...
HomeArticles Posted by Shatavadhani Dr. R. Ganesh

Author: Shatavadhani Dr. R. Ganesh

ಇಂಥ ಎಷ್ಟೋ ಸಂಗತಿಗಳನ್ನು ಧ್ವನಿಸುವಂಥ ಬೆಲೆಯುಳ್ಳ ವಿವರಣೆಯನ್ನು ಅಭಿನವಗುಪ್ತ ನೀಡಿದ್ದಾನೆ. ಅವನ ಪ್ರಕಾರ ಉಭಯಧರ್ಮಿಗಳೂ ಲೋಕಸ್ವಭಾವದಲ್ಲಿಯೇ ಪರಮಾರ್ಥತಃ ನೆಲೆಗೊಂಡಿವೆ. ಲೋಕವೆಂದರೆ ನಮ್ಮ ಸುತ್ತಣ ಜಗತ್ತು. ಇದು ಅಲ್ಲಿಯ ಜನಜೀವನದ ಸಕಲಾಂಶಗಳನ್ನೂ ಒಳಗೊಂಡಿದೆ. ಹೀಗಾಗಿ “ಪ್ರವೃತ್ತಿ”ಯಲ್ಲಿ ಸಾಮಾನ್ಯವಾಗಿ ತೋರಿಕೊಳ್ಳುವ ಎಲ್ಲ ಸಂಗತಿಗಳೂ ಇಲ್ಲಿಗೆ ಅನ್ವಯಿಸುತ್ತವೆ. ಆದುದರಿಂದ “ಲೋಕಧರ್ಮಿ”ಯು ಕೆಲವೊಂದಂಶಗಳಲ್ಲಿ “ಪ್ರವೃತ್ತಿ”ಗೆ ನಿಕಟಬಂಧು. ನಾಟ್ಯವು ಬಲುಮಟ್ಟಿಗೆ ಲೋಕಾಶ್ರಿತವಾದ ಕಾರಣ “ಲೋಕಧರ್ಮಿ”ಯೊಂದೇ ಪಾರಮ್ಯವನ್ನು ತಾಳುವುದೆಂದು ಹೇಳಬಹುದಾದರೂ ರಂಜನೋತ್ಕರ್ಷಕ್ಕಾಗಿ ರಂಗಪ್ರಯೋಗದ ನಿರ್ವಾಹಾನುಕೂಲತೆಗಾಗಿ ಅನುಸರಿಸುವ ಕವಿ-ನಟಪ್ರಸಿದ್ಧಸಮಯರೂಪದ ನಾಟ್ಯಧರ್ಮಿಗೂ

Read More

ಪ್ರವೃತ್ತಿಗಳು ಪ್ರವೃತ್ತಿಗಳೆಂದರೆ ಕಲಾನಿರ್ಮಾಣಕಾಲದಲ್ಲಿ ರಸೋಚಿತವಾಗಿ ಒದಗಿಬರಬಲ್ಲ ಪ್ರಾದೇಶಿಕವೈಶಿಷ್ಟ್ಯಗಳೆಂದು ಸ್ಥೂಲವಾಗಿ ಹೇಳಬಹುದು. ಇವನ್ನು ವೃತ್ತಿಗಳೊಡನೆ ಜೊತೆಗೂಡಿಸಿದಾಗ ದೇಶೀ ಮತ್ತು ಮಾರ್ಗಗಳ ಸಂವಾದವನ್ನೇ ಕಾಣಬಹುದು. ವೃತ್ತಿಗಳು ಮುಖ್ಯವಾಗಿ ವೇಷ-ಭಾಷೆಗಳಿಗೂ ನಯ-ವಿನಯಗಳಿಗೂ ಸಂಬಂಧಿಸಿವೆ. ಈ ಕಾರಣದಿಂದ ಇವು ಕಲೆಯ ಕೇಂದ್ರಭೂತವಾದ ಸಾತ್ತ್ವಿಕಾಭಿನಯ ಅಥವಾ ಸಾತ್ತ್ವತೀವೃತ್ತಿಯಿಂದ ಸ್ವಲ್ಪ ದೂರವಿದ್ದರೂ ಔಚಿತ್ಯಪೂರ್ಣವಾಗಿ ಬಳಕೆಗೊಂಡಾಗ ಅವು ಸತ್ತ್ವವನ್ನೇ ಪೋಷಿಸುತ್ತವೆಂಬುದು ಗಮನಾರ್ಹ. ಕಾವ್ಯದಲ್ಲಿ ಶಬ್ದಾರ್ಥಾಲಂಕಾರಗಳ ಸ್ಥಾನ ಹೇಗೋ ಹೆಚ್ಚುಕಡಮೆ ಹಾಗೆಯೇ ನಾಟ್ಯದಲ್ಲಿ ಪ್ರವೃತ್ತಿಗಳ ನೆಲೆ. ಹೀಗಾಗಿಯೇ ಇವು ತತ್ತ್ವತಃ ಅನಂತಸಂಖ್ಯೆಯವಾಗಬಹುದು. ಅಲಂಕಾರಗಳ

Read More

ಕಲೆಗಿರುವ ಪ್ರಮಾಣಗಳು ನಮ್ಮ ಶಾಸ್ತ್ರಪ್ರಪಂಚದಲ್ಲಿ ಮೊದಲು ಆರಂಭವಾಗುವ ಚರ್ಚೆಯೇ ಸಂಜ್ಞೆ, ಪರಿಭಾಷೆ ಮತ್ತು ಪ್ರಮಾಣ-ಪ್ರಮೇಯಗಳನ್ನು ಕುರಿತದ್ದು. ಕಲಾಮೀಮಾಂಸೆಯೂ ಒಂದು ಶಾಸ್ತ್ರವಾದ ಕಾರಣ ಅಲ್ಲಿ ಈ ಚರ್ಚೆಗಳು ಅನಿವಾರ್ಯ. ಈಗಾಗಲೇ ನಾವು ಸಂಜ್ಞೆ ಮತ್ತು ಪರಿಭಾಷೆಗಳ (ಸ್ಥಾಯಿಭಾವ, ವಿಭಾವ, ಅನುಭಾವ, ವ್ಯಭಿಚಾರಿಭಾವ, ಶಬ್ದ, ಅರ್ಥ, ಧ್ವನಿ, ವಕ್ರತೆ, ಔಚಿತ್ಯ, ರಸ ಇತ್ಯಾದಿ) ಪರಿಚಯವನ್ನು ಅವುಗಳ ಬಳಕೆಯಿಂದಲೇ ಮಾಡಿಕೊಂಡಿದ್ದೇವೆ. ಇನ್ನು ಪ್ರಮೇಯವಂತೂ ಕಲೆಯೇ ಆಗಿದೆ. ಇಲ್ಲಿ ಕಲೆಯನ್ನು ಅಳೆಯುವುದೆಂದರೆ ಅದರ ಆಸ್ವಾದವಲ್ಲದೆ ಬೇರಲ್ಲ. ಇನ್ನುಳಿದಿರುವುದು

Read More

ಲಕ್ಷಣವಿವೇಚನೆ ಭರತಮುನಿಯು ನಾಟ್ಯಶಾಸ್ತ್ರದ ಹದಿನಾರನೆಯ ಅಧ್ಯಾಯದಲ್ಲಿ ಯಾವುದೇ ರೂಪಕದ ಪಾಠ್ಯರಚನೆಗೆ ಅನುಕೂಲಿಸುವ ಸಾಹಿತ್ಯವಿದ್ಯಾಪ್ರಧಾನವಾದ ಕೆಲವೊಂದು ಅಂಶಗಳ ಚರ್ಚೆಗೆ ತೊಡಗುತ್ತಾನೆ. ಇವುಗಳ ಪೈಕಿ ತುಂಬ ಮುಖ್ಯವಾದದ್ದು ಮೂವತ್ತಾರು ಲಕ್ಷಣಗಳ ನಿರೂಪಣೆ. ಇವನ್ನು ವಿದ್ವಾಂಸರು ಅಲಂಕಾರ, ಗುಣ, ವಕ್ರತೆ ಮತ್ತು ಧ್ವನಿಪ್ರಕಾರಗಳಿಗೂ ಬೀಜಭೂತವಾದ ಕಾವ್ಯತತ್ತ್ವಗಳೆಂದು ಗುರುತಿಸಿದ್ದಾರೆ. ಯದ್ಯಪಿ ಇವುಗಳ ಸಂಯೋಜನೆಯಲ್ಲಿ ವ್ಯವಸ್ಥಿತವಾದ ಕ್ರಮವಾಗಲಿ, ಪರಿಷ್ಕಾರವಾಗಲಿ ಇಲ್ಲದಿದ್ದರೂ ಇವುಗಳಲ್ಲಿ ಅಡಗಿರುವ ತತ್ತ್ವ ಮತ್ತು ಅಲಂಕಾರಶಾಸ್ತ್ರದ ಮುಂದಿನ ಬೆಳೆವಣಿಗೆಯ ಹಿನ್ನೆಲೆಯಲ್ಲಿ ಇವು ನಮಗೆ ಧ್ವನಿಸುವ ಬಗೆಯನ್ನು ಕಂಡಾಗ

Read More