...
Home2017January

January 2017

V ರಂಗರೂಪಕವು (stage play) ಪ್ರಧಾನವಾಗಿ  ಆಂಗಿಕ-ವಾಚಿಕಾಭಿನಯಗಳ ಪ್ರಾಧಾನ್ಯದಿಂದ ಮೂಡುವ ಸಾತ್ತ್ವಿಕಾಭಿನಯವನ್ನು ಆಶ್ರಯಿಸಿ ಕಲೆಯನ್ನು ಸೃಜಿಸುತ್ತದೆ, ಇಲ್ಲಿ ಆಹಾರ್ಯವು (ವೇಷ-ಭೂಷಣ-ಪರಿಕರ-ರಂಗಸಜ್ಜಿಕೆ ಇತ್ಯಾದಿ) ತುಂಬ ಸರಳ, ಸಾಂಕೇತಿಕ. ಆದರೆ ಯವನಿಕಾರೂಪಕವು (screen play) ಹಾಗಲ್ಲ. ಇದು ಆಹಾರ್ಯವನ್ನು ತುಂಬ ವ್ಯಾಪಕವಾದ ರೀತಿಯಲ್ಲಿ ಬಳಸಿಕೊಳ್ಳುವುದಲ್ಲದೆ  ಆಂಗಿಕ-ವಾಚಿಕಗಳನ್ನೂ ಯಂತ್ರಗಳ ಮೂಲಕ ಗ್ರಹಿಸಿ ಪುನಾರೂಪಿಸುವ ಕಾರಣ ಇವುಗಳಿಗೆ ಬೇರೆಯೇ ಆದ ಬೆಡಗು ಒದಗುತ್ತದೆ. ಮುಖ್ಯವಾಗಿ ಬಿಂಬಗ್ರಾಹಿಯ (camera) ಮೂಲಕ ದೃಶ್ಯ-ಚಲನೆಗಳನ್ನೂ ಧ್ವನಿಗ್ರಾಹಿಯ (sound recorder) ಮೂಲಕ ಶಬ್ದ-ನಾದಗಳನ್ನೂ ಗ್ರಹಿಸಿ,

Read More

IV ಇದಿಷ್ಟೂ ಈ ಮಹಾಕಾವ್ಯದ ಇಡಿಯಾದ ಸ್ವರೂಪಸೌಂದರ್ಯವನ್ನು ಕುರಿತ ಪುಟ್ಟ ಪರಿಚಯವಾಯಿತು. ಇನ್ನುಳಿದದ್ದು ಇಂಥ ಸಮಗ್ರಸೌಂದರ್ಯಕ್ಕೆ ಒದಗಿ ಬಂದ ಬಿಡಿಯಾದ ಚೆಲುವುಗಳ ವಿಶದೀಕರಣ. ಇದು ದಿಟಕ್ಕೂ ಕಷ್ಟ. ಏಕೆಂದರೆ ಇಂಥ ಪರಿಚಯಕ್ಕೆ ಕುಮಾರಸಂಭವಕಾವ್ಯಸಮಸ್ತದ ಸೂಕ್ತಿಸರ್ವಸ್ವವನ್ನೂ ಇಲ್ಲಿ ತಂದು ಜೋಡಿಸಬೇಕಾದೀತು. ಈ ಮಹಾಕೃತಿಯಲ್ಲಿ ನಮ್ಮ ಆಲಂಕಾರಿಕರು ಹೇಳುವ ಲಕ್ಷಣ, ಗುಣ, ರೀತಿ, ಅಲಂಕಾರ, ವಕ್ರತೆ, ಧ್ವನಿ, ಔಚಿತ್ಯ ಮುಂತಾದ ಎಲ್ಲ ತೆರನಾದ ಕಾವ್ಯಶೋಭಾಕರಧರ್ಮಗಳೂ ಪ್ರಾಯಿಕವಾಗಿ ಪ್ರತಿಯೊಂದು ಪದ್ಯದಲ್ಲೆಂಬಂತೆ ಕೋಡಿವರಿದಿವೆ. ಇದೇ ರೀತಿ ಪಾಶ್ಚಾತ್ಯವಿಮರ್ಶನಪದ್ಧತಿಯ

Read More

I ಮಹಾಕವಿ ಕಾಳಿದಾಸನ ಮಹಾಕೃತಿ ಕುಮಾರಸಂಭವವನ್ನು ಕುರಿತು ಜಗತ್ತಿನ ಅನೇಕಭಾಷೆಗಳಲ್ಲಿ ಅಸಂಖ್ಯಗ್ರಂಥಗಳೂ ಲೇಖನಗಳೂ ಬಂದಿವೆ. ಆಂಶಿಕವಾಗಿ, ಸಮಗ್ರವಾಗಿ, ಗದ್ಯ-ಪದ್ಯಾತ್ಮಕವಾಗಿ ನೂರಾರು ಅನುವಾದಗಳೂ ಸಾವಿರಾರು ಅನುಕರಣಗಳೂ ಇದಕ್ಕುಂಟು. ಹೀಗೆ ಬೃಹತ್ತಾದ ಗ್ರಂಥಾಲಯಕ್ಕೂ ಹೆಚ್ಚಾಗಬಲ್ಲಷ್ಟು ಸಾಹಿತ್ಯವಿರುವ ಕುಮಾರಸಂಭವವನ್ನು ಕುರಿತು ಹೊಸತೆನ್ನುವುದನ್ನು ಹೇಳಬಯಸುವವರಿಗೆ ಎಂಟೆದೆ ಬೇಕು. ಆದರೆ ಇಂಥ ಮಹಾಕಾವ್ಯವನ್ನು ಕುರಿತು ಪುನರುಕ್ತಿಪ್ರಾಯವಾದ ಮಾತುಗಳನ್ನಾಡುವ ಬರೆಹವೂ ಮೂಲಾಶ್ರಯದ ಮಾಹಾತ್ಮ್ಯದ ಕಾರಣ ಅಷ್ಟಿಷ್ಟಾದರೂ ಸ್ವಾರಸ್ಯವನ್ನು ತಳೆಯದಿರಲಾರದೆಂಬ ನಚ್ಚಿನಿಂದ ಈ ಲಘುಲೇಖನವನ್ನು ಮೊದಲಿಡುವುದಾಗಿದೆ. ಕುಮಾರಸಂಭವಮಹಾಕಾವ್ಯದ ಕಥಾವಿಸ್ತರವನ್ನು ಹೀಗೆ ಸಂಗ್ರಹಿಸಬಹುದು: ದಕ್ಷಾಧ್ವರದಲ್ಲಿ ದಗ್ಧಳಾದ

Read More