...
HomePosts Tagged "Abhinavagupta"

Abhinavagupta Tag

“ಲೋಚನ”ದ ಕೆಲವೊಂದು ಮಹತ್ತ್ವಪೂರ್ಣಸಂಗತಿಗಳು ಆನಂದವರ್ಧನನು ತಾನು ಪ್ರತಿಪಾದಿಸಿದ ಧ್ವನಿತತ್ತ್ವದ ಮೂರು ಸ್ತರಗಳಾದ ವಸ್ತು, ಅಲಂಕಾರ ಮತ್ತು ರಸಧ್ವನಿಗಳ ನಡುವೆ ಪ್ರಸ್ಫುಟವಾದ ತರ-ತಮವಿವೇಕವನ್ನು ಗ್ರಹಿಸಿದ್ದರೂ ಅದನ್ನು ಕಂಠೋಕ್ತವಾಗಿ ಸಾರಿರಲಿಲ್ಲ. ಈ ಕೆಲಸವನ್ನು ಅಭಿನವಗುಪ್ತನು ಧ್ವನಿಕಾರನ ಹೃದಯಜ್ಞನಾಗಿ ನಡಸಿರುವುದು ನಿಜಕ್ಕೂ ಮುದಾವಹ. ಈ ಮೂಲಕ ಸಾಮಾನ್ಯತಃ ಕಾವ್ಯಾತ್ಮವು ಧ್ವನಿಯೆಂದು ಧ್ವನ್ಯಾಲೋಕದ ಮೊದಲಿಗೆ ಒಕ್ಕಣೆಗೊಂಡಿದ್ದರೂ ವಸ್ತುತಃ ರಸವೇ ಕಾವ್ಯದ ಆತ್ಮವೆಂಬ ಪರಮಾರ್ಥವು ಉನ್ಮೀಲಿತವಾಯಿತು. ಅಲ್ಲದೆ ವಸ್ತ್ವಲಂಕಾರಧ್ವನಿಗಳು ಬಲುಮಟ್ಟಿಗೆ ಕಾವ್ಯವೊಂದರ ರಚನಾಸ್ತರದಲ್ಲಿ ತೋರಿಕೊಳ್ಳುವ ಚಮತ್ಕಾರ ಹಾಗೂ

Read More

ಸಕಲಶಾಸ್ತ್ರಸಮನ್ವಯಸೌರಭಂ ನಿಖಿಲಚಾರುಕಲಾರುಚಿರಂ ಚಿರಮ್ | ಅಭಿನವಾರ್ಥನಿಬೋಧನವಿಭ್ರಮಂ ತ್ವಭಿನವಂ ಪ್ರಣತೋऽಸ್ಮಿ ಸುಮೋಪಮಮ್ || ಪ್ರವೇಶಿಕೆ ಮಹಾಮಾಹೇಶ್ವರ ಅಭಿನಗುಪ್ತನು ಭಾರತೀಯಸೌಂದರ್ಯಶಾಸ್ತ್ರ ಹಾಗೂ ಕಾವ್ಯಮೀಮಾಂಸೆಗಳಿಗೆ ಕೊಟ್ಟ ಕೊಡುಗೆ ಲೋಕವಿಖ್ಯಾತ, ಸರ್ವದಾ ವಿದ್ವನ್ಮಾನಿತ ಮತ್ತು ಸಹೃದಯಶಿರೋಧಾರ್ಯ. ಮುಖ್ಯವಾಗಿ, ಇಂದು ಉಪಲಬ್ಧವಿರುವ ಆತನ “ಅಭಿನವಭಾರತೀ” ಹಾಗೂ “ಧ್ವನ್ಯಾಲೋಕಲೋಚನ”ಗಳು ಯಾವುದೇ ದೇಶ-ಕಾಲಗಳ ಕಲಾಸೌಂದರ್ಯಜಿಜ್ಞಾಸುಗಳಿಗೆ ಅನಿವಾರ್ಯಾಲಂಬನಗಳು. ಈತನು ಕಲಾಮೀಮಾಂಸೆಯನ್ನು ಕುರಿತು ಯಾವುದೇ ಸ್ವತಂತ್ರಗ್ರಂಥವನ್ನು ರಚಿಸದಿದ್ದರೂ ಭರತ ಮತ್ತು ಆನಂದವರ್ಧನರ ಮೇರುಕೃತಿಗಳಾದ ನಾಟ್ಯಶಾಸ್ತ್ರ ಮತ್ತು ಧ್ವನ್ಯಾಲೋಕಗಳ ಸ್ವೋಪಜ್ಞವ್ಯಾಖ್ಯಾಗಳಿಂದಲೇ ಶಾಶ್ವತಮಹತ್ತ್ವವನ್ನು ಗಳಿಸಿದ್ದಾನೆ. ಅವನಿಗಿಂತ ಮುನ್ನ ಈ

Read More

ಪ್ರತಿಯೊಂದು ಕಲೆಗೂ ತನ್ನದೇ ಆದ ಶೈಲಿಯಿರುತ್ತದೆ. ಅಷ್ಟೇಕೆ, ಪ್ರತಿಯೊಬ್ಬ ವ್ಯಕ್ತಿಗೂ ಜೀವಿಗೂ ಅಸ್ತಿತ್ವಕ್ಕೂ ತನ್ನದೇ ಆದ ಶೈಲಿಯಿರುವಾಗ ವ್ಯಕ್ತಿಜೀವನಸಮಷ್ಟಿಯೆನಿಸಿದ ಸಮಾಜವೊಂದರ ವಿಕಸಿತವೂ ಮನೋಹರವೂ ಆದ ಕಲಾಪ್ರಕಾರವೊಂದಕ್ಕೆ ಶೈಲಿಯ ಅನನ್ಯತೆಯಿಲ್ಲವೆಂದರೆ ಹೇಗೆ? ಹೀಗಾಗಿಯೇ ನರ್ತನಕಲೆಗೂ ಶೈಲಿಗಳ ಅನನ್ಯರೂಪಗಳುಂಟು; ಮತ್ತಿದಕ್ಕೆ ಭಾರತೀಯನೃತ್ಯಗಳು ಅಪವಾದವೇನಲ್ಲ. ಜಗತ್ತಿನ ಅಸಂಖ್ಯನರ್ತನಪ್ರಕಾರಗಳ ಪೈಕಿ ಅತಿಹೆಚ್ಚಿನ ಸಂಖ್ಯೆಯ ಜಾನಪದ ಹಾಗೂ ಅಭಿಜಾತನರ್ತನಗಳ ಸಾಂಪ್ರದಾಯಿಕಪರಂಪರೆ ಉಳಿದಿರುವುದು ನಮ್ಮ ದೇಶದಲ್ಲಿಯೇ. ಮತ್ತೂ ಸ್ಪಷ್ಟವೂ ಶಾಸ್ತ್ರೀಯವೂ ಆದ ರೀತಿಯಲ್ಲಿ ಹೇಳುವುದಾದರೆ ಅಸಂಖ್ಯದೇಶೀನರ್ತನಗಳು ನಮ್ಮ ದೇಶದ ಹೆಮ್ಮೆಯಾಗಿವೆ

Read More

अपर्याप्तमुदाकारामामपर्यायतमास्मिताम् । प्रपद्ये सकलास्वादां निष्कलां रसभारतीम् ॥ पूर्वपीठिका तदिदं ‘रसाध्याय’संज्ञितस्य कस्यचन ग्रन्थस्य सारासारविवेचनार्थं समायोजनम् । तथापि नास्माभिरस्यैकस्य मीमांसने मनः प्रवर्ततेतराम् । यत ईदृशा आक्षेपविक्षेपा बहोः कालादारभ्य वर्तमाना एव विद्वज्जगति । नेदमपूर्वं किञ्चिन्नाप्यभिनवम् । अन्यच्च नात्र काप्यस्मदीयानस्मदीयविभेदव्यपदेशोऽपि लगति । यतः पुरा हि रसस्यानुमानिकतां लोलुपतां सुखदुःखात्मकतां च कथयद्भिः कथाकृद्भिः स्वकीयं मूलच्छेदं पाण्डित्यमस्मिन्नेव भारते देशे

Read More