ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 32
ನಾವಿನ್ನು “ಶಿವಲೀಲಾರ್ಣವ”ದತ್ತ ತಿರುಗಬಹುದು. ಇದರಲ್ಲಿ ನೀಲಕಂಠದೀಕ್ಷಿತನ ವ್ಯಾಪಕವಾದ ಕಾವ್ಯಚಿಂತನೆ ಕಂಡುಬರುತ್ತದೆ. ಮೊದಲಿಗೇ ಕವಿಯು ಧ್ವನಿಯ ಮಹತ್ತ್ವವನ್ನು ಸಾರುತ್ತಾನೆ:
ಸಾಹಿತ್ಯವಿದ್ಯಾಜಯಘಂಟಯೈವ
ಸಂವೇದಯಂತೇ ಕವಯೋ ಯಶಾಂಸಿ |
ಯಥಾ ಯಥಾಸ್ಯಾಂ ಧ್ವನಿರುಜ್ಜಿಹೀತೇ
ತಥಾ ತಥಾ ಸಾರ್ಹತಿ ಮೂಲ್ಯಭೇದಾನ್ || (೧.೮)