...
HomePosts Tagged "padma subrahmanyam"

padma subrahmanyam Tag

ಅಭಿನವಗುಪ್ತನು ಅಭಿನಯಹಸ್ತಗಳ ವಿನಿಯೋಗವನ್ನು ಕುರಿತಂತೆ ತುಂಬ ವಿಶದವಾಗಿ ವ್ಯಾಖ್ಯಾನವನ್ನು ರಚಿಸಿದ್ದಾನೆ. ಇಲ್ಲಿಯ ವಿವರಗಳು ಯಾರಿಗಾದರೂ ಬೆರಗನ್ನು ತಾರದಿರವು. ಅವನು ಇಷ್ಟಕ್ಕೇ ಸೀಮಿತನಾಗದೆ ಈ ಬಗೆಯ ಹಸ್ತಗಳ ವಿನಿಯೋಗಕ್ಕೆ ಮತ್ತೆಷ್ಟೋ ಎಡೆಗಳನ್ನು ಕಾಣುತ್ತಾನೆ. ಅಂಥ ಒಂದು ಸಂದರ್ಭವು ಚಾರಿಗಳನ್ನು ನಿರ್ವಹಿಸುವಾಗ ಯಾವ ಬಗೆಯಲ್ಲಿ ಹಸ್ತಗಳನ್ನು ಹಿಡಿಯುವುದು ಸಮುಚಿತವೆಂದು ವಿವೇಚಿಸುವುದರಲ್ಲಿದೆ. ಆ ಪ್ರಕಾರ ಅಭಿನವಗುಪ್ತನು ನಾಟ್ಯದಲ್ಲಿ ಅರ್ಧಚಂದ್ರಹಸ್ತವನ್ನೂ ನೃತ್ತದಲ್ಲಿ “ಪಕ್ಷಪ್ರದ್ಯೋತ” ಮತ್ತು “ಪಕ್ಷವಂಚಿತ”ಗಳನ್ನೂ ಒಳಿತೆಂದು ಸೂಚಿಸುತ್ತಾನೆ: “ಅರ್ಧಚಂದ್ರೋ ನಾಟ್ಯೇ ನೃತ್ತೇ ತು ಪಕ್ಷಪ್ರದ್ಯೋತೌ ಪಕ್ಷವಂಚಿತಾವಪಿ”

Read More

ಇಂದು ನಾವರಿತಂತೆ ಭಾರತೀಯಮೂರ್ತಿಶಿಲ್ಪದ ಇತಿಹಾಸವು ಸುಮಾರು ಐದು ಸಹಸ್ರಮಾನಗಳಷ್ಟು ಪರಂಪರೆಯನ್ನು ಹೊಂದಿದೆ. ಸಿಂಧು-ಸರಸ್ವತೀಸಂಸ್ಕೃತಿಯಿಂದ ಮೊದಲ್ಗೊಂಡು ಮೌರ್ಯ, ಕುಷಾಣ, ಸಾತವಾಹನ, ಗುಪ್ತ, ವಾಕಾಟಕ, ಮೌಖರಿ, ಚಾಲುಕ್ಯ, ಹೊಯ್ಸಳ, ಪಲ್ಲವ, ಚೋಳ, ಪಾಲ, ಸೇನ, ಪರಮಾರ, ಚಂದೇಲ, ಕಳಿಂಗ ಮುಂತಾದ ಅನೇಕಶಾಖೆಗಳನ್ನು ವಿಭಿನ್ನಕಾಲಘಟ್ಟಗಳಲ್ಲಿ ಕಾಣಬಹುದು. ಇದಾದರೂ ಒಂದು ಸ್ಥೂಲವಿಭಾಗ ಮಾತ್ರ. ಇವುಗಳೊಳಗೆ ಮತ್ತೆಷ್ಟೋ ಅವಾಂತರಶಾಖೆಗಳೂ ಶೈಲಿಗಳೂ ಇರುವುದು ತಜ್ಞವೇದ್ಯ. ಆದರೆ, ಈ ಎಲ್ಲ ಶಾಖೋಪಶಾಖೆಗಳಲ್ಲಿ ಎದ್ದು ತೋರುವಂತೆ ಭಾರತೀಯಶಿಲ್ಪವೆಂಬ ಅನನ್ಯಲಕ್ಷಣವನ್ನು ನಾವು ನಿರಪವಾದವೆಂಬಂತೆ ಗಮನಿಸಲು

Read More

ಈಚೆಗಷ್ಟೇ ನಮ್ಮನ್ನಗಲಿದ ಬಾಲಮುರಳೀಕೃಷ್ಣ ಅವರ ಪ್ರತಿಭೆ ಮತ್ತು ಪಾಂಡಿತ್ಯಗಳನ್ನು ನೆನೆದಾಗ, ಮತ್ತು ಅವರ ಸಾಧನೆ ಮತ್ತು ವ್ಯಕ್ತಿತ್ವಗಳನ್ನು ಗಮನಿಸಿದಾಗ, ಊಹಿಸಲಾಗದ ಒಂದು ದಂತಕಥೆಯೇ ನಮ್ಮ ಮುಂದೆ ಸರಿದುಹೋದಂತೆ ಭಾಸವಾಗುತ್ತದೆ. ಅವರ ವ್ಯಕ್ತಿತ್ವ ಎಷ್ಟು ವಿಲಕ್ಷಣವೋ ವಿಶಿಷ್ಟವೋ ಆಕರ್ಷಕವೋ ಅದಕ್ಕಿಂತಲೂ ತುಂಬ ಮಿಗಿಲಾದದ್ದು, ಲೋಕಾಕರ್ಷಕವಾದದ್ದು ಮತ್ತು ಚಿಂತನೆಗೆ ಅರ್ಹವಾದಂಥದ್ದು ಅವರ ಕಲೆ. ಒಂದು ಮಾತಿನಲ್ಲಿ ಹೇಳುವುದಾದರೆ, ಸಂಗೀತವನ್ನು ಸರ್ವಜನಪ್ರಿಯವಾಗಿ, ಸರ್ವಜನಮನೋಭಿರಾಮವಾಗಿ ಮಾಡಿದವರು ಬಾಲಮುರಳಿ ಎಂದರೆ ಅತಿಶಯವಲ್ಲ. ಮತ್ತೂ ಮುಂದುವರೆದು ಹೇಳುವುದಾದರೆ, ಕರ್ನಾಟಕಸಂಗೀತಕ್ಕೆ

Read More