...
HomePosts Tagged "Bhatta Tauta"

Bhatta Tauta Tag

ಸಾಹಿತ್ಯದಲ್ಲಿ ದೃಶ್ಯಕಾವ್ಯದ ಮೇಲ್ಮೆ ಅಭಿನವಭಾರತಿಯ ಮೊದಲಿಗೇ ದೃಶ್ಯಕಾವ್ಯದ ಮೇಲ್ಮೆಯನ್ನು ಅಭಿನವಗುಪ್ತನು ಹೇಳಿದ್ದಾನೆ. ಈ ಭಾವವನ್ನು ಕೃತಿಯ ಆದ್ಯಂತ ಅಲ್ಲಲ್ಲಿ ಬಿತ್ತರಿಸಿದ್ದಾನೆ ಕೂಡ. ವಿಶೇಷತಃ “ರಸಾಧ್ಯಾಯ”ದಲ್ಲಿ ಈ ಸಂಗತಿಯನ್ನು ಮತ್ತೆ ಪ್ರಸ್ತಾವಿಸುತ್ತಾನೆ. ಅಲ್ಲದೆ ಈ ಬಗೆಯಲ್ಲಿ ದೃಶ್ಯಕಾವ್ಯದಲ್ಲಿರುವ ರಸಪಾರಮ್ಯಕ್ಕೆ ಕಾರಣವನ್ನೂ ಹೇಳುತ್ತಾನೆ. ಮುಖ್ಯವಾಗಿ ಇಲ್ಲಿ ಚತುರ್ವಿಧಾಭಿನಯಗಳೂ ಸಮುಚಿತವಾದ ವೃತ್ತಿ-ಪ್ರವೃತ್ತಿಗಳೂ ಸೇರಿರುತ್ತವೆ; ಸಹೃದಯರಿಗೆ ಪ್ರತ್ಯೇಕವಾಗಿ ಕಲ್ಪಿಸಿಕೊಳ್ಳುವ ಶ್ರಮವಿಲ್ಲದೆಯೇ ವಿಭಾವಾನುಭಾವಸಾಮಗ್ರಿಯು ಇಂದ್ರಿಯಗೋಚರವಾಗುತ್ತದೆ. ಇಲ್ಲೆಲ್ಲ ತನ್ನ ಗುರುವಾದ ಭಟ್ಟತೌತನ ಪಾಠದ ಫಲವಂತಿಕೆಯನ್ನು ಚೆನ್ನಾಗಿ ಕಾಣಿಸಿದ್ದಾನೆ: “ವಸ್ತುತಸ್ತು ದಶರೂಪಕ

Read More

ಯತ್ಸಾರಸ್ವತರಸಸಿದ್ಧ ಏವ ಶುದ್ಧಃ ಸರ್ವೋऽದ್ಧಾ ವಿಲಸತಿ ವಾಚ್ಯವಾಚಕಾತ್ಮಾ | ಕಾಶ್ಮೀರೀ ಜಯತಿ ಜಗದ್ಧಿತಾವತಾರಃ ಸ ಶ್ರೀಮಾನಭಿನವಗುಪ್ತದೇಶಿಕೇಂದ್ರಃ || —ಗುರುನಾಥಪರಾಮರ್ಶಃ ಈ ಮುನ್ನವೇ ನಾವು “ಧ್ವನ್ಯಾಲೋಕಲೋಚನ”ದ ಕೆಲವೊಂದು ವೈಶಿಷ್ಟ್ಯಗಳನ್ನು ಗಮನಿಸುವಾಗ “ಅಭಿನವಭಾರತಿ” ಅಥವಾ “ನಾಟ್ಯವೇದವಿವೃತಿ”ಯ ಕೇಂದ್ರಭೂತಮಹತ್ತ್ವವನ್ನೂ ಪರಾಮರ್ಶಿಸಿದ ಕಾರಣ ವಿಷಯಕ್ಕೆ ನೇರವಾಗಿ ಪ್ರವೇಶಿಸಬಹುದು. ಭರತಮುನಿಯ “ನಾಟ್ಯಶಾಸ್ತ್ರ”ಕ್ಕೆ ಅವೆಷ್ಟೋ ವ್ಯಾಖ್ಯಾನಗಳು ಇದ್ದುವಾದರೂ ಸದ್ಯಕ್ಕೆ ಉಳಿದಿರುವುದು ಅಭಿನವಗುಪ್ತನ ವಿವೃತಿಯೊಂದೇ. ಇದು ಮೂಲಗ್ರಂಥದ ಸರಳವಿವರಣೆಯಷ್ಟೇ ಆಗದೆ ಸ್ವತಂತ್ರಮಹಾಗ್ರಂಥವೊಂದರ ಎಲ್ಲ ಆಯಾಮಗಳನ್ನೂ ತಳೆದ ಉದ್ಘಕೃತಿ. ಇದರ ಗುಣ-ಗಾತ್ರಗಳ ಘನತೆ ಎಷ್ಟೆಂದರೆ ಇಂದಿಗೂ—ಪ್ರಕೃತಲೇಖಕನೂ ಸೇರಿದಂತೆ—ಯಾವೊಬ್ಬ

Read More