...
HomePosts Tagged "s l bhyrappa"

s l bhyrappa Tag

(“ಮಹಾಭಾರತ”ದ ಹಿನ್ನೆಲೆಯಲ್ಲಿ “ಕರ್ಣಾಟಭಾರತಕಥಾಮಂಜರಿ”, “ಕೃಷ್ಣಾವತಾರ” ಮತ್ತು “ಪರ್ವ”ಗಳ ತೌಲನಿಕಚಿಂತನೆ) ಕರ್ಣಾಟಭಾರತಕಥಾಮಂಜರಿ [caption id="attachment_12329" align="alignleft" width="153"] Kumaravyasa[/caption] ಕುಮಾರವ್ಯಾಸನ ಪ್ರತಿಭಾಫಲವಾದ ಈ ಕಾವ್ಯ ಕನ್ನಡದ ಅತ್ಯಂತ ಬೃಹತ್ತೂ ಮಹತ್ತೂ ಆದ ಕೃತಿಯೆಂದರೆ ಅತಿಶಯವಲ್ಲ. ಈ ಮುನ್ನವೇ ನಾವು ಕಂಡಂತೆ ಇದು ಮೂಲಭೂತವಾಗಿ ಕಥನಕಾವ್ಯ, ಅಂದರೆ ಇತಿವೃತ್ತಪ್ರಧಾನವಾಗಿ ಸಂದರ್ಭಗಳನ್ನೂ ಘಟನೆಗಳನ್ನೂ ಹೆಣೆದುಕೊಂಡು ಹೋಗುವುದರೊಟ್ಟಿಗೆ ವಕ್ರೋಕ್ತಿವೈಚಿತ್ರ್ಯಪ್ರಧಾನವಾದ ಕಾವ್ಯವನ್ನು ನಿರ್ಮಿಸುವುದು ಇಲ್ಲಿಯ ವಿಶೇಷ. ಈ ಕಾರಣದಿಂದಲೇ ಹೆಚ್ಚಿನ ಪದ್ಯಗಳು ಸ್ವಯಂಪೂರ್ಣವಾಗಿಯೇ ಸೊಗಯಿಸುತ್ತವೆ; ಕಥನಪ್ರವಾಹಕ್ಕೂ ಸಾಕಷ್ಟು ಯೋಗದಾನವನ್ನೀಯುತ್ತವೆ. ಸಾಮಾನ್ಯವಾಗಿ ಯಾವುದೇ

Read More

(“ಮಹಾಭಾರತ”ದ ಹಿನ್ನೆಲೆಯಲ್ಲಿ “ಕರ್ಣಾಟಭಾರತಕಥಾಮಂಜರಿ”, “ಕೃಷ್ಣಾವತಾರ” ಮತ್ತು “ಪರ್ವ”ಗಳ ತೌಲನಿಕಚಿಂತನೆ) ಹಿನ್ನೆಲೆ ಅರ್ಷಕಾವ್ಯಗಳೆಂದೂ ಇತಿಹಾಸಗಳೆಂದೂ ಹೆಸರಾದ ರಾಮಾಯಣ-ಮಹಾಭಾರತಗಳು ನಮ್ಮ ದೇಶದ ಸಾರಸ್ವತಲೋಕವನ್ನು ಪ್ರಭಾವಿಸಿದಂತೆ ಜಗತ್ತಿನ ಮತ್ತಿನ್ನಾವ ಪ್ರಾಚೀನಕಾವ್ಯಗಳೂ ಆಯಾ ಪ್ರಾಂತಗಳ ಸಾಹಿತ್ಯವನ್ನು ಪ್ರೇರಿಸಿಲ್ಲ. ಈ ಮಾತು ರಾಮಾಯಣ-ಮಹಾಭಾರತಗಳಿಂದ ಪ್ರಭಾವಿತವಾದ ಗೀತ-ನೃತ್ಯ-ನಾಟ್ಯ-ಚಿತ್ರ-ಶಿಲ್ಪಾದಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಹೆಚ್ಚೇನು, ನಮ್ಮ ದೇಶದ ಸಮಗ್ರಸಂಸ್ಕೃತಿಯೇ ಇವುಗಳಿಂದ ಉಜ್ಜೀವಿತವಾಗಿದೆ. ಈ ಭೂಮಕಾವ್ಯಗಳ ಪೈಕಿ ವೇದವ್ಯಾಸರ ದರ್ಶನವೆನಿಸಿದ ಮಹಾಭಾರತವು ಮಿಗಿಲಾದ ಪ್ರಭಾವವನ್ನು ಮಾಡಿರುವುದು ಅನುಭವವೇದ್ಯ. ದಿಟವೇ, ರಾಮಾಯಣ-ಭಾಗವತಗಳು ಮತ್ತು ಶಿವ-ಶಕ್ತಿಯರ ಪುರಾಣಕಥೆಗಳು ನಮ್ಮ ಜನತೆಯನ್ನು

Read More

ಭೈರಪ್ಪನವರ ಅಸ೦ಖ್ಯ ಪಾತ್ರ-ಸ೦ದರ್ಭಗಳ ವಾದಲಹರಿ-ವಿಚಾರವಲ್ಲರಿಗಳು ಅದೆಷ್ಟೋ ಬಾರಿ ನ್ಯಾಯದರ್ಶನದ ವಾದ, ಜಲ್ಪ, ವಿತ೦ಡಾಗಳ೦ಥ ಚರ್ಚೆಗಳಾಗಿ ಬೆಳೆಯುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ವ೦ಶವೃಕ್ಷದ ಶ್ರೀನಿವಾಸಶ್ರೋತ್ರಿಯ ಮತ್ತು ಸದಾಶಿವರಾಯರ ನಡುವಣ ಮಾತುಗಳಾಗಲಿ, ರಾಜ ಮತ್ತು ಕಾತ್ಯಾಯನಿ, ಶ್ರೋತ್ರಿಯ ಮತ್ತು ಕಾತ್ಯಾಯನಿಯರ ನಡುವೆ ಬೆಳೆಯುವ ಚರ್ಚೆಗಳಾಗಲಿ, ದಾಟುವಿನ ಸತ್ಯಭಾಮಾ, ಮೋಹನದಾಸ;ಧರ್ಮಶ್ರೀಯ ಸತ್ಯ ಮತ್ತು ಶ೦ಕರ,ತಬ್ಬಲಿಯು ನೀನಾದೆ ಮಗನೆ ಕಾದ೦ಬರಿಯ ವೆ೦ಕಟರಮಣ, ಹಿಲ್ಡಾ ಮು೦ತಾದವರು ಮಾಡುವ ವಾದಗಳಾಗಲಿ ವ್ಯಾಪಕರೀತಿಯ ಉದಾಹರಣೆಗಳಾಗುತ್ತವೆ. ವಿಶೇಷತ: ಭೈರಪ್ಪನವರು ತಮ್ಮ ಮೊದಮೊದಲ

Read More