದಿಟವೇ, ಅವರು ನಿವೃತ್ತರಾದಾಗ ಮಗಳ ಮದುವೆಯ ಬಾಧ್ಯತೆ ಉಳಿದಿತ್ತು, ಮಗನ ವಿದ್ಯಾಭ್ಯಾಸ ಪೂರ್ಣವಾಗಬೇಕಿತ್ತು. ಇದಕ್ಕಾಗಿಯೇ ಶೇಷಣ್ಣನವರು ನಿವೃತ್ತಿಯ ಬಳಿಕವೂ ಕೆಲವು ಕಾಲ ದುಡಿಯಬೇಕಾಗಿ ಬಂತು. ಈ ಎಲ್ಲ ಬಾಧ್ಯತೆಗಳು ತೀರಿದ ಬಳಿಕ ಹೆಂಡತಿ-ಮಕ್ಕಳನ್ನು ಕೂಡಿಸಿಕೊಂಡು ಕೇಳಿದರಂತೆ:
“ನಾನು ತಿಳಿದ ಮಟ್ಟಿಗೆ ಮನೆಯ ಬಾಧ್ಯತೆಯನ್ನು ನೆರವೇರಿಸಿದ್ದೇನೆ. ಕೈಗೆ ಬರುವ ನಿವೃತ್ತಿವೇತನ ಮನೆವಾರ್ತೆಗೆ ಸಾಕು. ಪಾರ್ಥನೂ ಅವನ...
ಇಂದಿಗೆ ಸುಮಾರು ಇಪ್ಪತ್ತೊಂಬತ್ತು-ಮೂವತ್ತು ವರ್ಷಗಳ ಹಿಂದೆ, ಅಂದರೆ ೧೯೮೯-೯೦ರ ಆಸುಪಾಸಿನಲ್ಲಿ, ಬೆಂಗಳೂರಿನ ರಾಜಾಜಿನಗರನದಲ್ಲಿಯ ಕುಮಾರವ್ಯಾಸಮಂಟಪದ ಯಾವುದೋ ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳನ್ನು ನಾನು ಮೊದಲ ಬಾರಿ ನೋಡಿದ ನೆನಪು. ಅನಂತರ ಸ್ವಲ್ಪದ ಅಂತರದಲ್ಲಿಯೇ ಮತ್ತೆ ಬ್ರಾಹ್ಮಣಮಹಾಸಭೆಯ ಹಲಕೆಲವು ಕಾರ್ಯಕ್ರಮಗಳಲ್ಲಿ, ಶಂಕರಜಯಂತಿಯ ಕಾರ್ಯಕ್ರಮಗಳಲ್ಲಿ ಅವರು ಕಂಡಿದ್ದರು. ಆದರೆ ಹೆಚ್ಚಿನ ಪರಿಚಯ ಮತ್ತು ಬಳಕೆ ಆದದ್ದು ಶ್ರೀಪರಮಾನಂದಭಾರತೀಸ್ವಾಮಿಗಳು ಆಯೋಜಿಸಿದ ಮೊತ್ತಮೊದಲ ಗಾಯತ್ರೀಮಹಾಯಾಗದ ಸಂದರ್ಭದಲ್ಲಿ. ಇದೇ ಸಮಯದಲ್ಲಿ...