...
HomePosts Tagged "Natya"

Natya Tag

ರಸಪಾರಮ್ಯ ರಸವನ್ನು ಕುರಿತು ಅಭಿನವಗುಪ್ತನ ಒಳನೋಟಗಳು ಅಪಾರ, ಅಮೋಘ. ಈ ಬಗೆಗೆ ಸುವಿಪುಲವಾದ ಚರ್ಚೆ-ಸಂಶೋಧನೆಗಳೂ ಕಳೆದ ನೂರು ವರ್ಷಗಳಲ್ಲಿ ಜಗತ್ತಿನಾದ್ಯಂತ ಸಾಗಿವೆ. ಹೀಗಾಗಿ ನಾವಿಲ್ಲಿ ಹೆಚ್ಚಿನ ವಿಸ್ತರವನ್ನು ಮಾಡಬೇಕಿಲ್ಲ. ಆದರೆ, ರಸದ ಮಹತ್ತ್ವವನ್ನು ಅದೆಷ್ಟೆಲ್ಲ ಬಗೆಯಲ್ಲಿ ಅಭಿನವಗುಪ್ತನು ವಿಸ್ತರಿಸಿದ್ದಾನೆಂಬುದನ್ನು ಸ್ವಲ್ಪವಾದರೂ ಮನಗಾಣದಿದ್ದಲ್ಲಿ ಪ್ರಸ್ತುತಲೇಖನವೇ ಅಪ್ರಸ್ತುತವಾದೀತೆಂಬ ಅಂಜಿಕೆಯಿಂದ ಸ್ವಲ್ಪ ಚರ್ಚಿಸಬೇಕಾಗಿದೆ. ಕೇವಲ “ರಸಾಧ್ಯಾಯ”ದಲ್ಲಿ ಮಾತ್ರವಲ್ಲದೆ ಅಭಿನವಭಾರತಿಯ ಆದ್ಯಂತ ಅಲ್ಲಲ್ಲಿ ರಸಮಾಹಾತ್ಮ್ಯವನ್ನು ಅಭಿನವಗುಪ್ತನು ಸಾರುತ್ತಲೇ ಬಂದಿದ್ದಾನೆ. ನಾಟ್ಯೋತ್ಪತ್ತಿ, ತಾಂಡವಲಕ್ಷಣ ಮತ್ತು ಅದಕ್ಕೆ ಬೇಕಾದ ಆಂಗಿಕಪರಿಷ್ಕಾರ, ಪೂರ್ವರಂಗವಿಧಾನ,

Read More

ಯತ್ಸಾರಸ್ವತರಸಸಿದ್ಧ ಏವ ಶುದ್ಧಃ ಸರ್ವೋऽದ್ಧಾ ವಿಲಸತಿ ವಾಚ್ಯವಾಚಕಾತ್ಮಾ | ಕಾಶ್ಮೀರೀ ಜಯತಿ ಜಗದ್ಧಿತಾವತಾರಃ ಸ ಶ್ರೀಮಾನಭಿನವಗುಪ್ತದೇಶಿಕೇಂದ್ರಃ || —ಗುರುನಾಥಪರಾಮರ್ಶಃ ಈ ಮುನ್ನವೇ ನಾವು “ಧ್ವನ್ಯಾಲೋಕಲೋಚನ”ದ ಕೆಲವೊಂದು ವೈಶಿಷ್ಟ್ಯಗಳನ್ನು ಗಮನಿಸುವಾಗ “ಅಭಿನವಭಾರತಿ” ಅಥವಾ “ನಾಟ್ಯವೇದವಿವೃತಿ”ಯ ಕೇಂದ್ರಭೂತಮಹತ್ತ್ವವನ್ನೂ ಪರಾಮರ್ಶಿಸಿದ ಕಾರಣ ವಿಷಯಕ್ಕೆ ನೇರವಾಗಿ ಪ್ರವೇಶಿಸಬಹುದು. ಭರತಮುನಿಯ “ನಾಟ್ಯಶಾಸ್ತ್ರ”ಕ್ಕೆ ಅವೆಷ್ಟೋ ವ್ಯಾಖ್ಯಾನಗಳು ಇದ್ದುವಾದರೂ ಸದ್ಯಕ್ಕೆ ಉಳಿದಿರುವುದು ಅಭಿನವಗುಪ್ತನ ವಿವೃತಿಯೊಂದೇ. ಇದು ಮೂಲಗ್ರಂಥದ ಸರಳವಿವರಣೆಯಷ್ಟೇ ಆಗದೆ ಸ್ವತಂತ್ರಮಹಾಗ್ರಂಥವೊಂದರ ಎಲ್ಲ ಆಯಾಮಗಳನ್ನೂ ತಳೆದ ಉದ್ಘಕೃತಿ. ಇದರ ಗುಣ-ಗಾತ್ರಗಳ ಘನತೆ ಎಷ್ಟೆಂದರೆ ಇಂದಿಗೂ—ಪ್ರಕೃತಲೇಖಕನೂ ಸೇರಿದಂತೆ—ಯಾವೊಬ್ಬ

Read More