...
HomePosts Tagged "Dushyanta"

Dushyanta Tag

ನಾವಿನ್ನು ಶಕುಂತಲೆಯ ಪ್ರಣಯಪತ್ರದತ್ತ ತಿರುಗಬಹುದು. ಆಕಸ್ಮಿಕವಾಗಿ ಆಶ್ರಮಕ್ಕೆ ಬಂದ ದುಷ್ಯಂತನನ್ನು ಕಂಡು ಶಕುಂತಲೆ ಮನಸೋತಿದ್ದಾಳೆ. ಅವನಾದರೂ ಈಕೆಯಲ್ಲಿ ನಿರ್ಭರಾನುರಾಗವನ್ನು ಹೊಂದಿದ್ದಾನೆ. ಆದರೆ ಇಬ್ಬರಿಗೂ ತಮ್ಮ ಪ್ರಣಯವು ಏಕಮುಖವೇನೋ ಎಂಬ ಅಳುಕುಂಟು. ಈ ಕಾರಣದಿಂದಲೇ ಅವರಿಗೆ ತೀವ್ರವಿರಹವೇದನೆ. ಸ್ವಭಾವಸುಕುಮಾರಿಯಾದ ಶಕುಂತಲೆಯು ತನ್ನ ಈ ಪ್ರಥಮಪ್ರಣಯಪಾರವಶ್ಯದಿಂದಲೂ ತತ್ಫಲಿತವಾದ ಅದಮ್ಯವಿರಹದಿಂದಲೂ ಎಣೆಮೀರಿ ಬಳಲಿದ್ದಾಳೆ. ಕಣ್ವಾಶ್ರಮದ ಮಾಲಿನೀನದಿಯ ತೀರದಲ್ಲಿ ಅವಳ ಸಖಿಯರು ಕೋಮಲಕಮಲದಳಗಳ ಶಿಶಿರಶಯ್ಯೆಯನ್ನೂ ಕಲ್ಪಿಸಿದ್ದಾರೆ. ಆದರೆ ಈ ಎಲ್ಲ ತಾಪೋಪಶಾಂತಿಪ್ರಕಲ್ಪಗಳೂ ನಿಷ್ಪ್ರಯೋಜಕವಾಗಿವೆ. ಆಗ ಗೆಳತಿಯರು

Read More

ಪ್ರೀತಿ-ಪ್ರೇಮಗಳ ಲೋಕದಲ್ಲಿ ಪ್ರಣಯಪತ್ರಗಳ ಸ್ಥಾನ ಅನನ್ಯವಾದದ್ದು. ಲಿಪಿಯೇ ಇಲ್ಲದ ಕಾಲದಿಂದ ಮೊದಲ್ಗೊಂಡು ಇಂದಿನ ಇ-ಮೇಲ್ ಮತ್ತು ವಾಟ್ಸಾಪ್ ಗಳಂಥ ಅತ್ಯಾಧುನಿಕಕಾಲದವರೆಗೆ ಪ್ರಣಯನಿವೇದನೆಯು ಭಾಷಾಮಾಧ್ಯಮದಲ್ಲಿ ಹಾಯ್ದು ಬಂದಿರುವುದು ಸರ್ವವಿದಿತ. ಅಂದಿನ ದಮಯಂತಿ, ರುಕ್ಮಿಣಿ, ರಾಮ-ಸೀತೆಯರ ಮೌಖಿಕಸಂದೇಶದಿಂದ ಮೊದಲಾಗಿ ಉತ್ತರಕಾಲದಲ್ಲಿ ಲಿಪಿನಿಬದ್ಧವಾದ ಚಾಕ್ಷುಷಸಂದೇಶಗಳ ಕಾಲವನ್ನು ದಾಟಿ, ವರ್ತಮಾನದ ಪುನರ್ಮೌಖಿಕ-ಚಾಕ್ಷುಷಮಾಧ್ಯಮಕ್ಕೆ ಸಲ್ಲುವ ಸೆಲ್ಫೋನ್-ಸ್ಕೈಪ್ ಗಳ ವರೆಗೆ ಪ್ರಣಯನಿರೂಪಣೆಯು ಪ್ರೇಮಿಗಳ ನಡುವೆ ಬಿಡುವಿಲ್ಲದೆ ಬೆಳೆದುಬಂದಿದೆಯಾದರೂ ಸದ್ಯಕ್ಕೆ ನಮ್ಮ ಲೇಖನದ ವ್ಯಾಪ್ತಿಯಲ್ಲಿ ಮೌಖಿಕಸಂದೇಶವನ್ನು ಪಕ್ಕಕ್ಕಿಟ್ಟು ಪತ್ರಸಂದೇಶಕ್ಕೆ ಮಾತ್ರ

Read More